See also 2fork
1fork ಹಾರ್ಕ್‍
ನಾಮವಾಚಕ
  1. (ಕೊತ್ತುವುದಕ್ಕೆ, ಎತ್ತುವುದಕ್ಕೆ, ಎತ್ತಿಸಾಗಿಸಲು, ಎತ್ತಿ ಎಸೆಯಲು, ವ್ಯವಸಾಯದಲ್ಲಿ ಉಪಯೋಗಿಸುವ) ಕವಲುಗೋಲು ಯಾ ಕವಲುಗುದ್ದಲಿ.
  2. (ಊಟ, ಅಡುಗೆ ಮಾಡುವಾಗ ಬಳಸುವ) ಹೋರ್ಕು; ಮುಳ್ಳು ಚಮಚ; ಕವಲುಚಮಚ.
  3. ಶ್ರುತಿ ಕವೆ; ಬಡಿದಾಗ ಒಂದು ನಿರ್ದಿಷ್ಟ ಆವರ್ತನದ ನಾದವನ್ನು ಕೊಡುವ ಉಕ್ಕಿನ ಕವೆ.
  4. (ದ್ರಾಕ್ಷಿಯ ಚಪ್ಪರ ಮೊದಲಾದವಕ್ಕೆ ಆಸರೆಯಾಗಿ ನೆಡುವ ಯಾ ಭಾರವಾದ ವಸ್ತುವನ್ನು ಎತ್ತಲು ಅದರ ಕೆಳಕ್ಕೆ ತಳ್ಳುವ) ಕವಲುಗಡ್ಡಿ; ಕವೆ; ಕವೆಗೋಲು; ಕವೆಮರ.
  5. ಹೋರ್ಕು; ಬೈಸಿಕಲ್‍ ಚಕ್ರಕ್ಕೆ ಆಸರೆಯಾಗಿ ಬಳಸುವ, ಕವಲಿನಾಕಾರದ ಏರ್ಪಾಟು.
  6. ಕವಲೊಡೆಯುವುದು; ಕವಲೊಡೆತ; ಎರಡು ಶಾಖೆಗಳಾಗಿ ಒಡೆಯುವುದು (ಉದಾಹರಣೆಗೆ ಮರದ ಕೊಂಬೆ, ರಸ್ತೆ ಮನುಷ್ಯನ ಕಾಲುಗಳು).
  7. ಅಂಥ ಒಂದು ಕವಲು.
  8. ಕವಲುಮಿಂಚು; ಸೀಳುಮಿಂಚು.
  9. (ಚದುರಂಗ) ಒಂದೇ ಕಾಯಿಯಿಂದ ಎರಡು ಕಾಯಿಗಳನ್ನು ಒಟ್ಟಿಗೆ ಹೊಡೆಯುವುದು.
ಪದಗುಚ್ಛ
  1. fork lunch, supper, etc. ಮುಳ್ಳು ಚಮಚದೂಟ; ಮುಳ್ಳುಚಮಚದಿಂದ ತಿನ್ನುವಂಥ ಭಕ್ಷಗಳುಳ್ಳ ಊಟ, ರಾತ್ರಿಯೂಟ, ಮೊದಲಾದವು.
  2. tuning fork = 1fork(3).
See also 1fork
2fork ಹಾರ್ಕ್‍
ಸಕರ್ಮಕ ಕ್ರಿಯಾಪದ
  1. ಕವಲುಗುದ್ದಲಿಯಿಂದ ಅಗೆ, ತೋಡು.
  2. ಕವೆಯಿಂದ ಯಾ ಕವೆಗೋಲಿನಿಂದ – ಎತ್ತು, ಹೊರು, ಸಾಗಿಸು, ಯಾ ಎಸೆ.
  3. ಕವಲಿನಂತೆ ಮಾಡು; ಕವಲಾಗಿಸು; ಕವಲಿನಾಕಾರವಾಗಿಸು: forking her fingers ಅವಳು ಬೆರಳುಗಳನ್ನು ಕವಲಿನಂತೆ ಮಾಡಿ.
  4. (ಮಾಂಸ ಮೊದಲಾದವುಗಳನ್ನು) ಹೋರ್ಕಿನಿಂದ ಚುಚ್ಚು, ಚುಚ್ಚಿ ಎತ್ತು, ಎಸೆ.
  5. (ಚದುರಂಗ) (ಎರಡು ಕಾಯಿಗಳನ್ನು) ಒಟ್ಟಿಗೆ ಒಂದೇ ಕಾಯಿಯಿಂದ ಹೊಡೆ.
ಅಕರ್ಮಕ ಕ್ರಿಯಾಪದ
  1. ಕವಲೊಡೆ; ಕವಲಾಗು; ಶಾಖೆಯಾಗು; ಕೊಂಬೆಯಾಗು.
  2. (ಕವಲೊಡೆದ ರಸ್ತೆಗಳಲ್ಲಿ ಯಾವುದಾದರೊಂದು) ಕವಲುದಾರಿ ಹಿಡಿ; ಕವಲುದಾರಿಯಲ್ಲಿ ಹೋಗು.
ನುಡಿಗಟ್ಟು

fork out (or over or up) (ಅಶಿಷ್ಟ) ಕೊಟ್ಟುಬಿಡು; ತೆತ್ತುಬಿಡು; ಒಪ್ಪಿಸಿಬಿಡು.