See also 2fuse  3fuse  4fuse  5fuse
1fuse ಪ್ಯೂಸ್‍
ಸಕರ್ಮಕ ಕ್ರಿಯಾಪದ
  1. ಶಾಖದಿಂದ ಕರಗಿಸು.
  2. ಲೋಹಗಳು, ಸಜೀವ ಎಲುಬುಗಳು, ಸಂಸ್ಥೆಗಳು, ಸಂಗತಿಗಳು, ಉದ್ದೇಶಗಳು ಮೊದಲಾದವನ್ನು ಕರಗಿಸಿ ಒಂದುಗೂಡಿಸು, ಒಟ್ಟುಗೂಡಿಸು, ಬೆಸೆ, ಸೇರಿಸು, ಒಂದುಮಾಡು, ಸಂಯೋಜಿಸು, ಸಂಯೋಜನೆಮಾಡು: the author fuses these fragments into a whole ಗ್ರಂಥಕರ್ತನು ಈ ತುಂಡುಗಳನ್ನು ಅಖಂಡವಾಗಿ ಬೆಸೆಯುತ್ತಾನೆ.
ಅಕರ್ಮಕ ಕ್ರಿಯಾಪದ
  1. (ಶಾಖದಿಂದ) ಕರಗು; ದ್ರವಿಸು; ಕರಗಿಹೋಗು; ದ್ರವವಾಗು: the metal will fuse ಲೋಹವು ಕರಗುವುದು.
  2. (ಕರಗಿ) ಬೆಸೆದುಕೊ; ಒಂದಾಗು; ಒಟ್ಟುಗೂಡು; ಸೇರಿಕೊಳ್ಳು; ಸಂಯೋಜನೆಗೊಳ್ಳು; ಏಕೀಭವಿಸು; ಐಕ್ಯವಾಗು (ರೂಪಕವಾಗಿ ಸಹ): the passion for service must fuse with the passion for knowledge ಸೇವಾಕಾಂಕ್ಷೆಯು ಜ್ಞಾನಾಕಾಂಕ್ಷೆಯೊಡನೆ ಬೆಸೆದುಕೊಳ್ಳಬೇಕು.
See also 1fuse  3fuse  4fuse  5fuse
2fuse ಪ್ಯೂಸ್‍
ನಾಮವಾಚಕ

ಪ್ಯೂಸು; ಕರಗುತಂತಿ; ರಕ್ಷಾತಂತು; ವಿದ್ಯುನ್ಮಂಡಲದಲ್ಲಿ ಹರಿಯುತ್ತಿರುವ ಪ್ರವಾಹವು ಸುರಕ್ಷತೆಯ ಮಿತಿಯನ್ನು ಈರಿದಾಗ ಶಾಖದಿಂದ ಕರಗಿಹೋಗಿ ಮಂಡಲವನ್ನು ಕತ್ತರಿಸುವಂತೆ ಅದರಲ್ಲಿ ಸೇರಿಸುವ ಕರಗಬಲ್ಲ ತಂತಿ.

See also 1fuse  2fuse  4fuse  5fuse
3fuse ಪ್ಯೂಸ್‍
ಸಕರ್ಮಕ ಕ್ರಿಯಾಪದ

(ವಿದ್ಯುನ್ಮಂಡಲಕ್ಕೆ) ಪ್ಯೂಸುಹಾಕು; ಹ್ಯೂಸನ್ನು – ಜೋಡಿಸು, ಹಾಕು.

ಅಕರ್ಮಕ ಕ್ರಿಯಾಪದ

(ಉಪಕರಣ ಮೊದಲಾದವುಗಳ ವಿಷಯದಲ್ಲಿ) ಪ್ಯೂಸು ಹೋಗು; ಹ್ಯೂಸು ಕರಗುವುದರಿಂದ ಕೆಲಸ ನಿಲ್ಲು, ಮಾಡದಿರು, ಸ್ಥಗಿತವಾಗು.

See also 1fuse  2fuse  3fuse  5fuse
4fuse ಪ್ಯೂಸ್‍
ನಾಮವಾಚಕ
  1. ಜಾವಿಗೆ ಬತ್ತಿ; ಸರಬತ್ತಿ; ಸುಡುಬತ್ತಿ; ಹ್ಯೂಸು; ಬಂಡೆಯೊಡೆಯುವ ಸಿಡಿಮದ್ದು ಮೊದಲಾದವನ್ನು ಹೊತ್ತಿಸುವ, ದಾಹ್ಯವಸ್ತುಗಳನ್ನೊಳಗೊಂಡ ಕೊಳವೆ, ಬತ್ತಿ, ಸರ, ಮೊದಲಾದವು.
  2. ಜಾವಿಗೆ; ಹ್ಯೂಸು; ಸಿಡಿಗುಂಡು, ಮೈನು, ಮೊದಲಾದವುಗಳಲ್ಲಿ ಸೊಟಕವಸ್ತುವು ನಿರ್ದಿಷ್ಟ ಅವಧಿಯ ನಂತರ ಯಾ ಸಂಘರ್ಷಣೆಯ ನಂತರ ಯಾ ಕಾಂತೀಯ ಪ್ರಚೋದನೆಯ ಫಲವಾಗಿ ಸ್ಫೋಟಿಸುವಂತೆ ಅವಕ್ಕೆ ಬಂಧಿಸಿರುವ ಘಟಕ.
See also 1fuse  2fuse  3fuse  4fuse
5fuse ಪ್ಯೂಸ್‍
ಸಕರ್ಮಕ ಕ್ರಿಯಾಪದ

ಹ್ಯೂಸ್‍ ಜೋಡಿಸು; ಜಾವಿಗೆ ಬತ್ತಿಯನ್ನು ಜೋಡಿಸು; ಸರಬತ್ತಿಯನ್ನು ಸೇರಿಸು.