See also 2freelance
1freelance ಹ್ರೀಲಾನ್ಸ್‍
ನಾಮವಾಚಕ
  1. ಮಧ್ಯಯುಗದ ಕೂಲಿ ಸಿಪಾಯಿ ಯಾ ಶಸ್ತ್ರ ಜೀವಿ.
  2. ಸ್ವತಂತ್ರ ವೃತ್ತಿಗ; ಯಾವುದೇ ಸಂಸ್ಥೆಯಲ್ಲಿ ಯಾ ಮಾಲಿಕನ ಕೈಕೆಳಗೆ ನಿಗದಿಯಾಗಿ ಕೆಲಸಮಾಡದೆ ಸ್ವತಂತ್ರವಾಗಿ ಕೆಲಸಮಾಡುವ ಲೇಖಕ, ಪತ್ರಿಕಾ ಲೇಖಕ, ಮೊದಲಾದ ವ್ಯಕ್ತಿ.
  3. ಸ್ವತಂತ್ರ ಹೋರಾಟಗಾರ; ಯಾವುದೇ ಒಂದು ವಾದ, ಸಿದ್ಧಾಂತ ಯಾ ಪಕ್ಷದಲ್ಲಿ ವೈಯಕ್ತಿಕವಾಗಿ ಶ್ರದ್ಧೆ ಇಲ್ಲದಿದ್ದರೂ, ಅವುಗಳ ಪರವಾಗಿ ಹೋರಾಡುವವನು.
See also 1freelance
2freelance ಹ್ರೀಲಾನ್ಸ್‍
ಅಕರ್ಮಕ ಕ್ರಿಯಾಪದ

ಸ್ವತಂತ್ರವಾಗಿ – ಕೆಲಸಮಾಡು, ಬರೆ, ಹೋರಾಡು.