See also 2fruit
1fruit ಹ್ರೂಟ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಬೆಳೆ; ಆಹಾರಯೋಗ್ಯವಾದ ಸಸ್ಯೋತ್ಪನ್ನಗಳು: fruits of the earth ಭೂಮಿಯ ಬೆಳೆ, ಫಸಲು; ಭೂಮಿಕೊಟ್ಟ ಫಲಗಳು.
  2. ಕಾಯಿ; ಹಣ್ಣು; ಫಲ.
  3. (ಸಾಮೂಹಿಕವಾಗಿ) ಹಣ್ಣು(ಗಳು): feeds on fruit ಹಣ್ಣುಗಳನ್ನೇ ಆಹಾರವಾಗಿ ಸೇವಿಸುತ್ತಾನೆ.
  4. (ಸಸ್ಯೋತ್ಪಾದನೆಗೆ ಸಾಧಕವಾದ) ಹೊರಹೊದಿಕೆಯುಳ್ಳ ಬೀಜ.
  5. (ಬೈಬ್‍ಲ್‍) ಮಕ್ಕಳು; ಸಂತಾನ: fruit of the body, loins, womb ದೇಹಸಂಭೂತ, ಗರ್ಭಜನಿತಮಕ್ಕಳು, ಸಂತಾನ.
  6. (ಕಾರ್ಯದ) ಫಲ; ಉತ್ಪನ್ನ; ಉತ್ಪತ್ತಿ; ಹುಟ್ಟುವಳಿ.
  7. (ಬಹುವಚನದಲ್ಲಿ) ಆದಾಯ: ವರಮಾನ: the fruits of industry ಕೈಗಾರಿಕೆಯ ಆದಾಯ.
  8. (ಏಕವಚನ ಯಾ ಬಹುವಚನದಲ್ಲಿ) ಪರಿಣಾಮ; ಫಲಿತ; ಫಲಿತಾಂಶ; ಫಲ.
  9. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಲಿಂಗಕಾಮಿಯಾದ ಗಂಡಸು.
ಪದಗುಚ್ಛ

bear fruit

  1. ಹಣ್ಣುಬಿಡು; ಫಲ ಕೊಡು.
  2. (ರೂಪಕವಾಗಿ) ಫಲ ಕೊಡು; ಪರಿಣಾಮ ನೀಡು; ಫಲಿತಾಂಶ ಉಂಟುಮಾಡು.
See also 1fruit
2fruit ಹ್ರೂಟ್‍
ಸಕರ್ಮಕ ಕ್ರಿಯಾಪದ
  1. ಹಣ್ಣುಬಿಡಿಸು; ಹಣ್ಣುಬಿಡುವಂತೆ ಮಾಡು; ಫಲಿಸುವಂತೆ ಮಾಡು; ಫಲವಂತವಾಗಿಸು; ಫಲಭರಿತಗೊಳಿಸು.
  2. (ರೂಪಕವಾಗಿ) ಫಲಕಾರಿಯಾಗಿಸು; ಫಲಪ್ರದಮಾಡು.
ಅಕರ್ಮಕ ಕ್ರಿಯಾಪದ

ಹಣ್ಣುಬಿಡು; ಹಣ್ಣುಕೊಡು; ಫಲಿಸು; ಫಲಭರಿತವಾಗು.