See also 1fossil
2fossil ಹಾಸಿಲ್‍
ನಾಮವಾಚಕ
  1. ಹಾಸಿಲು; ಪಳೆಯುಳಿಕೆ; ಜೀವ್ಯವಶೇಷ; ರಾಸಾಯನಿಕ ಯಾ ಇತರ ಅಲ್ಪಸ್ವಲ್ಪ ಮಾರ್ಪಾಡುಗಳನ್ನು ಹೊಂದಿ ಭೂಸ್ತರದಲ್ಲೇ ಉಳಿದುಬಂದ, ಗತಕಾಲದ (ಮುಖ್ಯವಾಗಿ ಚರಿತ್ರಪೂರ್ವಕಾಲದ) ಸಸ್ಯ ಯಾ ಪ್ರಾಣಿಯ ಅವಶೇಷಗಳೆಂದೋ ಗುರುತುಗಳೆಂದೋ ಗೊತ್ತುಮಾಡಬಹುದಾದ ವಸ್ತು: hunting for fossils ಪಳೆಯುಳಿಕೆಗಾಗಿ ಹುಡುಕಾಡುವುದು.
  2. ಮುದಿಗೊಡ್ಡು; ಓಬೀರಾಯನ ಕಾಲದ ವ್ಯಕ್ತಿ ಯಾ ವಸ್ತು; ಪುರಾತನ ಕಾಲದ ಮನುಷ್ಯ ಯಾ ವಸ್ತು.
  3. ಗತಶಬ್ದ; ಗತಪ್ರಯೋಗ; (ಬಳಕೆಯಲ್ಲಿರುವ ಕೆಲವು ಪದಗುಚ್ಛಗಳನ್ನು ಬಿಟ್ಟು ಉಳಿದೆಡೆ) ಬಳಕೆ ತಪ್ಪಿಹೋಗಿರುವ ಪದ, ಉದಾಹರಣೆಗೆ hue and cry ಎಂಬ ಪದಗುಚ್ಛದಲ್ಲಿ hue ಎಂಬ ಪದ.