See also 2fourth
1fourth ಹೋರ್ತ್‍
ಗುಣವಾಚಕ

ನಾಲ್ಕನೆಯ; ಚತುರ್ಥ.

ಪದಗುಚ್ಛ
  1. a fourth ನಾಲ್ಕನೆಯ ಒಂದು, ಕಾಲು ಭಾಗ.
  2. fourth part = ಪದಗುಚ್ಛ \((1)\).
  3. Fourth Republic (1947–58ರ ನಡುವಿನ) ಹ್ರಾನ್ಸಿನ ನಾಲ್ಕನೆಯ ರಿಪಬ್ಲಿಕ್‍.
  4. the Fourth ನಾಲ್ಕನೆಯ ತಾರೀಖು; ಚತುರ್ಥಿ.
See also 1fourth
2fourth ಹೋರ್ತ್‍
ನಾಮವಾಚಕ
  1. ಚತುರ್ಥ; ನಾಲ್ಕನೆಯವ(ಳು)(ದು).
  2. ಕಾಲುಭಾಗ; ನಾಲ್ಕನೆಯ ಭಾಗ; ಚತುರ್ಥಭಾಗ.
  3. ನಾಲ್ಕು ಜನ ಆಡುವ ಆಟದಲ್ಲಿ ನಾಲ್ಕನೆಯವ.
  4. ಪರೀಕ್ಷೆಯಲ್ಲಿ ನಾಲ್ಕನೆ ದರ್ಜೆಯಲ್ಲಿ ಉತ್ತೀರ್ಣನಾದವ.
  5. ಪರೀಕ್ಷೆಯಲ್ಲಿ ನಾಲ್ಕನೆ ದರ್ಜೆ.
  6. (ಮೋಟಾರು ವಾಹನಗಳಲ್ಲಿ) ನಾಲ್ಕನೆಯ ಗೇರು.
  7. (ಸಂಗೀತ)
    1. (ಒಂದು ಸ್ವರಗ್ರಾಮದಲ್ಲಿ) ಒಂದು ನಿರ್ದಿಷ್ಟ ಸ್ವರಕ್ಕೆ ಮೇಲಿನ ಯಾ ಕೆಳಗಿನ ನಾಲ್ಕನೆಯ ಅಂತರಸ್ವರ.
    2. ಈ ಅಂತರ.
    3. ಒಂದು ಸ್ವರದ ಮತ್ತು ಅದರ ಚತುರ್ಥಾಂತರ ಸ್ವರದ ಸ್ವರಮೈತ್ರಿ.
  8. (ಬಹುವಚನದಲ್ಲಿ) ನಾಲ್ಕನೆಯ ದರ್ಜೆಯ (ಕೀಳುಮಟ್ಟದ) ಸಾಮಾನುಗಳು.
ಪದಗುಚ್ಛ
  1. fourth day ಬುಧವಾರ.
  2. fourth $^1$dimension.
  3. fourth estate.
  4. Fourth of July ಅಮೆರಿಕದ ಸಂಯುಕ್ತ ಸಂಸ್ಥಾನಗಳ ಸ್ವಾತಂತ್ರ್ಯ ದಿನಾಚರಣೆಯ ತಾರೀಖು (4ನೇ ಜುಲೈ 1776).
  5. Fourth of June ಈಟನ್‍ ಕಾಲೇಜಿನ (ಭಾಷಣ ಸ್ಪರ್ಧೆ, ದೋಣಿ ಮೆರವಣಿಗೆ, ಮುಂತಾದ ಕಾರ್ಯಕ್ರಮಗಳಿಂದ ಕೂಡಿದ) ವಾರ್ಷಿಕೋತ್ಸವಾಚರಣೆಯ ದಿನ.
  6. fourth party (ಇತಿಹಾಸ) ನಾಲ್ಕನೆಯ, ಚತುರ್ಥ – ಪಕ್ಷ (1880–05ರ ಸುಮಾರಿನಲ್ಲಿ) ಕನ್ಸರ್ವೆಟಿವ್‍ ಹಾಗೂ ಲಿಬರಲ್‍ ಪಕ್ಷಗಳೆರಡನ್ನೂ ನಿಷ್ಪಕ್ಷಪಾತವಾಗಿ ಖಂಡಿಸಿದ, ಲಾರ್ಡ್‍ ಆರ್‍. ಚರ್ಚಿಲ್‍, ಸರ್‍ ಎಚ್‍. ಡಿ. ವುಲ್ಫ್‍, ಸರ್‍ ಜೆ. ಗಾರ್ಸ್‍ಟ್‍ ಮತ್ತು ಬ್ಯಾಲ್‍ ಹರ್‍ ಮುಂತಾದ ಕೆಲವು ಕನ್ಸರ್ವೆಟಿವ್‍ ಸದಸ್ಯರ ಗುಂಪು.
  7. fourth wall ನಾಲ್ಕನೆಯ ಗೋಡೆ; (ವೀಕ್ಷಕರು ನಾಟಕ ಮೊದಲಾದವನ್ನು ವೀಕ್ಷಿಸಬಹುದಾದ) ರಂಗಸ್ಥಳದ ತೆರೆದ ಮುಂಭಾಗ.