1fruit
ನಾಮವಾಚಕ
- (ಸಾಮಾನ್ಯವಾಗಿ ಬಹುವಚನದಲ್ಲಿ) ಬೆಳೆ; ಆಹಾರಯೋಗ್ಯವಾದ ಸಸ್ಯೋತ್ಪನ್ನಗಳು: fruits of the earth ಭೂಮಿಯ ಬೆಳೆ, ಫಸಲು; ಭೂಮಿಕೊಟ್ಟ ಫಲಗಳು.
- ಕಾಯಿ; ಹಣ್ಣು; ಫಲ.
- (ಸಾಮೂಹಿಕವಾಗಿ) ಹಣ್ಣು(ಗಳು): feeds on fruit ಹಣ್ಣುಗಳನ್ನೇ ಆಹಾರವಾಗಿ ಸೇವಿಸುತ್ತಾನೆ.
- (ಸಸ್ಯೋತ್ಪಾದನೆಗೆ ಸಾಧಕವಾದ) ಹೊರಹೊದಿಕೆಯುಳ್ಳ ಬೀಜ.
- (ಬೈಬ್ಲ್) ಮಕ್ಕಳು; ಸಂತಾನ: fruit of the body, loins, womb ದೇಹಸಂಭೂತ, ಗರ್ಭಜನಿತಮಕ್ಕಳು, ಸಂತಾನ.
- (ಕಾರ್ಯದ) ಫಲ; ಉತ್ಪನ್ನ; ಉತ್ಪತ್ತಿ; ಹುಟ್ಟುವಳಿ.
- (ಬಹುವಚನದಲ್ಲಿ) ಆದಾಯ: ವರಮಾನ: the fruits of industry ಕೈಗಾರಿಕೆಯ ಆದಾಯ.
- (ಏಕವಚನ ಯಾ ಬಹುವಚನದಲ್ಲಿ) ಪರಿಣಾಮ; ಫಲಿತ; ಫಲಿತಾಂಶ; ಫಲ.
- (ಅಮೆರಿಕನ್ ಪ್ರಯೋಗ) (ಅಶಿಷ್ಟ) ಸಲಿಂಗಕಾಮಿಯಾದ ಗಂಡಸು.
ಪದಗುಚ್ಛ
bear fruit
- ಹಣ್ಣುಬಿಡು; ಫಲ ಕೊಡು.
- (ರೂಪಕವಾಗಿ) ಫಲ ಕೊಡು; ಪರಿಣಾಮ ನೀಡು; ಫಲಿತಾಂಶ ಉಂಟುಮಾಡು.