1fresh
ಗುಣವಾಚಕ
- ಹೊಸ; ನವ; ನೂತನ; ನವೀನ; ಹಿಂದೆ – ತಿಳಿದಿರದ, ಬಳಸಿರದ, ಕಂಡಿರದ, ಪರಿಚಿತವಲ್ಲದ.
- ಮತ್ತೊಂದು; ಬೇರೊಂದು ; ಬೇರೆ; ಮುಂದಿನ: begin a fresh chapter ಬೇರೆ, ಮುಂದಿನ – ಅಧ್ಯಾಯ ಪ್ರಾರಂಭಿಸು.
- ಈಚಿನ; ಹೊಸ; ನೂತನ: ಈಗತಾನೇ – ಮಾಡಿದ, ಬಂದ, ಇಳಿದ: fresh wound ಹೊಸ ಗಾಯ.
- ಹೊಸ; ಪಳಗಿಲ್ಲದ; ನುರಿತಿಲ್ಲದ; ತರಪೇತಿ ಇಲ್ಲದ; ಅನನುಭವಿಯಾದ.
- ಹೊಚ್ಚ ಹೊಸ; ಉಪ್ಪಿಡುವುದು; ಹೊಗೆಯಾಡಿಸುವುದು, ಡಬ್ಬಿಯಲ್ಲಿ ತುಂಬಿಡುವುದು, ಮೊದಲಾದ ಕ್ರಿಯೆಗಳಿಂದ ಕಾಪಿಡದ: fresh herrings ಹೊಚ್ಚಹೊಸ ಹೆರಿಂಗ್ ಈನುಗಳು.
- (ಆಗ ತಾನೇ) ತಯಾರಿಸಿದ; ಹಿಡಿದು ತಂದ; ಆರಿಸಿ ತಂದ: fresh fish ಈಗ ತಾನೇ ಹಿಡಿದು ತಂದ ಹಸಿ ಈನು. fresh butter
- ಈಗ ತಾನೇ ತಯಾರಿಸಿದ ಬೆಣ್ಣೆ (ಡಬ್ಬಿಗೆ ತುಂಬಿಟ್ಟಿದ್ದಲ್ಲ).
- ಉಪ್ಪು ಬೆರಸದ ಅಪ್ಪಟ ಬೆಣ್ಣೆ.
- ಉಪ್ಪಲ್ಲದ; ಸಿಹಿ(ಯಾದ): fresh water ಸಿಹಿ ನೀರು. fresh water fish ಸಿಹಿ ನೀರಿನ (ಕೆರೆ, ಕೊಳ, ಮೊದಲಾದವುಗಳಲ್ಲಿನ) ಈನು.
- (ಗಾಳಿ, ನೀರುಗಳ ವಿಷಯದಲ್ಲಿ)
- ನಿರ್ಮಲ; ಶುದ್ಧವಾದ; ನಿಷ್ಕಲ್ಮಷ.
- ಆಯಾಸ ಪರಿಹಾರಕ: ಅಹ್ಲಾದಕರ; ಆಪ್ಯಾಯಮಾನ.
- ತಂಪಾದ; ತಣ್ಣನೆಯ.
- ಹೊಸ; ತಾಜಾ; ಹಳಸಿಲ್ಲದ; ಮುಗ್ಗಿಲ್ಲದ; ರುಚಿ ಇರುವ: fresh meat (ಹಳಸಿಲ್ಲದ) ಈಗತಾನೇ ತಯಾರಿಸಿದ ಮಾಂಸ.
- ಹೊಸ; ಬಾಡಿಲ್ಲದ; ಮಾಸಿಲ್ಲದ; ಕಂದದ: fresh flowers ಹೊಸ (ಬಾಡಿಲ್ಲದ) ಹೂಗಳು. fresh memories ಮಾಸದ ನೆನಪುಗಳು.
- ಶುಭ್ರವಾದ; ಸ್ವಚ್ಛ; ಉಜ್ಜ್ವಲ(ವರ್ಣದ); ಕೊಳೆಯಾಗಿರದ: a fresh complexion ಸ್ವಚ್ಛದೇಹ ಕಾಂತಿ.
- ಆರೋಗ್ಯ – ಕಾಂತಿಯ, ಲಕ್ಷಣದ; ಗೆಲುವಾಗಿ ಕಾಣುವ; ತಾರುಣ್ಯದ ಕಳೆಯಿರುವ.
- ಬಳಲಿರದ.
- ಉಲ್ಲಾಸಭರಿತ; ಲವಲವಿಕೆಯುಳ್ಳ; ಚಟುವಟಿಕೆಯ; ಹುಮ್ಮಸ್ಸುಳ್ಳ; ಹುರುಪುಳ್ಳ: I never felt fresher ನನಗೆ ಹಿಂದೆಂದೂ ಇಷ್ಟು ಲವಲವಿಕೆ, ಹುಮ್ಮಸ್ಸು ಇರಲಿಲ್ಲ.
- ಅತಿ ಸಲಿಗೆ ವಹಿಸುವ; ಮುಂದೆ ಬಿದ್ದು ಹೋಗುವ; ಅಧಿಕಪ್ರಸಂಗದ; ಸಲ್ಲದ ಸ್ವಾತಂತ್ರ್ಯವಹಿಸುವ; ಧಾರ್ಷ್ಟ್ಯದ; ದಾಷ್ಟೀಕದ.
- ಕಾಮುಕಧೂರ್ತತೆಯ: he was fresh with the nurses while on duty ಕೆಲಸದ ಮೇಲಿದ್ದಾಗ ಅವನು ದಾದಿಗಳ ಜತೆ ಕಾಮುಕಧೂರ್ತತನದಿಂದ ವರ್ತಿಸಿದ.
ಪದಗುಚ್ಛ
a fresh wind
- ಶುದ್ಧಗಾಳಿ.
- (ಪವನಶಾಸ್ತ್ರ) ಸ್ವಲ್ಪ ಬಿರುಸಾಗಿರುವ ಗಾಳಿ.
ನುಡಿಗಟ್ಟು
- as fresh as a daisy ಸುಟಿಯಾದ; ಹುಮ್ಮಸ್ಸುಳ್ಳ; ಹುರುಪಿನಿಂದ ಕೂಡಿದ; ಚುರುಕಾದ.
- as fresh as paint = ನುಡಿಗಟ್ಟು \((1)\).
- break fresh ground ಹೊಸಮಾರ್ಗ ಹಿಡಿ; ಹೊಸ ಜಾಡು ತುಳಿ; ನೂತನ ವಿಷಯಗಳನ್ನು ಕಂಡುಹಿಡಿ; ಹಳಸಲಲ್ಲದ್ದನ್ನು ಮಾಡು.