See also 2froth
1froth ಹ್ರಾತ್‍
ನಾಮವಾಚಕ
  1. (ಕುಲುಕುವುದು, ಕಿಣ್ವನ, ಮೊದಲಾದವುಗಳಿಂದ ದ್ರವದಲ್ಲಿ ಆದ) ಸಣ್ಣಸಣ್ಣ ನೀರ್ಗುಳ್ಳೆಗಳ ರಾಶಿ; ಬುದ್ಬುದ.
  2. ನೊರೆ: ಫೇನ; ಬುರುಗು.
  3. ಬುರುಗು; ದ್ರವದ ಮೇಲೆ ತೇಲುತ್ತಿರುವ ಮಷ್ಟು, ಕಲ್ಮಷ.
  4. ಹುರುಳಿಲ್ಲದ ವಿಷಯ; ನಿಷ್ಪ್ರಯೋಜಕ ವಿಷಯ; ನಿಸ್ಸಾರವಾದದ್ದು.
  5. ಕ್ಷುಲ್ಲಕ, ಲಘು, ಅಲ್ಪವಿಷಯ.
  6. ಗೊಡ್ಡು ಹರಟೆ, ಕಾಡುಹರಟೆ; ವ್ಯರ್ಥಾಲಾಪ.
See also 1froth
2froth ಹ್ರಾತ್‍
ಸಕರ್ಮಕ ಕ್ರಿಯಾಪದ

(ಬಿಯರ್‍ ಮೊದಲಾದ ಮದ್ಯವನ್ನು) ನೊರೆಗೂಡಿಸು; ನೊರೆಗಟ್ಟಿಸು; ನೊರೆಯೆದ್ದು ಮೇಲೆ ನಿಲ್ಲುವಂತೆ ಮಾಡು: fill me my cup, and froth it ನನ್ನ ಬಟ್ಟಲನ್ನು ತುಂಬಿ ನೊರೆಬರಿಸು.

ಅಕರ್ಮಕ ಕ್ರಿಯಾಪದ
  1. ನೊರೆಸೂಸು; ನೊರೆ ಉಗುಳು; ಬುರುಗೇಳು: frothing at the mouth ಬಾಯಲ್ಲಿ ನೊರೆ ಸೂಸುತ್ತಿರುವ.
  2. (ದ್ರವಗಳ ವಿಷಯದಲ್ಲಿ) ನೊರೆ ಗೂಡು; ನೊರೆಗಟ್ಟು.
  3. (ರೂಪಕವಾಗಿ) ವ್ಯರ್ಥವಾಗಿ ಕೂಗಾಡು: they were frothing at each other ಅವರು ಒಬ್ಬರ ಮೇಲೊಬ್ಬರು ಕೂಗಾಡುತ್ತಿದ್ದರು.