See also 2fold  3fold  4fold
1fold ಹೋಲ್ಡ್‍
ನಾಮವಾಚಕ
  1. (ಕುರಿಗಳ, ಕೆಲವೊಮ್ಮೆ ಇತರ ಸಾಕುಪ್ರಾಣಿಗಳ) ದೊಡ್ಡಿ; ಹಟ್ಟಿ; ರೊಪ್ಪ.
  2. (ರೂಪಕವಾಗಿ) ಚರ್ಚು; ಚರ್ಚಿಗೆ ಸೇರಿದವರು: he preached to the fold ಅವನು ಚರ್ಚಿನವರಿಗೆ ಉಪದೇಶ ಮಾಡಿದನು.
  3. (ಸಮಾನ) ನಂಬಿಕೆಯುಳ್ಳವರ ಸಮೂಹ; ಶ್ರದ್ಧಾವಂತರ ಸಮಾಜ.
  4. ಕುರಿಹಿಂಡು; ಕುರಿಮಂದೆ.
ಪದಗುಚ್ಛ

true fold = 1fold(2).

See also 1fold  3fold  4fold
2fold ಹೋಲ್ಡ್‍
ಸಕರ್ಮಕ ಕ್ರಿಯಾಪದ
  1. (ಕುರಿ ಮೊದಲಾದವನ್ನು) ರೊಪ್ಪದಲ್ಲಿ ಕೂಡು; ದೊಡ್ಡಿಯಲ್ಲಿ ಕೂಡಿಹಾಕು; ದೊಡ್ಡಿಗೆ ಅಟ್ಟು; ಹಟ್ಟಿಯಲ್ಲಿ ಕೂಡಿಸು.
  2. (ಜಈನಿನಲ್ಲಿ ಗೊಬ್ಬರಕ್ಕಾಗಿ) ಮುಂದೆ ಬಿಡು; ಮುಂದೆ ನಿಲ್ಲಿಸು; ಕುರಿಗಳನ್ನು ಮಂದೆಮಂದೆಯಾಗಿ ನಿಲ್ಲಿಸು.
See also 1fold  2fold  4fold
3fold ಹೋಲ್ಡ್‍
ಸಕರ್ಮಕ ಕ್ರಿಯಾಪದ
  1. ಮಡಿಸು; ಪದರಮಾಡು; ಗಳಿಗೆಮಾಡು.
  2. (ವಸ್ತುವಿನ ಭಾಗವನ್ನು) ಬಗ್ಗಿಸು; ಬಾಗಿಸು; ತಿರುಗಿಸು: fold back ಹಿಂದಕ್ಕೆ – ಬಗ್ಗಿಸು; ತಿರುಗಿಸು.
  3. (ತೋಳು ಮೊದಲಾದವುಗಳಿಂದ) ಸುತ್ತು; ಬಳಸು; ಸುತ್ತುವರಿ; ಬಾಚು; ತಬ್ಬು.
  4. (ತೋಳು) ತೆಕ್ಕೆಹಾಕು; ಎದೆಯ ಮೇಲೆ ಅಡ್ಡಡ್ಡಲಾಗಿಡು.
  5. (ಕೈ) ಜೋಡಿಸು; ಕಟ್ಟಿಕೊ; ಮುಗಿ.
  6. ಸುತ್ತು; ಸುತ್ತುವರಿ; ಸುತ್ತುಗಟ್ಟು; ಆವರಿಸು: fold it in paper ಅದನ್ನು ಕಾಗದದಲ್ಲಿ ಸುತ್ತು. hills folded in mist ಮಂಜಿನಿಂದ ಆವರಿಸಲ್ಪಟ್ಟ ಗುಡ್ಡಗಳು.
  7. (ತೋಳುಗಳಿಂದ, ಎದೆಗೆ) ಬಾಚಿಕೊ; ತಬ್ಬಿಕೊ; ಅಪ್ಪಿಕೊ: folding her son to her breast ಆವಳು ಮಗನನ್ನು ಎದೆಗೆ ತಬ್ಬಿಕೊಂಡು.
  8. (ಪಾಕಶಾಸ್ತ್ರ) ಬೆರಸು; ಸೇರಿಸು; ಕಲಸು; (ಕುಟ್ಟದೆ, ಕಲಕದೆ) ಆಹಾರಾಂಶವನ್ನು ಯಾವುದೇ ಮಿಶ್ರಣದಲ್ಲಿ ಸೇರುವಂತೆ ಚಮಚ ಮೊದಲಾದವುಗಳಿಂದ ಹಾಕು, ಸೇರಿಸು: fold egg-whites into cake mix ಮೊಟ್ಟೆಯ ಬಿಳಿಲೋಳೆಯನ್ನು ಕೇಕ್‍ ಹಿಟ್ಟಿನಲ್ಲಿ ಕಲಸು.
  9. (ಇಸ್ಪೀಟು) (ಸೋಲನ್ನು ಒಪ್ಪಿಕೊಳ್ಳಲು ಯಾ ತಾನು ಆಟ ಮುಂದುವರಿಸುವುದಿಲ್ಲವೆಂದು ಸೂಚಿಸಲು) ಎಲೆಗಳನ್ನು ಕವುಚು.
ಅಕರ್ಮಕ ಕ್ರಿಯಾಪದ
  1. ಮಡಿಸಿಕೊ; ಪದರವಾಗು; ಮಡಿಚಿಕೊಳ್ಳು; ಮಡಿಕೆಯಾಗು.
  2. ಮಡಿಸುವಂತಿರು; ಮಡಿಸಲಾಗು: folding chair ಮಡಿಚುಕುರ್ಚಿ; ಮಡಿಸಲು ಬರುವ ಕುರ್ಚಿ.
  3. ಮುರಿದು ಬೀಳು; ಕುಸಿದು ಬೀಳು (ರೂಪಕವಾಗಿ ಸಹ).
  4. ಅಂತ್ಯವಾಗು; ಕೊನೆಗೊಳ್ಳು; ಮುಗಿ.
  5. ದಿವಾಳಿಯಾಗು; ಪಾಪರಾಗು.
ಪದಗುಚ್ಛ
  1. fold away ಮಡಿಚಿ ಹೆಚ್ಚು ಅಡಕವಾಗಿಸು; ಅಡಕವಾಗಿರುವಂತೆ ಮಾಡು.
  2. fold in = 3fold ಸಕರ್ಮಕ ಕ್ರಿಯಾಪದ \((7)\).
  3. fold out ಮಡಿಕೆ ಬಿಚ್ಚಲಾಗುವಂತಿರು.
  4. fold up
    1. ಮಡಿಸಿ ಆಡಕಮಾಡು.
    2. (ರೂಪಕವಾಗಿ) ಕುಸಿದು ಬೀಳು; ಮುರಿದು ಬೀಳು: he folded up when the prosecutor discredited his story ಪ್ರಾಸಿಕ್ಯೂಟರು ಫಿರ್ಯಾದಿಯ ಕತೆಯನ್ನು ನಂಬದಿದ್ದಾಗ ಅವನು ಕುಸಿದು ಬಿದ್ದನು.
    3. (ರೂಪಕವಾಗಿ) ಮುಗಿದುಹೋಗು; ಕೊನೆಗೊಳ್ಳು; ಅಂತ್ಯಗೊಳ್ಳು.
    4. ಪಾಪರಾಗು; ದಿವಾಳಿಯಾಗು.
See also 1fold  2fold  3fold
4fold ಹೋಲ್ಡ್‍
ನಾಮವಾಚಕ
  1. ಮಡಿಕೆ; ಪದರ; ಗಳಿಗೆ; ನಿರಿಗೆ; ಮಡಿಚಿರುವಿಕೆ: a dress hanging in loose folds ಅಳ್ಳಕವಾದ ಪದರಗಳಲ್ಲಿ ತೂಗಾಡುವ ಉಡುಪು.
  2. ಮಡಿಕೆ; ಗಳಿಗೆ; ಮಡಿ; ಮಡಿಚಿರುವ ವಸ್ತುವಿನ ಒಳಭಾಗ: carried it in a fold of her dress ಅದನ್ನು ತನ್ನ ಉಡುಪಿನ ಮಡಿಕೆಯಲ್ಲಿ ಒಯ್ದಳು.
  3. (ಬೆಟ್ಟ ಮೊದಲಾದವುಗಳಲ್ಲಿಯ) ದರಿ; ಗೊಂದಿ; ಟೊಳ್ಳು; ಡೊಗರು.
  4. (ಹಾವು, ಹಗ್ಗ, ಮೊದಲಾದವುಗಳ) ಮಂಡಲ; ಸುರುಳಿ; ಸುತ್ತು.
  5. ಮಡಿಕೆ; ಮಡಿಸುವಿಕೆ: another fold gives 32mo ಇನ್ನೊಂದು ಮಡಿಕೆಯು, ಹಾಳೆಗೆ 32 ಪುಟಗಳನ್ನು ಕೊಡುತ್ತದೆ.
  6. ಮಡಿಕೆಯ ಗೆರೆ; ಗಳಿಗೆಯ ಗೆರೆ; ಪದರದ ಎಳೆ; ಮಡಿಕೆಯ ಗುರುತು.
  7. (ಭೂವಿಜ್ಞಾನ) (ಭೂಸ್ತರಗಳ) ಮಡಿಕೆ; ಬಾಗು.