See also 2freak  3freak
1freak ಹ್ರೀಕ್‍
ನಾಮವಾಚಕ
  1. ಮನಬಂದ ಚರ್ಯೆ; ವಿಚಿತ್ರ ವರ್ತನೆ.
  2. ಮನೋವಿಕಾರ; ಚಿತ್ತಪಲ್ಲಟ.
  3. ಪೈತ್ಯ; ಹುಚ್ಚು; ಲೀಲೆ; ತಿಕ್ಕಲು; ಹುಚ್ಚಾಟಿಕೆ; ಕ್ಷಣಚಿತ್ತ; ಕ್ಷಣಪಿತ್ತ; ಗಳಿಗೆಗೊಂದು ಮನಸ್ಸಾಗಿರುವುದು: out of mere freak ಮನಸ್ಸಿಗೆ ಹುಚ್ಚುತಿರುಗಿ.
  4. ಮನೋವಿಲಾಸಜನ್ಯ; ಕಲ್ಪನಾವಿಲಾಸದಿಂದ ಹುಟ್ಟಿದುದು.
  5. ವಿಕೃತಿ; ಅಸಹಜವಾದ, ವಿಲಕ್ಷಣವಾದ, ವಿಕಾರವಾದ ವ್ಯಕ್ತಿ ಯಾ ಪ್ರಾಣಿ.
  6. ಅಕಾಲಿಕವಾದ, ಅಸಹಜವಾದ – ವಸ್ತು.
  7. ಮಾದಕವ್ಯಸನಿ; ಮಾದಕ ವಸ್ತುಗಳನ್ನು ಸೇವಿಸುವ ಚಟದವನು.
  8. ಸಂಪ್ರದಾಯಮುಕ್ತ; ಸ್ವತಂತ್ರವರ್ತನೆಯವನು; ಸಂಪ್ರದಾಯ ಜೀವನವಿಧಾನವನ್ನು ಅನುಸರಿಸುವವನು.
ಪದಗುಚ್ಛ

freak of nature = 1freak(6).

See also 1freak  3freak
2freak ಹ್ರೀಕ್‍
ಗುಣವಾಚಕ
  1. ಅಸಹಜ; ಅಸ್ವಾಭಾವಿಕ.
  2. ವಿಚಿತ್ರ; ವಿಲಕ್ಷಣವಾದ.
  3. ಅಕಾಲಿಕ: a freak storm ಅಕಾಲಿಕ ಬಿರುಗಾಳಿ.
See also 1freak  2freak
3freak ಹ್ರೀಕ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. ಮಾದಕವಸ್ತು ಮೊದಲಾದವುಗಳಿಂದ ಉಂಟಾಗುವ ಭ್ರಾಂತಿಗಳಿಗೆ ಒಳಗಾಗುವಂತೆ, ಭ್ರಾಂತಿಗಳನ್ನು ಅನುಭವಿಸುವಂತೆ ಮಾಡು.
  2. ತೀವ್ರ ಭಾವಾವೇಶಕ್ಕೆ ಒಳಗಾಗುವಂತೆ ಮಾಡು.
  3. ಸಂಪ್ರದಾಯಕ್ಕೆ ವ್ಯತಿರಿಕ್ತವಾದ ಜೀವನವಿಧಾನಗಳನ್ನು ಅನುಸರಿಸುವಂತೆ ಮಾಡು; ಸ್ವತಂತ್ರವರ್ತನೆಯವನನ್ನಾಗಿಸು.
ಅಕರ್ಮಕ ಕ್ರಿಯಾಪದ

(ಅಶಿಷ್ಟ)

  1. ಮಾದಕವಸ್ತು ಮೊದಲಾದವುಗಳಿಂದ ಉಂಟಾಗುವ ಭ್ರಾಂತಿಗಳಿಗೆ ಒಳಗಾಗು.
  2. ತೀವ್ರ ಭಾವಾವೇಶಕ್ಕೆ ಒಳಗಾಗು.
  3. ಸಂಪ್ರದಾಯಕ್ಕೆ ವ್ಯತಿರಿಕ್ತವಾದ ಜೀವನವಿಧಾನ ಅನುಸರಿಸು; ಸ್ವತಂತ್ರವರ್ತನೆಯವನಾಗು.