See also 1fork
2fork ಹಾರ್ಕ್‍
ಸಕರ್ಮಕ ಕ್ರಿಯಾಪದ
  1. ಕವಲುಗುದ್ದಲಿಯಿಂದ ಅಗೆ, ತೋಡು.
  2. ಕವೆಯಿಂದ ಯಾ ಕವೆಗೋಲಿನಿಂದ – ಎತ್ತು, ಹೊರು, ಸಾಗಿಸು, ಯಾ ಎಸೆ.
  3. ಕವಲಿನಂತೆ ಮಾಡು; ಕವಲಾಗಿಸು; ಕವಲಿನಾಕಾರವಾಗಿಸು: forking her fingers ಅವಳು ಬೆರಳುಗಳನ್ನು ಕವಲಿನಂತೆ ಮಾಡಿ.
  4. (ಮಾಂಸ ಮೊದಲಾದವುಗಳನ್ನು) ಹೋರ್ಕಿನಿಂದ ಚುಚ್ಚು, ಚುಚ್ಚಿ ಎತ್ತು, ಎಸೆ.
  5. (ಚದುರಂಗ) (ಎರಡು ಕಾಯಿಗಳನ್ನು) ಒಟ್ಟಿಗೆ ಒಂದೇ ಕಾಯಿಯಿಂದ ಹೊಡೆ.
ಅಕರ್ಮಕ ಕ್ರಿಯಾಪದ
  1. ಕವಲೊಡೆ; ಕವಲಾಗು; ಶಾಖೆಯಾಗು; ಕೊಂಬೆಯಾಗು.
  2. (ಕವಲೊಡೆದ ರಸ್ತೆಗಳಲ್ಲಿ ಯಾವುದಾದರೊಂದು) ಕವಲುದಾರಿ ಹಿಡಿ; ಕವಲುದಾರಿಯಲ್ಲಿ ಹೋಗು.
ನುಡಿಗಟ್ಟು

fork out (or over or up) (ಅಶಿಷ್ಟ) ಕೊಟ್ಟುಬಿಡು; ತೆತ್ತುಬಿಡು; ಒಪ್ಪಿಸಿಬಿಡು.