See also 1full  3full  4full
2full ಹುಲ್‍
ನಾಮವಾಚಕ
  1. ಇಡಿ; ಪೂರ್ತಿ; ಒಟ್ಟು; ಎಲ್ಲ; ಸಂಪೂರ್ಣ; ಸಮಗ್ರ: cannot tell you the full of it ಅದನ್ನು ಪೂರ್ತಿ ಹೇಳಲಾರೆ.
  2. ಎತ್ತರ; ತುದಿ; ಮೇರು; ತುತ್ತತುದಿ; ಪರಮಾವಧಿ; ಶಿಖರ; ಉಚ್ಛ್ರಾಯ: the season is past the full ಋತು ಉಚ್ಛ್ರಾಯವನ್ನು ದಾಟಿದೆ.
  3. ಚಂದ್ರನ ಸ್ಥಿತಿ ಯಾ ಕಾಲ, ಅವಧಿ: the moon is past the full ಹುಣ್ಣಿಮೆ ಕಳೆದಿದೆ.
ಪದಗುಚ್ಛ
  1. in full
    1. ಪೂರ್ತಿಯಾಗಿ; ಸಮಗ್ರವಾಗಿ; ಸಂಪೂರ್ಣವಾಗಿ; ಮೊಟಕುಮಾಡದೆ: write your name in full ಹೆಸರನ್ನು ಪೂರ್ತಿಯಾಗಿ (ಎಂದರೆ ಉಪನಾಮದ ಅಕ್ಷರಗಳನ್ನು ವಿಸ್ತರಿಸಿ) ಬರೆ, ಉದಾಹರಣೆಗೆ ಬಿ. ಎಂ. ಶ್ರೀಕಂಠಯ್ಯ ಎನ್ನುವುದನ್ನು ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಎಂದು ಬರೆಯುವುದು.
    2. ಪೂರ್ತಿಯಾಗಿ; ಕೊರತೆಮಾಡದೆ; ಕೊರೆಯುಳಿಸದೆ; ಬಾಕಿ ಉಳಿಸದೆ: pay a debt in full ಸಾಲವನ್ನು ಪೂರ್ತಿಯಾಗಿ ಸಂದಾಯ ಮಾಡು.
  2. to the full
    1. ಸಂಪೂರ್ಣವಾಗಿ; ಪೂರ್ತಿಯಾಗಿ; ಅಗದಿ.
    2. ಸಾಧ್ಯವಾದಷ್ಟು ಮಟ್ಟಿಗೂ; ಶಕ್ತಿಯಿದ್ದಷ್ಟೂ.