See also 2fur  3fur
1fur ಹರ್‍
ನಾಮವಾಚಕ
  1. (ಕೆಲವು ಪ್ರಾಣಿಗಳ) ತುಪ್ಪುಳು; ಮೃದು ರೋಮ; ನಯವಾದ ಮೋಟು ಮೆತು ಗೂದಲು (ಉದ್ದನೆಯ ಕೂದಲಲ್ಲ).
  2. (ಬಹುವಚನದಲ್ಲಿ) ತುಪ್ಪುಳು ಚರ್ಮಗಳು: (ಕೆಲವು ಪ್ರಾಣಿಗಳ) ತುಪ್ಪುಳುಳ್ಳ ಚರ್ಮಗಳು.
  3. (ಸಮೂಹಾರ್ಥ) ತುಪ್ಪುಳು ಪ್ರಾಣಿಗಳು.
  4. (ಅರ್ಮಿನ್‍, ಬೀವರ್‍, ಮೊದಲಾದ ಪ್ರಾಣಿಗಳ ಹದ ಮಾಡಿದ ತುಪ್ಪುಳು ಚರ್ಮದ) ಅಲಂಕಾರ ಪಟ್ಟಿ ಯಾ ಅಸ್ತರಿ.
  5. (ಅಲಂಕಾರ ಮೊದಲಾದವಕ್ಕೆ ಸಾಮಗ್ರಿಯಾಗಿ ಬಳಸುವ ಅಂಥ ಪ್ರಾಣಿಗಳ) ತುಪ್ಪುಳು; ಹರ್‍.
  6. (ಸಾಮಾನ್ಯವಾಗಿ ಬಹುವಚನದಲ್ಲಿ) ತುಪ್ಪುಳು ಉಡುಪು(ಗಳು); ತುಪ್ಪುಳಿನಿಂದ ಮಾಡಿದ ಯಾ ಅಂಚುಪಟ್ಟಿ ಕಟ್ಟಿದ ಉಡುಪು(ಗಳು).
  7. ಮೇಲ್ಮೈಗೆ ಹತ್ತಿಕೊಂಡ – ಹಕ್ಕು, ಪೊರೆ, ಪದರ, ಹೆಕ್ಕಳಿಕೆ (ಉದಾಹರಣೆಗೆ ವೈನಿನ ಹಕ್ಕು, ಪೊರೆ).
  8. (ಕಾಯಿಲೆಯಲ್ಲಿ) ನಾಲಗೆಯ ಮೇಲೆ ಕಟ್ಟುವ ಲೇಪ, ಪೊರೆ.
  9. ಕುದಿಪಾತ್ರೆ ಮೊದಲಾದವುಗಳ ಒಳಗಡೆ ಕಟ್ಟುವ ಹಕ್ಕು, ಪೊರೆ, ಚಕ್ಕೆ.
  10. (ವಂಶಲಾಂಛನ ವಿದ್ಯೆ) ತುಪ್ಪುಳು ಚಿತ್ರ; ಬಣ್ಣ ಹಾಕದ ಸಾದಾ ತಲದ ಯಾ ಮೇಲ್ಮೈ ಮೇಲೆ ಬಣ್ಣದಿಂದ ಚಿತ್ರಿಸಿದ ತುಪ್ಪುಳು.
ಪದಗುಚ್ಛ
  1. fur and feather ತುಪ್ಪುಳುಳ್ಳ ಪ್ರಾಣಿ ಪಕ್ಷಿಗಳು.
  2. hunt fur ಮೊಲಗಳ ಬೇಟೆಯಾಡು.
ನುಡಿಗಟ್ಟು

make the fur fly

  1. ಗದ್ದಲಮಾಡು; ರಂಪ ಮಾಡು; ಅವಾಂತರ ಮಾಡು; ರಾದ್ಧಾಂತ ಮಾಡು; ಕೋಲಾಹಲ ಎಬ್ಬಿಸು; ಗಲಿಬಿಲಿ ಮಾಡು: when the kids got mad they made the fur fly ಮಕ್ಕಳು ಹುಚ್ಚೆದ್ದು ಕುಣಿದಾಗ ಅವರು ರಂಪ ಮಾಡಿದರು.
  2. ಗಲಾಟೆ ಎಬ್ಬಿಸು; ತೊಂದರೆ ತರು; ಕ್ಷೋಭೆಯುಂಟುಮಾಡು; ಫಜೀತಿ ಎಬ್ಬಿಸು.
  3. (ಕೆಲಸಗಳನ್ನು) ಬೇಗ ಮಾಡು; ಶೀಘ್ರವಾಗಿ ಮಾಡು.