See also 2funk  3funk
1funk ಹಂಕ್‍
ನಾಮವಾಚಕ

(ಅಶಿಷ್ಟ)

  1. ದಿಗಿಲು; ಭಯ; ಗಾಬರಿ; ಬೆದರು; ಹೆದರಿಕೆ: the man was in such a funk that he would not use his legs ಅವನು ನಡೆಯಲಾರದಷ್ಟು ಗಾಬರಿಯಾಗಿದ್ದ.
  2. ಹೇಡಿ; ಹಂದೆ; ಪುಕ್ಕಲು; ಅಂಜುಬುರುಕ; ಪಿರಿಕಿ: he must be a bit of a funk to be afraid of an old lady ಒಬ್ಬ ಮುದಿ ಹೆಂಗಸಿಗೆ ಹೆದರಬೇಕಾದರೆ ಅವನು ಸ್ವಲ್ಪ ಅಂಜುಬುರುಕನಾಗಿರಬೇಕು.
  3. ಮಂಕು; ಖಿನ್ನತೆ: he has been in a funk ever since she deserted him ಅವಳು, ತನ್ನನ್ನು ತೊರೆದಾಗಿನಿಂದ ಅವನು ಖಿನ್ನನಾಗಿದ್ದಾನೆ.
ನುಡಿಗಟ್ಟು

blue funk ಅತಿ ಹೆದರಿಕೆ; ವಿಪರೀತ ದಿಗಿಲು; ಅತಿ ನಡುಕ; ಮಹಾಭೀತಿ.

See also 1funk  3funk
2funk ಹಂಕ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. (ಕೆಲಸ, ಜವಾಬ್ದಾರಿ) ತಪ್ಪಿಸಿಕೊಳ್ಳಲು ಪ್ರಯತ್ನಿಸು; ಜಾರಿಕೊ; ನುಣುಚಿಕೊ; ಕಳ್ಳಬೀಳು: if the colleges funk their job of turning out fully educated men ಪೂರ್ಣ ವಿದ್ಯಾವಂತರನ್ನಾಗಿ ರೂಪಿಸುವ ಕೆಲಸವನ್ನು ಕಾಲೇಜುಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ.
  2. ಹೆದರು; ಭಯಪಡು; ದಿಗಿಲು ಬೀಳು: it isn’t a natural thing for a baby to funk water ನೀರನ್ನು ಕಂಡರೆ ಹೆದರುವುದು ಮಗುವಿಗೆ ಸಹಜವಲ್ಲ.
  3. ಹೆದರಿಕೆ ಹುಟ್ಟಿಸು; ಭಯ ಪಡಿಸು; ದಿಗಿಲುಬೀಳಿಸು; ಬೆದರಿಸು; ಹೆದರಿಸು: the boxer funked at the superiority of his antagonist ಮುಷ್ಟಿಮಲ್ಲ ತನ್ನ ಎದುರಾಳಿಯ ಹಿರಿಮೆಯಿಂದ ದಿಗಿಲುಬಿದ್ದ.
ಅಕರ್ಮಕ ಕ್ರಿಯಾಪದ

ಹಿಂದೆಗೆ; ಹಿಂಜರಿ; ಹಿಮ್ಮೆಟ್ಟು; ಮುದುರಿಕೊ; ಹೆದರು; ಭಯಪಡು; ಹೇಡಿತನ ತೋರು: funk out of political strife ರಾಜಕೀಯ ಹೋರಾಟದಿಂದ ಹಿಂಜರಿದು ಹೊರಗಿರು.

See also 1funk  2funk
3funk ಹಂಕ್‍
ನಾಮವಾಚಕ
  1. ಸರಳ ಭಾವುಕ ಸಂಗೀತ; ಸಂಕೀರ್ಣವಲ್ಲದ ಭಾವುಕವಾದ ಸಂಗೀತ.
  2. (ಅಮೆರಿಕನ್‍ ಪ್ರಯೋಗ) ಕಟುವಾದ ವಾಸನೆ ಯಾ ಗಬ್ಬುನಾತ.