See also 2four
1four ಹೋರ್‍
ಗುಣವಾಚಕ

ನಾಲ್ಕು; ನಾಲ್ಕಾಗಿರುವ; ನಾಲ್ಕು ಸಂಖ್ಯೆಯ.

ಪದಗುಚ್ಛ
  1. four corners of document ದಸ್ತಾವೇಜಿನ – ವ್ಯಾಪ್ತಿ, ವಿಸ್ತಾರ, ಎಲ್ಲೆಕಟ್ಟು, ಪರಿಮಿತಿ.
  2. four corners of earth (ಪೃಥಿವಿಯ) ಮೂಲೆಮೂಲೆಗಳು; ಪ್ರಪಂಚದ ಅತ್ಯಂತ ದೂರಪ್ರದೇಶಗಳು.
  3. four fingers ನಾಲ್ಕು ಅಂಕೆ; ಚತುಸ್ಸಂಖ್ಯೆ: 1000 ದಿಂದ 9999 ರವರೆಗಿನ ಯಾವುದೇ ಸಂಖ್ಯೆ.
  4. fours ಪ್ರತಿ ದೋಣಿಯಲ್ಲಿ ಹುಟ್ಟುಹಾಕುವವರು ನಾಲ್ವರಿರುವ ದೋಣಿಗಳ ಪಂದ್ಯ.
  5. the four hundred (ಅಮೆರಿಕನ್‍ ಪ್ರಯೋಗ) ಊರಿನ ಹತ್ತು ಸಮಸ್ತರು, ಗಣ್ಯರು; ಯಾವುದೇ ಸ್ಥಳದ ವಿಶಿಷ್ಟ, ಗಣ್ಯ (ಸಮಾಜ) ಸಮುದಾಯ.
  6. within the seas ಗ್ರೇಟ್‍ಬ್ರಿಟನ್ನಿನಲ್ಲಿ; ಗ್ರೇಟ್‍ಬ್ರಿಟನ್ನಿನ ಸರಹದ್ದಿನಲ್ಲಿ.
See also 1four
2four ಹೋರ್‍
ನಾಮವಾಚಕ
  1. ನಾಲ್ಕು.
  2. ನಾಲ್ಕನ್ನು ಸೂಚಿಸುವ ಸಂಖ್ಯೆ ಯಾ ಸಂಕೇತ (4, iv, IV, ವಿರಳವಾಗಿ iiii, IIII).
  3. ನಾಲ್ಕು ಕಳಾವರು ಮೊದಲಾದ ಗುರುತುಗಳಿರುವ ಇಸ್ಪೀಟೆಲೆ ಮೊದಲಾದವು.
  4. ನಾಲ್ಕರಿಂದ ಸೂಚಿತವಾದ ಗಾತ್ರ.
  5. (ಮುಖ್ಯವಾಗಿ ಕುದುರೆಗಳು, ಇಸ್ಪೀಟು ಆಡುವವರು, ಹುಟ್ಟುದೋಣಿಯಲ್ಲಿ ಹುಟ್ಟು ಹಾಕುವವರು, ಮೊದಲಾದವರ) ಚತುಷ್ಟಯ; ನಾಲ್ವರ ಯಾ ನಾಲ್ಕರ ತಂಡ.
  6. ದಾಳದ ನಾಲ್ಕು ಗುರುತಿರುವ ಮುಖ.
  7. (ದಾಳದ) ನಾಲ್ಕರ ಗರ.
  8. (ಕ್ರಿಕೆಟ್‍) ಹೋರ್‍; ನಾಲ್ಕು ರನ್‍ ಸಿಕ್ಕುವ ಹೊಡೆತ.
  9. (ಬಹುವಚನದಲ್ಲಿ) 4ನೇ ನಂಬರಿನ ಸೈಜಿನ ಯಾ ಅಳತೆಯ ಷೂಗಳು, ಕೈಗವಸುಗಳು, ಮೊದಲಾದವು.
  10. ಒಂದು ಪೌಂಡು ತೂಕಕ್ಕೆ ನಾಲ್ಕು ತೂಗುವ ಮೇಣದ ಬತ್ತಿಗಳು.
ಪದಗುಚ್ಛ

on all fours

  1. (ಚತುಷ್ಪಾದಿಯ ವಿಷಯದಲ್ಲಿ) ನಾಲ್ಕೂ ಕಾಲುಗಳ ಮೇಲೆ.
  2. ಅಂಬೆಗಾಲಿಕ್ಕಿ; ಕೈಕಾಲು ಮತ್ತು ಮಂಡಿ ಊರಿ.
  3. (ರೂಪಕವಾಗಿ) ಸಂಪೂರ್ಣ ಸಾಮ್ಯ, ಸಾದೃಶ್ಯ, ಹೋಲಿಕೆ ಉಳ್ಳ: the cases are not on all fours ಆ ಸಂದರ್ಭಗಳು, ವಿಷಯಗಳು ಪರಸ್ಪರ ಸಂಪೂರ್ಣ ಸದೃಶವಾಗಿಲ್ಲ.