See also 2fresh  3fresh
1fresh ಹ್ರೆಷ್‍
ಗುಣವಾಚಕ
  1. ಹೊಸ; ನವ; ನೂತನ; ನವೀನ; ಹಿಂದೆ – ತಿಳಿದಿರದ, ಬಳಸಿರದ, ಕಂಡಿರದ, ಪರಿಚಿತವಲ್ಲದ.
  2. ಮತ್ತೊಂದು; ಬೇರೊಂದು ; ಬೇರೆ; ಮುಂದಿನ: begin a fresh chapter ಬೇರೆ, ಮುಂದಿನ – ಅಧ್ಯಾಯ ಪ್ರಾರಂಭಿಸು.
  3. ಈಚಿನ; ಹೊಸ; ನೂತನ: ಈಗತಾನೇ – ಮಾಡಿದ, ಬಂದ, ಇಳಿದ: fresh wound ಹೊಸ ಗಾಯ.
  4. ಹೊಸ; ಪಳಗಿಲ್ಲದ; ನುರಿತಿಲ್ಲದ; ತರಪೇತಿ ಇಲ್ಲದ; ಅನನುಭವಿಯಾದ.
  5. ಹೊಚ್ಚ ಹೊಸ; ಉಪ್ಪಿಡುವುದು; ಹೊಗೆಯಾಡಿಸುವುದು, ಡಬ್ಬಿಯಲ್ಲಿ ತುಂಬಿಡುವುದು, ಮೊದಲಾದ ಕ್ರಿಯೆಗಳಿಂದ ಕಾಪಿಡದ: fresh herrings ಹೊಚ್ಚಹೊಸ ಹೆರಿಂಗ್‍ ಈನುಗಳು.
  6. (ಆಗ ತಾನೇ) ತಯಾರಿಸಿದ; ಹಿಡಿದು ತಂದ; ಆರಿಸಿ ತಂದ: fresh fish ಈಗ ತಾನೇ ಹಿಡಿದು ತಂದ ಹಸಿ ಈನು. fresh butter
    1. ಈಗ ತಾನೇ ತಯಾರಿಸಿದ ಬೆಣ್ಣೆ (ಡಬ್ಬಿಗೆ ತುಂಬಿಟ್ಟಿದ್ದಲ್ಲ).
    2. ಉಪ್ಪು ಬೆರಸದ ಅಪ್ಪಟ ಬೆಣ್ಣೆ.
  7. ಉಪ್ಪಲ್ಲದ; ಸಿಹಿ(ಯಾದ): fresh water ಸಿಹಿ ನೀರು. fresh water fish ಸಿಹಿ ನೀರಿನ (ಕೆರೆ, ಕೊಳ, ಮೊದಲಾದವುಗಳಲ್ಲಿನ) ಈನು.
  8. (ಗಾಳಿ, ನೀರುಗಳ ವಿಷಯದಲ್ಲಿ)
    1. ನಿರ್ಮಲ; ಶುದ್ಧವಾದ; ನಿಷ್ಕಲ್ಮಷ.
    2. ಆಯಾಸ ಪರಿಹಾರಕ: ಅಹ್ಲಾದಕರ; ಆಪ್ಯಾಯಮಾನ.
    3. ತಂಪಾದ; ತಣ್ಣನೆಯ.
  9. ಹೊಸ; ತಾಜಾ; ಹಳಸಿಲ್ಲದ; ಮುಗ್ಗಿಲ್ಲದ; ರುಚಿ ಇರುವ: fresh meat (ಹಳಸಿಲ್ಲದ) ಈಗತಾನೇ ತಯಾರಿಸಿದ ಮಾಂಸ.
  10. ಹೊಸ; ಬಾಡಿಲ್ಲದ; ಮಾಸಿಲ್ಲದ; ಕಂದದ: fresh flowers ಹೊಸ (ಬಾಡಿಲ್ಲದ) ಹೂಗಳು. fresh memories ಮಾಸದ ನೆನಪುಗಳು.
  11. ಶುಭ್ರವಾದ; ಸ್ವಚ್ಛ; ಉಜ್ಜ್ವಲ(ವರ್ಣದ); ಕೊಳೆಯಾಗಿರದ: a fresh complexion ಸ್ವಚ್ಛದೇಹ ಕಾಂತಿ.
  12. ಆರೋಗ್ಯ – ಕಾಂತಿಯ, ಲಕ್ಷಣದ; ಗೆಲುವಾಗಿ ಕಾಣುವ; ತಾರುಣ್ಯದ ಕಳೆಯಿರುವ.
  13. ಬಳಲಿರದ.
  14. ಉಲ್ಲಾಸಭರಿತ; ಲವಲವಿಕೆಯುಳ್ಳ; ಚಟುವಟಿಕೆಯ; ಹುಮ್ಮಸ್ಸುಳ್ಳ; ಹುರುಪುಳ್ಳ: I never felt fresher ನನಗೆ ಹಿಂದೆಂದೂ ಇಷ್ಟು ಲವಲವಿಕೆ, ಹುಮ್ಮಸ್ಸು ಇರಲಿಲ್ಲ.
  15. ಅತಿ ಸಲಿಗೆ ವಹಿಸುವ; ಮುಂದೆ ಬಿದ್ದು ಹೋಗುವ; ಅಧಿಕಪ್ರಸಂಗದ; ಸಲ್ಲದ ಸ್ವಾತಂತ್ರ್ಯವಹಿಸುವ; ಧಾರ್ಷ್ಟ್ಯದ; ದಾಷ್ಟೀಕದ.
  16. ಕಾಮುಕಧೂರ್ತತೆಯ: he was fresh with the nurses while on duty ಕೆಲಸದ ಮೇಲಿದ್ದಾಗ ಅವನು ದಾದಿಗಳ ಜತೆ ಕಾಮುಕಧೂರ್ತತನದಿಂದ ವರ್ತಿಸಿದ.
ಪದಗುಚ್ಛ

a fresh wind

  1. ಶುದ್ಧಗಾಳಿ.
  2. (ಪವನಶಾಸ್ತ್ರ) ಸ್ವಲ್ಪ ಬಿರುಸಾಗಿರುವ ಗಾಳಿ.
ನುಡಿಗಟ್ಟು
  1. as fresh as a daisy ಸುಟಿಯಾದ; ಹುಮ್ಮಸ್ಸುಳ್ಳ; ಹುರುಪಿನಿಂದ ಕೂಡಿದ; ಚುರುಕಾದ.
  2. as fresh as paint = ನುಡಿಗಟ್ಟು \((1)\).
  3. break fresh ground ಹೊಸಮಾರ್ಗ ಹಿಡಿ; ಹೊಸ ಜಾಡು ತುಳಿ; ನೂತನ ವಿಷಯಗಳನ್ನು ಕಂಡುಹಿಡಿ; ಹಳಸಲಲ್ಲದ್ದನ್ನು ಮಾಡು.
See also 1fresh  3fresh
2fresh ಹ್ರೆಷ್‍
ಕ್ರಿಯಾವಿಶೇಷಣ

ಹೊಸದಾಗಿ; ತಾಜಾ ಆಗಿ; ನೂತನವಾಗಿ; ಈಗತಾನೇ: fresh-caught ಈಗ ತಾನೇ ಹಿಡಿದ. fresh-coined ಹೊಸದಾಗಿ ಟಂಕಿಸಿದ, ನಿರ್ಮಿಸಿದ.

See also 1fresh  2fresh
3fresh ಹ್ರೆಷ್‍
ನಾಮವಾಚಕ
  1. (ದಿನ, ವರ್ಷ, ಮೊದಲಾದವುಗಳ) ಪ್ರಾರಂಭ; ಹೊಸತು; ಹೊಸ ಕಳೆ: in the fresh of the morning ಬೆಳಗಿನ ಪ್ರಾರಂಭದಲ್ಲಿ; ಹೊಸ ಕಳೆಯಲ್ಲಿ.
  2. (ನದಿಯಲ್ಲಿ) ನೆರೆ; ಪ್ರವಾಹ.
  3. ಸಿಹಿ ನೀರಿನ – ಮಡು, ತೊರೆ, ಊಟೆ.