See also 1funk  3funk
2funk ಹಂಕ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. (ಕೆಲಸ, ಜವಾಬ್ದಾರಿ) ತಪ್ಪಿಸಿಕೊಳ್ಳಲು ಪ್ರಯತ್ನಿಸು; ಜಾರಿಕೊ; ನುಣುಚಿಕೊ; ಕಳ್ಳಬೀಳು: if the colleges funk their job of turning out fully educated men ಪೂರ್ಣ ವಿದ್ಯಾವಂತರನ್ನಾಗಿ ರೂಪಿಸುವ ಕೆಲಸವನ್ನು ಕಾಲೇಜುಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ.
  2. ಹೆದರು; ಭಯಪಡು; ದಿಗಿಲು ಬೀಳು: it isn’t a natural thing for a baby to funk water ನೀರನ್ನು ಕಂಡರೆ ಹೆದರುವುದು ಮಗುವಿಗೆ ಸಹಜವಲ್ಲ.
  3. ಹೆದರಿಕೆ ಹುಟ್ಟಿಸು; ಭಯ ಪಡಿಸು; ದಿಗಿಲುಬೀಳಿಸು; ಬೆದರಿಸು; ಹೆದರಿಸು: the boxer funked at the superiority of his antagonist ಮುಷ್ಟಿಮಲ್ಲ ತನ್ನ ಎದುರಾಳಿಯ ಹಿರಿಮೆಯಿಂದ ದಿಗಿಲುಬಿದ್ದ.
ಅಕರ್ಮಕ ಕ್ರಿಯಾಪದ

ಹಿಂದೆಗೆ; ಹಿಂಜರಿ; ಹಿಮ್ಮೆಟ್ಟು; ಮುದುರಿಕೊ; ಹೆದರು; ಭಯಪಡು; ಹೇಡಿತನ ತೋರು: funk out of political strife ರಾಜಕೀಯ ಹೋರಾಟದಿಂದ ಹಿಂಜರಿದು ಹೊರಗಿರು.