See also 2fur  3fur
1fur ಹರ್‍
ನಾಮವಾಚಕ
  1. (ಕೆಲವು ಪ್ರಾಣಿಗಳ) ತುಪ್ಪುಳು; ಮೃದು ರೋಮ; ನಯವಾದ ಮೋಟು ಮೆತು ಗೂದಲು (ಉದ್ದನೆಯ ಕೂದಲಲ್ಲ).
  2. (ಬಹುವಚನದಲ್ಲಿ) ತುಪ್ಪುಳು ಚರ್ಮಗಳು: (ಕೆಲವು ಪ್ರಾಣಿಗಳ) ತುಪ್ಪುಳುಳ್ಳ ಚರ್ಮಗಳು.
  3. (ಸಮೂಹಾರ್ಥ) ತುಪ್ಪುಳು ಪ್ರಾಣಿಗಳು.
  4. (ಅರ್ಮಿನ್‍, ಬೀವರ್‍, ಮೊದಲಾದ ಪ್ರಾಣಿಗಳ ಹದ ಮಾಡಿದ ತುಪ್ಪುಳು ಚರ್ಮದ) ಅಲಂಕಾರ ಪಟ್ಟಿ ಯಾ ಅಸ್ತರಿ.
  5. (ಅಲಂಕಾರ ಮೊದಲಾದವಕ್ಕೆ ಸಾಮಗ್ರಿಯಾಗಿ ಬಳಸುವ ಅಂಥ ಪ್ರಾಣಿಗಳ) ತುಪ್ಪುಳು; ಹರ್‍.
  6. (ಸಾಮಾನ್ಯವಾಗಿ ಬಹುವಚನದಲ್ಲಿ) ತುಪ್ಪುಳು ಉಡುಪು(ಗಳು); ತುಪ್ಪುಳಿನಿಂದ ಮಾಡಿದ ಯಾ ಅಂಚುಪಟ್ಟಿ ಕಟ್ಟಿದ ಉಡುಪು(ಗಳು).
  7. ಮೇಲ್ಮೈಗೆ ಹತ್ತಿಕೊಂಡ – ಹಕ್ಕು, ಪೊರೆ, ಪದರ, ಹೆಕ್ಕಳಿಕೆ (ಉದಾಹರಣೆಗೆ ವೈನಿನ ಹಕ್ಕು, ಪೊರೆ).
  8. (ಕಾಯಿಲೆಯಲ್ಲಿ) ನಾಲಗೆಯ ಮೇಲೆ ಕಟ್ಟುವ ಲೇಪ, ಪೊರೆ.
  9. ಕುದಿಪಾತ್ರೆ ಮೊದಲಾದವುಗಳ ಒಳಗಡೆ ಕಟ್ಟುವ ಹಕ್ಕು, ಪೊರೆ, ಚಕ್ಕೆ.
  10. (ವಂಶಲಾಂಛನ ವಿದ್ಯೆ) ತುಪ್ಪುಳು ಚಿತ್ರ; ಬಣ್ಣ ಹಾಕದ ಸಾದಾ ತಲದ ಯಾ ಮೇಲ್ಮೈ ಮೇಲೆ ಬಣ್ಣದಿಂದ ಚಿತ್ರಿಸಿದ ತುಪ್ಪುಳು.
ಪದಗುಚ್ಛ
  1. fur and feather ತುಪ್ಪುಳುಳ್ಳ ಪ್ರಾಣಿ ಪಕ್ಷಿಗಳು.
  2. hunt fur ಮೊಲಗಳ ಬೇಟೆಯಾಡು.
ನುಡಿಗಟ್ಟು

make the fur fly

  1. ಗದ್ದಲಮಾಡು; ರಂಪ ಮಾಡು; ಅವಾಂತರ ಮಾಡು; ರಾದ್ಧಾಂತ ಮಾಡು; ಕೋಲಾಹಲ ಎಬ್ಬಿಸು; ಗಲಿಬಿಲಿ ಮಾಡು: when the kids got mad they made the fur fly ಮಕ್ಕಳು ಹುಚ್ಚೆದ್ದು ಕುಣಿದಾಗ ಅವರು ರಂಪ ಮಾಡಿದರು.
  2. ಗಲಾಟೆ ಎಬ್ಬಿಸು; ತೊಂದರೆ ತರು; ಕ್ಷೋಭೆಯುಂಟುಮಾಡು; ಫಜೀತಿ ಎಬ್ಬಿಸು.
  3. (ಕೆಲಸಗಳನ್ನು) ಬೇಗ ಮಾಡು; ಶೀಘ್ರವಾಗಿ ಮಾಡು.
See also 1fur  3fur
2fur ಹರ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ furred, ವರ್ತಮಾನ ಕೃದಂತ furring).
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಭೂತಕೃದಂತದಲ್ಲಿ) (ಉಡುಪಿಗೆ) ತುಪ್ಪುಳಿನ ಹೊದಿಕೆ, ಅಸ್ತರಿ, ಅಲಂಕಾರಪಟ್ಟಿ, ಮೊದಲಾದವುಗಳನ್ನು ಒದಗಿಸು, ಹವಣಿಸು.
  2. (ಮುಖ್ಯವಾಗಿ ಭೂತಕೃದಂತದಲ್ಲಿ) (ಪ್ರಾಣಿಗೆ ಯಾ ಅದರ ಚರ್ಮಕ್ಕೆ) ತುಪ್ಪುಳನ್ನು ಹವಣಿಸು.
  3. (ಮುಖ್ಯವಾಗಿ ಭೂತಕೃದಂತದಲ್ಲಿ) (ವ್ಯಕ್ತಿಗೆ) ತುಪ್ಪುಳಿನ ಉಡುಪು ಹಾಕು.
  4. (ಮುಖ್ಯವಾಗಿ ಭೂತಕೃದಂತದಲ್ಲಿ) (ನಾಲಗೆಗೆ, ಕುದಿಪಾತ್ರೆಯ ಒಳಮೈಗೆ) ಲೇಪ ಕಟ್ಟಿಸು; ಹಕ್ಕು ಕಟ್ಟುವಂತೆ ಮಾಡು; ಚಕ್ಕೆಕಟ್ಟುವಂತೆ ಮಾಡು: a furred tongue ಲೇಪ ಕಟ್ಟಿದ ನಾಲಗೆ.
  5. ಕುದಿಪಾತ್ರೆಯಿಂದ ಹಕ್ಕು (ಚಕ್ಕೆ) ತೆಗೆದು ಶುದ್ಧಿಮಾಡು.
  6. (ಮರಗೆಲಸ) (ನೆಲಗಟ್ಟಿನ ಮರಗಳನ್ನು ಚಕ್ಕೆಚೂರು ತುರುಕಿ) ಮಟ್ಟಮಾಡು.
ಅಕರ್ಮಕ ಕ್ರಿಯಾಪದ

(ನಾಲಗೆಯ ಮೇಲೆ ಯಾ ಕುದಿಪಾತ್ರೆಯ ಒಳಮೈಯ ಮೇಲೆ) ಲೇಪಕಟ್ಟು; ಹಕ್ಕುಕಟ್ಟು; ಪೊರೆಕಟ್ಟು.

ಪದಗುಚ್ಛ
See also 1fur  2fur
3fur
ಸಂಕ್ಷಿಪ್ತ

furlong(s).