See also 2fret  3fret  4fret  5fret
1fret ಹ್ರೆಟ್‍
ನಾಮವಾಚಕ
  1. (ಸರಳರೇಖೆಗಳನ್ನು, ಸಾಮಾನ್ಯವಾಗಿ ಒಂದಕ್ಕೊಂದು ಸಮಕೋನದಲ್ಲಿರುವಂತೆ, ವಿವಿಧ ರೀತಿಯ ನಿರಂತರ ಶ್ರೇಣಿಗಳಲ್ಲಿ ಜೋಡಿಸಿ ರಚಿಸಿದ) ಗೆರೆಚಿತ್ತಾರ; ರೇಖಾಲಂಕರಣ. Figure: fret 1
  2. (ಅಲಂಕಾರದ) ಬಲೆ; ಜರಿ, ರೇಷ್ಮೆದಾರ, ಮೊದಲಾದವುಗಳಿಂದ ಹೆಣೆದು, ಹರಳುಗಳು ಯಾ ಹೂಗಳಿಂದ ಅಲಂಕರಿಸಿದ, ಮುಖ್ಯವಾಗಿ ತಲೆಗೂದಲನ್ನು ಹಿಡಿದಿಡಲು ಬಳಸುವ, ಬಲೆ.
  3. (ವಂಶಲಾಂಛನ ವಿದ್ಯೆ) ಕಿರುಪಟ್ಟೆಗಳು ಮತ್ತು ವಜ್ರಾಕೃತಿ ಹೆಣೆದ, ಕುಲದ ಸಂಕೇತ, ಚಿಹ್ನೆ.
See also 1fret  3fret  4fret  5fret
2fret ಹ್ರೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fretted, ವರ್ತಮಾನ ಕೃದಂತ fretting).
  1. ಬೇರೆಬೇರೆ ಬಣ್ಣ ಮಾಡು; ಬಣ್ಣಬಣ್ಣವಾಗಿಸು; ವಿವಿಧ ವರ್ಣಮಾಡು; ವೈವಿಧ್ಯಗೊಳಿಸು.
  2. ಚೌಕಳಿಮಾಡು; ಪಪ್ಪಳಿ ನಮೂನೆಯ ಚಿತ್ರಾಲಂಕಾರ ಮಾಡು.
  3. ಕೆತ್ತನೆಯ ಕೆಲಸದಿಂದ ಯಾ ಉಬ್ಬುಚಿತ್ರಣದಿಂದ (ಮುಖ್ಯವಾಗಿ ಚತ್ತುವನ್ನು, ಮಾಳಿಗೆಯ ಒಳ ಮೈಯನ್ನು) ಅಲಂಕರಿಸು.
See also 1fret  2fret  4fret  5fret
3fret ಹ್ರೆಟ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ fretted, ವರ್ತಮಾನ ಕೃದಂತ fretting).

ಸಕರ್ಮಕ ಕ್ರಿಯಾಪದ
  1. (ಕ್ರಿಮಿಕೀಟಗಳ ವಿಷಯದಲ್ಲಿ) ಕಡಿ; ಕಚ್ಚು.
  2. (ಕುದುರೆಗಳ ವಿಷಯದಲ್ಲಿ) ಕಡಿವಾಣ ಕಡಿ.
  3. (ಹಿಮ ಮೊದಲಾದವುಗಳ ವಿಷಯದಲ್ಲಿ) ಕೊರೆ; ತಿಂದು ಹಾಕು.
  4. (ರೂಪಕವಾಗಿ) (ದುಃಖ ಮೊದಲಾದ ಭಾವಗಳ ವಿಷಯದಲ್ಲಿ) ಮನಸ್ಸನ್ನು ಕೊರೆ, ತಿಂದು ಹಾಕು.
  5. (ತುಕ್ಕು, ಉಜ್ಜಾಟ, ಮೊದಲಾದವುಗಳ ವಿಷಯದಲ್ಲಿ) ಸವೆಸು; ತಿಂದುಹಾಕು.
  6. (ತೊರೆ ಮೊದಲಾದವುಗಳ ವಿಷಯದಲ್ಲಿ) ಸವೆಸಿ, ಕೊರೆದು – ದಾರಿಮಾಡಿಕೊಂಡು ಹೋಗು.
  7. ರೇಗಿಸು; ಸಿಡುಕು ಉಂಟುಮಾಡು; ಕೋಪತರು, ಬರಿಸು, ಕೆರಳಿಸು.
  8. ಕಳವಳ ಹುಟ್ಟಿಸು; ತಳಮಳಗೊಳಿಸು; ದುಗುಡಗೊಳಿಸು.
  9. (ನೀರನ್ನು) ಕಲಕು; ಕ್ಷೋಭೆಗೊಳಿಸು.
ಅಕರ್ಮಕ ಕ್ರಿಯಾಪದ
  1. (ನದಿ, ತೊರೆ, ಮೊದಲಾದವುಗಳ ವಿಷಯದಲ್ಲಿ) ಕಿರುದೆರೆಗಳನ್ನು ಏರಿಸುತ್ತಾ ಹರಿ ಯಾ ಮೊರೆಯುತ್ತಾ ಉಕ್ಕಿಬರು.
  2. (ವಿಷಾದ ಯಾ ಅತೃಪ್ತಿಯಿಂದ) ಪರಿತಪಿಸು; ಕಳವಳಪಡು; ತಳಮಳಿಸು; ದುಗುಡಪಡಿಸು.
  3. ಸಿಡುಕು; ರೇಗು.
  4. (ನೀರು) ಪ್ರಕ್ಷುಬ್ಧವಾಗು; ತಳಮಳಗೊಳ್ಳು; ಕಲಕಾಡು.
ಪದಗುಚ್ಛ

fret at

  1. (ಯಾವುದೇ ಕಾರಣಕ್ಕಾಗಿ) ಸಿಡಿಗುಟ್ಟು; ರೇಗಿಬೀಳು; ಕೆರಳು.
  2. (ಯಾವುದೇ ಕಾರಣಕ್ಕಾಗಿ) ತಳಮಳಗೊಳ್ಳು; ಕಳವಳಪಡು.
ನುಡಿಗಟ್ಟು
  1. fret and fume ಕೋಪ, ಅಸಹನೆ ತೋರಿಸು; ಉರಿದುರಿದು ಬೀಳು; ಸಿಡಿಮಿಡಿಗುಟ್ಟು.
  2. fret away (or out) one’s life ತನ್ನ ಬಾಳು ಮೊದಲಾದವನ್ನು ಕೊರಗಿಕೊರಗಿ ಕಳೆ, ವಿಷಾದದಲ್ಲೇ ವ್ಯಯಮಾಡು, ಯಾ ದುಗುಡದಲ್ಲೇ ಮುಗಿಸು.
See also 1fret  2fret  3fret  5fret
4fret ಹ್ರೆಟ್‍
ನಾಮವಾಚಕ
  1. ಸಿಡುಕು; ಸಿಡಿಮಿಡಿ(ತ); ರೇಗಿಬೀಳುವಿಕೆ.
  2. ಕಾಟ; ಪೀಡೆ; ಉಪದ್ರವ; ಕಿರುಕುಳ.
  3. ಕಿರಿಕಿರಿ; ಉದ್ವೇಗ.
  4. ಜಗಳಗಂಟಿತನ; ಜಗಳಕ್ಕೆ ಬರುವ ಸ್ವಭಾವ, ಲಕ್ಷಣ, ನಡವಳಿಕೆ.
ಪದಗುಚ್ಛ
  1. in a fret ಕೆರಳಿ; ರೇಗಿ; ಸಿಡುಕುತ್ತ.
  2. on the fret
    1. ದುಗುಡಪಡುತ್ತ.
    2. ಸಿಡಿಮಿಡಿಗುಟ್ಟುತ್ತಾ.
See also 1fret  2fret  3fret  4fret
5fret ಹ್ರೆಟ್‍
ನಾಮವಾಚಕ

(ಕೆಲವು ತಂತಿವಾದ್ಯಗಳಲ್ಲಿ ಬೆರಳಾಡಿಸುವ ಭಾಗದಲ್ಲಿರುವ) ಮೆಟ್ಟು; ಮೆಟ್ಟಿಲು; ಸಾರಿಕೆ.