See also 2full  3full  4full
1full ಹುಲ್‍
ಗುಣವಾಚಕ
  1. (ಪೂರ್ತಿ, ಹಿಡಿಸುವಷ್ಟು) ತುಂಬಿದ; ತುಂಬಿಹೋದ; ಭರಿತ; ಸಂಪೂರ್ಣ; ತುಂಬ; ಭರ್ತಿ: full to the brim ತುಂಬಿಹೋಗುವಷ್ಟು. full to overflowing ತುಂಬಿ ಹರಿಯುವಷ್ಟು; ತುಂಬಿತುಳುಕುವಷ್ಟು.
  2. (ಹೃದಯ ಮೊದಲಾದವು) ಭಾವನೆಯಿಂದ ತುಂಬಿ ಹೋದ; ಭಾವಪೂರ್ಣವಾದ.
  3. ಭರ್ತಿಯಾದ; ಪೂರ ತುಂಬಿದ.
  4. ಇಡಿಕಿರಿದ; ಕಿಕ್ಕಿರಿದ; ಸಂದಣಿಯ: in a full house ಕಿಕ್ಕಿರಿದ ಸಭೆಯಲ್ಲಿ; ತುಂಬಿದ, ಬಹುಮಂದಿ ಹಾಜರಿರುವ – ಸಭೆಯಲ್ಲಿ.
  5. ಸ್ಪಷ್ಟ ಸೂಚನೆಗಳನ್ನು ತೋರಿಸುವ; ಹೊಮ್ಮುತ್ತಿರುವ: full of vitality ಚೈತನ್ಯ ಹೊಮ್ಮುತ್ತಿರುವ.
  6. (ಯಾವುದೇ) ಆಲೋಚನೆಯಲ್ಲಿ – ಮುಳುಗಿದ, ತಲ್ಲೀನನಾದ, ಮಗ್ನನಾದ: full of himself ತನ್ನಲ್ಲೇ ಮಗ್ನನಾಗಿ. full of his subject ತನ್ನ ವಿಷಯದಲ್ಲಿ ತಲ್ಲೀನನಾಗಿ.
  7. (ವ್ಯಕ್ತಿಗಳ ವಿಷಯದಲ್ಲಿ ಪ್ರಾಚೀನ ಪ್ರಯೋಗ ಯಾ ಅಸಂಸ್ಕೃತ) (ಆಹಾರದಿಂದ) ತುಂಬಿಹೋದ; ಕಟ್ಟರೆಯಾದ; ಕಂಠಪೂರ್ತಿಯಾದ: a full stomach ತುಂಬಿದ ಹೊಟ್ಟೆ.
  8. (ಮುಖ್ಯವಾಗಿ ಬೈಬ್‍ಲ್‍ನಲ್ಲಿ) ಸಮೃದ್ಧವಾಗಿ ಉಳ್ಳ; ತುಂಬಿದ; ಪೂರ್ಣವಾಗುಳ್ಳ: full of years and honours ತುಂಬುವಯಸ್ಸಿನ ಮತ್ತು ತುಂಬುಗೌರವದ; ಪೂರ್ಣಾಯುಸ್ಸು ಮತ್ತು ಸಕಲ ಗೌರವಗಳಿಂದ ಕೂಡಿದ.
  9. ತುಂಬ; ಯಥೇಷ್ಟ; ಪುಷ್ಕಳ; ಸಮೃದ್ಧ; ಹೇರಳ; ಪೂರ್ಣ; ಪೂರ್ತಿ; ಸಾಕಷ್ಟು; ತಕ್ಕಷ್ಟು; ಸಂತೃಪ್ತಿಯಾಗುವಷ್ಟು: a full meal ಹೊಟ್ಟೆ ತುಂಬ ಊಟ; ಪುಷ್ಕಳಭೋಜನ; ಭೂರಿಭೋಜನ.
  10. ಪೂರ್ತಿ; ಪೂರಾ; ಸಮಗ್ರ; ಸಮಸ್ತ; ಸಕಲ; ಎಲ್ಲಾ; ಇಡಿಯ; ಪರಿಪೂರ್ಣ: turned it to full account ಪೂರ್ಣಪ್ರಯೋಜನ ಪಡೆಯುವಂತೆ ಅದನ್ನು ಉಪಯೋಗಿಸಿಕೊಂಡನು. give full details ಪೂರ್ತಿ ವಿವರಗಳನ್ನು ಕೊಡು.
  11. ಪೂರ್ಣ; ಪೂರ್ತಿಯಾಗಿ ಹೆಸರಿಗೆ ಯಾ ವರ್ಣನೆಗೆ ತಕ್ಕಂತಿರುವ; ಅನ್ವರ್ಥನಾಮದ; ಹೆಸರು ಸೂಚಿಸುವ ಎಲ್ಲ ಗುಣಗಳನ್ನು ಹೊಂದಿರುವ ಯಾ ಎಲ್ಲ ಸವಲತ್ತುಗಳಿಗೂ ಹಕ್ಕಿರುವ: full membership ಪೂರ್ಣ ಸದಸ್ಯತ್ವ.
  12. ಪೂರ್ಣ ; ನಿರ್ದಿಷ್ಟ ಯಾ ಸಾಮಾನ್ಯ ಮಿತಿಯನ್ನು ಮುಟ್ಟುವ: full moon ಪೂರ್ಣಚಂದ್ರ: ಬಿಂಬದಷ್ಟು ಪೂರ್ತಿಯಾಗಿ ಕಾಣುವ ಚಂದ್ರ. full daylight ಪೂರ್ಣ ಹಗಲು (ಬೆಳಕು) waited a full hour ಪೂರ್ತಿ ಒಂದು ಗಂಟೆ ಕಾದೆ. in full bloom
    1. ಪೂರ್ತಿ ಹೂಗಳನ್ನು ಬಿಟ್ಟು ಯಾ ಹೂಗಳಿಂದ ತುಂಬಿ.
    2. ಪರಿಪಕ್ವಸ್ಥಿತಿಯಲ್ಲಿ; ಉಚ್ಛ್ರಾಯದೆಸೆಯಲ್ಲಿ; ಪರಿಪೂರ್ಣಾವಸ್ಥೆಯಲ್ಲಿ. full summer ನಡು ಬೇಸಿಗೆ; ಬೇಸಿಗೆ ತನ್ನ ಉಚ್ಛ್ರಾಯ ತಲುಪಿದ ಸ್ಥಿತಿ, ಅವಧಿ.
  13. ಪೂರ್ತಿ ಕಾಣಿಸುವ; ಪೂರ್ಣವಾಗಿ ಕಾಣಿಸುವ; ಪೂರ್ಣಗೋಚರವಾದ: in full view of the spectators ಪ್ರೇಕ್ಷಕರಿಗೆ ಪೂರ್ತಿಯಾಗಿ ಕಾಣಿಸುವಂತೆ. seated full face with a book ಪುಸ್ತಕ ಹಿಡಿದು ಮುಖ ಪೂರ್ತಿಯಾಗಿ ಕಾಣುವಂತೆ ಕುಳಿತಿರುವ.
  14. (ಬೆಳಕು) ತೀಕ್ಷ್ಣವಾದ.
  15. (ಬಣ್ಣ) ದಟ್ಟ; ಉಜ್ಜ್ವಲ; ಗಾಢ.
  16. (ಚಲನೆ ಮೊದಲಾದವುಗಳ ವಿಷಯದಲ್ಲಿ) ಚುರುಕಾದ; ಜೋರಾದ; ಬಲವಾದ: a full pulse ಚುರುಕುನಾಡಿ; ಬಲವಾಗಿ ಆಡುವ ನಾಡಿ. at full speed ಅತ್ಯಂತ ವೇಗವಾಗಿ.
  17. ಉಬ್ಬುವ; ಉಕ್ಕುವ; ದೊಡ್ಡದಾಗುವ; ತುಂಬಿಕೊಂಡು; ದುಂಡುದುಂಡಾಗಿರುವ; ದಪ್ಪ; ಪೀನ; ಪುಷ್ಟ; ಉಬ್ಬಿದ; ಊದಿಕೊಂಡ: she is full enough ಅವಳು ಸಾಕಷ್ಟು ಮೈತುಂಬಿಕೊಂಡಿದ್ದಾಳೆ. full point of land ಭೂಮಿಯ ಉಬ್ಬಿಕೊಂಡ ಸ್ಥಳ.
  18. (ಉಡುಪು) ತುಂಬ ನೆರಿಗೆಗಳುಳ್ಳ; ವಿಸ್ತಾರ ನೆರಿಗೆಗಳುಳ್ಳ; ಮಡಿಕೆ ಮೊದಲಾದವುಗಳಾಗಿ ಮಾಡಲು ಹೆಚ್ಚಿನ ಬಟ್ಟೆಯನ್ನು ಒಳಗೊಂಡ: a full skirt ತುಂಬು ನೆರಿಗೆಯ ಲಂಗ.
  19. (ಅಶಿಷ್ಟ) (ಪೂರ್ತಿ) ಕುಡಿದ; ಪಾನಮತ್ತ.
  20. ಪೂರ್ತಿ ಪುಸ್ತಕದ ರಟ್ಟುಕಟ್ಟುವಿಕೆಯಲ್ಲಿ ಪೂರ್ತಿ ರಟ್ಟಿಗೆ ಬಳಸುವ: full leather ಪೂರ್ತಿ ಚರ್ಮ(ದ).
ಪದಗುಚ್ಛ
  1. at full length
    1. (ಕೈಕಾಲುಗಳನ್ನು) ಪೂರ್ತಿಯಾಗಿ ನೀಡಿ ಯಾ ಚಾಚಿಕೊಂಡು ಮಲಗಿ.
    2. ಸವಿಸ್ತಾರವಾಗಿ; ವಿವರವಾಗಿ; ಸಮಗ್ರವಾಗಿ; ಸಂಕ್ಷೇಪಿಸದೆ; ಮೊಟಕುಮಾಡದೆ.
  2. full of the news etc. ಹೇಳದೆ ಇರಲಾಗದಷ್ಟು ಸಮಾಚಾರ ಮೊದಲಾದವುಗಳಿಂದ ತುಂಬಿದ; ಸುದ್ದಿ ಮೊದಲಾದವುಗಳಿಂದ ಬಿರಿಯುತ್ತಿರುವ.
  3. full speed (or steam) ahead! (ಆಜ್ಞೆ) ತುಂಬುವೇಗದಿಂದ ಮುಂದುವರಿ!
  4. full up (ಆಡುಮಾತು) ತುಂಬಿ ತುಳುಕುವ.
  5. in full career ಅಭಿವೃದ್ಧಿಯ ಅತ್ಯಂತ ವೇಗದ ಅವಧಿಯಲ್ಲಿ; ಬೆಳವಣಿಗೆ ಅತ್ಯಂತ ಚುರುಕಾಗಿ ಸಾಗುತ್ತಿರುವಾಗ; ಅಭಿವೃದ್ಧಿಯ, ಬೆಳವಣಿಗೆಯ, ಪ್ರಗತಿಯ – ಭರದಲ್ಲಿ.
ನುಡಿಗಟ್ಟು
  1. full and by (ನೌಕಾಯಾನ) ಗಾಳಿಗೆದುರಾಗಿ ಹೋಗಲು ಹಾಯಿಗಳನ್ನು ಹಿಂದಕ್ಕೆಳೆದು ಚಪ್ಪಟೆಯಾಗಿ ಕಟ್ಟಿದ, ಆದರೆ ಹಾಯಿಗಳಲ್ಲಿ ಗಾಳಿ ತುಂಬುವಂತಿರುವ.
  2. he is very full on this point ಈ ಅಂಶವನ್ನು ಕುರಿತಂತೆ ಅವನಲ್ಲಿ ಸಂಪೂರ್ಣ ವಿಷಯ ಸಂಗ್ರಹವಿದೆ.
See also 1full  3full  4full
2full ಹುಲ್‍
ನಾಮವಾಚಕ
  1. ಇಡಿ; ಪೂರ್ತಿ; ಒಟ್ಟು; ಎಲ್ಲ; ಸಂಪೂರ್ಣ; ಸಮಗ್ರ: cannot tell you the full of it ಅದನ್ನು ಪೂರ್ತಿ ಹೇಳಲಾರೆ.
  2. ಎತ್ತರ; ತುದಿ; ಮೇರು; ತುತ್ತತುದಿ; ಪರಮಾವಧಿ; ಶಿಖರ; ಉಚ್ಛ್ರಾಯ: the season is past the full ಋತು ಉಚ್ಛ್ರಾಯವನ್ನು ದಾಟಿದೆ.
  3. ಚಂದ್ರನ ಸ್ಥಿತಿ ಯಾ ಕಾಲ, ಅವಧಿ: the moon is past the full ಹುಣ್ಣಿಮೆ ಕಳೆದಿದೆ.
ಪದಗುಚ್ಛ
  1. in full
    1. ಪೂರ್ತಿಯಾಗಿ; ಸಮಗ್ರವಾಗಿ; ಸಂಪೂರ್ಣವಾಗಿ; ಮೊಟಕುಮಾಡದೆ: write your name in full ಹೆಸರನ್ನು ಪೂರ್ತಿಯಾಗಿ (ಎಂದರೆ ಉಪನಾಮದ ಅಕ್ಷರಗಳನ್ನು ವಿಸ್ತರಿಸಿ) ಬರೆ, ಉದಾಹರಣೆಗೆ ಬಿ. ಎಂ. ಶ್ರೀಕಂಠಯ್ಯ ಎನ್ನುವುದನ್ನು ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಎಂದು ಬರೆಯುವುದು.
    2. ಪೂರ್ತಿಯಾಗಿ; ಕೊರತೆಮಾಡದೆ; ಕೊರೆಯುಳಿಸದೆ; ಬಾಕಿ ಉಳಿಸದೆ: pay a debt in full ಸಾಲವನ್ನು ಪೂರ್ತಿಯಾಗಿ ಸಂದಾಯ ಮಾಡು.
  2. to the full
    1. ಸಂಪೂರ್ಣವಾಗಿ; ಪೂರ್ತಿಯಾಗಿ; ಅಗದಿ.
    2. ಸಾಧ್ಯವಾದಷ್ಟು ಮಟ್ಟಿಗೂ; ಶಕ್ತಿಯಿದ್ದಷ್ಟೂ.
See also 1full  2full  4full
3full ಹುಲ್‍
ಕ್ರಿಯಾವಿಶೇಷಣ
  1. ಅತ್ಯಂತ; ಬಹಳ; ಬಹು; ತುಂಬಾ; ಚೆನ್ನಾಗಿ: full fain ಅತ್ಯಂತ ಇಷ್ಟವುಳ್ಳ. know it full well ಅದು ಚೆನ್ನಾಗಿ ಗೊತ್ತು.
  2. ಪೂರಾ; ಪೂರ್ತಿ; ಸರಿಯಾಗಿ; ತುಂಬ: full six miles ಪೂರ್ತಿ ಆರು ಮೈಲಿ. full as useful as ಅಷ್ಟೇ ಪೂರ್ತಿಯಾಗಿ ಪ್ರಯೋಜನಕರವಾದ.
  3. ನೇರವಾಗಿ; ಸರಿಯಾಗಿ: hit him full on the nose ಮೂಗಿನ ಮೇಲೆ ನೇರವಾಗಿ ಹೊಡೆ.
  4. ಅಗತ್ಯವಾದುದಕ್ಕಿಂತ, ಬೇಕಾದುದಕ್ಕಿಂತ – ಹೆಚ್ಚಾಗಿ, ಈರಿ: this chair is full high ಈ ಕುರ್ಚಿಯ ಎತ್ತರ ಹೆಚ್ಚಾಗಿದೆ. full early ಅಗತ್ಯವಾದುದಕ್ಕಿಂತ ಮುಂಚೆ.
See also 1full  2full  3full
4full ಹುಲ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಬಟ್ಟೆಯನ್ನು) ನಿರಿಹಿಡಿ; ನೆರಿಗೆಗೊಳಿಸು; ನಿರಿನಿರಿಮಾಡು; ಗಳಿಗೆಮಾಡು.
  2. (ಬಟ್ಟೆಯನ್ನು) ತೊಳೆದು ದಟ್ಟಗೊಳಿಸು; ತೊಳೆದು ದಪ್ಪಮಾಡು.
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಬಟ್ಟೆ) ನಿರಿನಿರಿಯಾಗು; ನೆರಿಗೆಯಾಗು.
  2. (ಚಂದ್ರನ ವಿಷಯದಲ್ಲಿ) ಪೂರ್ಣವಾಗು; ಪೂರ್ಣವಾಗಿರು; ತುಂಬಿರು: the moon fulls tonight ಚಂದ್ರ ಈ ರಾತ್ರಿ ತುಂಬುತ್ತಾನೆ. ಪೂರ್ಣಬಿಂಬವಾಗುತ್ತಾನೆ.