See also 2fray
1fray ಹ್ರೇ
ನಾಮವಾಚಕ
  1. ಗಲಾಟೆಯ ಜಗಳ; ಹುಯಿಲು; ಮಾರಾಮಾರಿ.
  2. ದೊಂಬಿ; ಬೀದಿ ಜಗಳ.
  3. ಹೊಡೆದಾಟ; ಕಾದಾಟ; ಜಗಳ; ಕಲಹ; ತಿಕ್ಕಾಟ (ರೂಪಕವಾಗಿ ಸಹ).
ಪದಗುಚ್ಛ

eager for the fray ಕಾದಾಟಕ್ಕೆ ತವಕಿಸುತ್ತ; ಜಗಳಕ್ಕೆ ಸಿದ್ಧವಾಗಿ.

See also 1fray
2fray ಹ್ರೇ
ಸಕರ್ಮಕ ಕ್ರಿಯಾಪದ
  1. (ಜಿಂಕೆಯ, ಚಿಗರಿಯ ವಿಷಯದಲ್ಲಿ) ಮೂಡುತ್ತಿರುವ ಕೊಂಬಿನ ಸುತ್ತಲೂ ಇರುವ ತುಪ್ಪುಳು ಮೊದಲಾದವನ್ನು ಉಜ್ಜಿಹಾಕು.
  2. ಉಜ್ಜಿಹಾಕು; ತಿಕ್ಕಿ ಸಮೆಯಿಸು.
  3. (ಸಾಮಾನ್ಯವಾಗಿ ಬಟ್ಟೆಯ ಯಾ ಹಗ್ಗದ) ಅಂಚನ್ನು ಸಮೆಸಿ ಜೂಲು ಜೂಲು ಮಾಡು; ತುದಿಯಲ್ಲಿ ಎಳೆ ಬಿಟ್ಟು ಕೊಳ್ಳುವಂತೆ ಮಾಡು.
  4. (ರೂಪಕವಾಗಿ) (ಮನಸ್ಸಿನ ನೆಮ್ಮದಿ, ಸ್ಥೈರ್ಯ, ಮೊದಲಾದವನ್ನು) ಕೆಡಿಸು; ಕಲಕು; ಕಿರಿಕಿರಿಗೊಳಿಸು.
ಅಕರ್ಮಕ ಕ್ರಿಯಾಪದ
  1. (ಜಿಂಕೆ ಮೊದಲಾದವುಗಳ ವಿಷಯದಲ್ಲಿ ತಲೆಯನ್ನು) ಉಜ್ಜಿಕೊ; ಉಜ್ಜಿ ಮೂಡುತ್ತಿರುವ ಕೊಂಬಿನ ತುಪ್ಪುಳುದೊವಲನ್ನು ಕಳೆ.
  2. ಸವೆದು ಅಂಚಿನಲ್ಲಿ ದಾರದಾರವಾಗಿ ಬಿಟ್ಟುಕೊ; ತುದಿಯಲ್ಲಿ ಜೂಲುಜೂಲಾಗು, ಜಾಳಾಗು.
ಪದಗುಚ್ಛ

fray its head (ಜಿಂಕೆಯ ವಿಷಯದಲ್ಲಿ) = 2fray ಸಕರ್ಮಕ ಕ್ರಿಯಾಪದ \((1)\).