See also 2fossil
1fossil ಹಾಸಿಲ್‍
ಗುಣವಾಚಕ
  1. ಹೂತುಹೋಗಿದ್ದ.
  2. ಅಗೆದು ತೆಗೆದ: fossil fuel ಅಗೆದು ತೆಗೆದ ಕಲ್ಲಿದ್ದಲು ಮೊದಲಾದ ಉರುವಲು.
  3. (ರೂಪಕವಾಗಿ ಸಹ) ಪಳೆಯುಳಿಕೆಯ; ಜೀವ್ಯವಶೇಷದ; ಹಾಸಿಲಾದ; ರಾಸಾಯನಿಕ ಯಾ ಇತರ ಅಲ್ಪಸ್ವಲ್ಪ ಬದಲಾವಣೆಗಳನ್ನು ಹೊಂದಿ ಭೂಸ್ತರದಲ್ಲೇ ಉಳಿದು ಬಂದ, ಗತಕಾಲದ (ಮುಖ್ಯವಾಗಿ ಚರಿತ್ರಪೂರ್ವಯುಗದ) ಸಸ್ಯ ಯಾ ಪ್ರಾಣಿಯ ಅವಶೇಷಗಳೆಂದೋ ಗುರುತುಗಳೆಂದೋ ಗೊತ್ತು ಮಾಡಬಹುದಾದ ವಸ್ತುವಿನ: fossil bones, shells, ivory ಪಳೆಯುಳಿಕೆಯ ಎಲುಬುಗಳು, ಚಿಪ್ಪುಗಳು, ದಂತ. words are fossil thoughts ಪದಗಳು ಏನಿದ್ದರೂ ಆಲೋಚನೆಗಳ ಪಳೆಯುಳಿಕೆಗಳು.
  4. ಪುರಾತನ ಕಾಲದ; ಓಬೀರಾಯನ ಕಾಲದ; ಜನಮೇಜಯನ ಕಾಲದ; ಹಳೆಯ ಕಂದಾಚಾರದ; ರೂಢಿ ತಪ್ಪಿದ; ಬಹಳ ಹಳೆಯದಾದ; ಬೆಳವಣಿಗೆ ನಿಂತ; ಬೆಳೆಯುವ ಸತ್ತ್ವವನ್ನು ಕಳೆದುಕೊಂಡ; ಇನ್ನು ಬೆಳೆಯಲು ಅಸಮರ್ಥವಾದ: a fossil approach to teaching ಬೋಧನೆಗೆ ಓಬೀರಾಯನ ಕಾಲದ ಮಾರ್ಗ.
  5. (ಪದಗಳ ವಿಷಯದಲ್ಲಿ) ಗತಪ್ರಯೋಗದ; (ಬಳಕೆಯಲ್ಲಿರುವ ಕೆಲವು ಪದಗುಚ್ಛವನ್ನು ಬಿಟ್ಟು ಉಳಿದೆಡೆ) ಬಳಕೆ ತಪ್ಪಿಹೋಗಿರುವ.
See also 1fossil
2fossil ಹಾಸಿಲ್‍
ನಾಮವಾಚಕ
  1. ಹಾಸಿಲು; ಪಳೆಯುಳಿಕೆ; ಜೀವ್ಯವಶೇಷ; ರಾಸಾಯನಿಕ ಯಾ ಇತರ ಅಲ್ಪಸ್ವಲ್ಪ ಮಾರ್ಪಾಡುಗಳನ್ನು ಹೊಂದಿ ಭೂಸ್ತರದಲ್ಲೇ ಉಳಿದುಬಂದ, ಗತಕಾಲದ (ಮುಖ್ಯವಾಗಿ ಚರಿತ್ರಪೂರ್ವಕಾಲದ) ಸಸ್ಯ ಯಾ ಪ್ರಾಣಿಯ ಅವಶೇಷಗಳೆಂದೋ ಗುರುತುಗಳೆಂದೋ ಗೊತ್ತುಮಾಡಬಹುದಾದ ವಸ್ತು: hunting for fossils ಪಳೆಯುಳಿಕೆಗಾಗಿ ಹುಡುಕಾಡುವುದು.
  2. ಮುದಿಗೊಡ್ಡು; ಓಬೀರಾಯನ ಕಾಲದ ವ್ಯಕ್ತಿ ಯಾ ವಸ್ತು; ಪುರಾತನ ಕಾಲದ ಮನುಷ್ಯ ಯಾ ವಸ್ತು.
  3. ಗತಶಬ್ದ; ಗತಪ್ರಯೋಗ; (ಬಳಕೆಯಲ್ಲಿರುವ ಕೆಲವು ಪದಗುಚ್ಛಗಳನ್ನು ಬಿಟ್ಟು ಉಳಿದೆಡೆ) ಬಳಕೆ ತಪ್ಪಿಹೋಗಿರುವ ಪದ, ಉದಾಹರಣೆಗೆ hue and cry ಎಂಬ ಪದಗುಚ್ಛದಲ್ಲಿ hue ಎಂಬ ಪದ.