See also 1fret  2fret  4fret  5fret
3fret ಹ್ರೆಟ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ fretted, ವರ್ತಮಾನ ಕೃದಂತ fretting).

ಸಕರ್ಮಕ ಕ್ರಿಯಾಪದ
  1. (ಕ್ರಿಮಿಕೀಟಗಳ ವಿಷಯದಲ್ಲಿ) ಕಡಿ; ಕಚ್ಚು.
  2. (ಕುದುರೆಗಳ ವಿಷಯದಲ್ಲಿ) ಕಡಿವಾಣ ಕಡಿ.
  3. (ಹಿಮ ಮೊದಲಾದವುಗಳ ವಿಷಯದಲ್ಲಿ) ಕೊರೆ; ತಿಂದು ಹಾಕು.
  4. (ರೂಪಕವಾಗಿ) (ದುಃಖ ಮೊದಲಾದ ಭಾವಗಳ ವಿಷಯದಲ್ಲಿ) ಮನಸ್ಸನ್ನು ಕೊರೆ, ತಿಂದು ಹಾಕು.
  5. (ತುಕ್ಕು, ಉಜ್ಜಾಟ, ಮೊದಲಾದವುಗಳ ವಿಷಯದಲ್ಲಿ) ಸವೆಸು; ತಿಂದುಹಾಕು.
  6. (ತೊರೆ ಮೊದಲಾದವುಗಳ ವಿಷಯದಲ್ಲಿ) ಸವೆಸಿ, ಕೊರೆದು – ದಾರಿಮಾಡಿಕೊಂಡು ಹೋಗು.
  7. ರೇಗಿಸು; ಸಿಡುಕು ಉಂಟುಮಾಡು; ಕೋಪತರು, ಬರಿಸು, ಕೆರಳಿಸು.
  8. ಕಳವಳ ಹುಟ್ಟಿಸು; ತಳಮಳಗೊಳಿಸು; ದುಗುಡಗೊಳಿಸು.
  9. (ನೀರನ್ನು) ಕಲಕು; ಕ್ಷೋಭೆಗೊಳಿಸು.
ಅಕರ್ಮಕ ಕ್ರಿಯಾಪದ
  1. (ನದಿ, ತೊರೆ, ಮೊದಲಾದವುಗಳ ವಿಷಯದಲ್ಲಿ) ಕಿರುದೆರೆಗಳನ್ನು ಏರಿಸುತ್ತಾ ಹರಿ ಯಾ ಮೊರೆಯುತ್ತಾ ಉಕ್ಕಿಬರು.
  2. (ವಿಷಾದ ಯಾ ಅತೃಪ್ತಿಯಿಂದ) ಪರಿತಪಿಸು; ಕಳವಳಪಡು; ತಳಮಳಿಸು; ದುಗುಡಪಡಿಸು.
  3. ಸಿಡುಕು; ರೇಗು.
  4. (ನೀರು) ಪ್ರಕ್ಷುಬ್ಧವಾಗು; ತಳಮಳಗೊಳ್ಳು; ಕಲಕಾಡು.
ಪದಗುಚ್ಛ

fret at

  1. (ಯಾವುದೇ ಕಾರಣಕ್ಕಾಗಿ) ಸಿಡಿಗುಟ್ಟು; ರೇಗಿಬೀಳು; ಕೆರಳು.
  2. (ಯಾವುದೇ ಕಾರಣಕ್ಕಾಗಿ) ತಳಮಳಗೊಳ್ಳು; ಕಳವಳಪಡು.
ನುಡಿಗಟ್ಟು
  1. fret and fume ಕೋಪ, ಅಸಹನೆ ತೋರಿಸು; ಉರಿದುರಿದು ಬೀಳು; ಸಿಡಿಮಿಡಿಗುಟ್ಟು.
  2. fret away (or out) one’s life ತನ್ನ ಬಾಳು ಮೊದಲಾದವನ್ನು ಕೊರಗಿಕೊರಗಿ ಕಳೆ, ವಿಷಾದದಲ್ಲೇ ವ್ಯಯಮಾಡು, ಯಾ ದುಗುಡದಲ್ಲೇ ಮುಗಿಸು.