See also 2dimension
1dimension ಡೈ(ಡಿ)ಮೆನ್ಷನ್‍
ನಾಮವಾಚಕ
  1. ಅಳತೆ; ಪ್ರಮಾಣ; ಪರಿಮಾಣ; (ಉದ್ದ, ದಪ್ಪ, ಎತ್ತರ, ಗಾತ್ರ, ಮೊದಲಾದ) ಯಾವುದೇ ಅಳೆಯಬಹುದಾದ ಅಂಶ: of great dimensions ಬಹಳ ದೊಡ್ಡ (ಅಳತೆಯ).
  2. (ಗಣಿತ) ವಿಮಿತಿ; ಆಯಾಮ; ಒಂದು ಬಿಂದುವಿನ ಸ್ಥಾನ ನಿರ್ಣಯಿಸಲು ಸೂಚಿಸಬೇಕಾಗುವ ಮೂರು ನಿರ್ದೇಶಾಂಕಗಳಲ್ಲಿ ಒಂದು; ಒಂದು ಆಕೃತಿಯನ್ನು ಅಳೆಯಬಹುದಾದ (ಉದ್ದ, ಅಗಲ, ಎತ್ತರ ಎಂಬ) ಮೂರು ದಿಕ್ಕುಗಳಲ್ಲೊಂದು (ಬಿಂದುವಿಗೆ ವಿಮಿತಿಗಳಿಲ್ಲ, ಸರಳರೇಖೆಗೆ ಒಂದು ವಿಮಿತಿ, ಸಮತಲಕ್ಕೆ ಎರಡು, ಮತ್ತು ಘನಕ್ಕೆ ಮೂರು ವಿಮಿತಿಗಳು).
  3. (ಭೌತವಿಜ್ಞಾನ) ವಿಮಿತಿ; ಯಾವುದೇ ಜನ್ಯ ಏಕಮಾನದಲ್ಲಿ ಸೇರಿಕೊಂಡಿರುವ ಮೂಲಭೂತ ಏಕಮಾನಗಳಾದ ದ್ರವ್ಯರಾಶಿ (M), ಉದ್ದ (L), ಮತ್ತು ಕಾಲ (T)ಗಳು ಮತ್ತು ಅವುಗಳ ಘಾತಗಳು: the dimensions of enertgy are ${\rm M}^2{\rm L}^2{\rm T}^{-2}$ ಬಲದ ವಿಮಿತಿಗಳು ${\rm M}^2{\rm L}^2{\rm T}^{-2}$.
  4. (ಬೀಜಗಣಿತ) ಪರಿಮಾಣ; ಬೀಜಗಣಿತ ಪದದಲ್ಲಿ ಅಪವರ್ತನಗಳಾಗಿರುವ ಅಜ್ಞಾತಗಳು: $x^3$ ಅ $x^2y$ ಹವೆ ಎಅ ರೆಎ ದಿಮೆಸಿಒ, ಹೆರೆಅ $x^2$ ಅ $xy$ ಹವೆ ತೌಒ:- $x^3$ ಮತ್ತು $x^2y$ಗಳಲ್ಲಿ ಒಂದೊಂದರಲ್ಲೂ ಮುರು ಪರಿಮಾಣಗಳಿವೆ, ಆದರೆ $x^2$ ಮತ್ತು $xy$ ಗಳಲ್ಲಿ ಎರಡೆರಡು ಪರಿಮಾಣಗಳಿವೆ.
  5. ಆಯಾಮ; ವ್ಯಾಪ್ತಿ; ಒಂದು ನಿರ್ದಿಷ್ಟ ಅಂಶದಲ್ಲಿ ಹರವು, ವಿಸ್ತಾರ: gave the problem a new dimension ಸಮಸ್ಯೆಗೆ ಹೊಸದೊಂದು ಆಯಾಮ ಕೊಟ್ಟಿತು.
ಪದಗುಚ್ಛ
  1. fourth dimension ನಾಲ್ಕನೆ ಆಯಾಮ; ಚತುರ್ಥ ವಿಮಿತಿ:
    1. ಘನ ಆಯಾಮ; ವಸ್ತುಗಳಿಗೆ ಘನತ್ವವನ್ನು ಕೊಡುವ ಆಯಾಮ.
    2. ಉದ್ದ, ಅಗಲ, ದಪ್ಪಗಳಂತೆ ಆಯಾಮವಾಗಿ ಪರಿಗಣಿಸಿರುವ ಕಾಲ.
  2. the three dimensions ಮೂರು ಆಯಾಮಗಳು; ತ್ರಿವಿಮಿತಿಗಳು; ಉದ್ದ, ಅಗಲ ಮತ್ತು ದಪ್ಪ.