See also 2fog  3fog  4fog
1fog ಹಾಗ್‍
ನಾಮವಾಚಕ
  1. ಕೂಳೆಹಲ್ಲು; ಗದ್ದೆ ಹುಲ್ಲು; ಎರಡನೇ ಕಟಾವಿನ ಹುಲ್ಲು.
  2. ಒರಟುಹುಲ್ಲು; ಚಳಿಗಾಲದಲ್ಲಿ ಕೊಯ್ಯದೆ ಬಿಟ್ಟಿರುವ ಉದ್ದ ಹುಲ್ಲು.
  3. (ಹೋಲ್ಕಸ್‍ ಲ್ಯಾನಟಸ್‍ ಕುಲದ) ಮೇವು ಹುಲ್ಲು.
See also 1fog  3fog  4fog
2fog ಹಾಗ್‍
ಸಕರ್ಮಕ ಕ್ರಿಯಾಪದ
  1. (ಹೊಲವನ್ನು) ಕೂಳೆಹುಲ್ಲು ಬೆಳೆಗೆ ಬಿಡು; ಕೂಳೆಹುಲ್ಲು ಬೆಳೆಯಲು ಬಿಡು.
  2. (ದನಕರುಗಳಿಗೆ) ಕೂಳೆಹುಲ್ಲು – ಮೇಯಿಸು, ತಿನ್ನಿಸು.
See also 1fog  2fog  4fog
3fog ಹಾಗ್‍
ನಾಮವಾಚಕ
  1. ದಟ್ಟ ಮಂಜು.
  2. ಮಂಜಿನಿಂದುಂಟಾದ – ಮಬ್ಬು, ಮಸುಕು, ಕಾವಳ.
  3. ಮಬ್ಬು; ಮಬ್ಬುಕವಿದ ವಾತಾವರಣ.
  4. (ಛಾಯಾಚಿತ್ರಣ) ಮಸುಕು; ಮಬ್ಬು; ಅಭಿವರ್ಧಿಸಿದ ಫಲಕದ ಮೇಲಿನ ಉಬ್ಬು.
ನುಡಿಗಟ್ಟು

in a fog ದಿಕ್ಕು ತೋರದೆ; ದಿಗ್ಭ್ರಮೆ ಹಿಡಿದು; ಮಂಕು ಕವಿದಂತೆ; ತಬ್ಬಿಬ್ಬಾಗಿ: I am in a fog as to what to do next ಮುಂದೇನು ಮಾಡಬೇಕೆಂಬುದರ ಬಗ್ಗೆ ನನಗೆ ದಿಕ್ಕು ತೋರದಾಗಿದೆ.

See also 1fog  2fog  3fog
4fog ಹಾಗ್‍
ಸಕರ್ಮಕ ಕ್ರಿಯಾಪದ
  1. ಮಂಜಿನಿಂದ ಮುಸುಕು; ಕಾವಳದಿಂದ ಕವಿ; ಮಂಜಿನಿಂದ – ಮುಚ್ಚು, ಆವರಿಸು: fogged landscape ಮಂಜು ಮುಸುಕಿದ ಪ್ರದೇಶ.
  2. ಮಂಜಿನಿಂದಲೋ ಎಂಬಂತೆ ಮುಸುಕು, ಕವಿ.
  3. ದಿಕ್ಕು ತೋರದಂತೆ ಮಾಡು; ಕಕ್ಕಾಬಿಕ್ಕಿ ಮಾಡು; ದಿಗ್ಭ್ರಮೆ ಹಿಡಿಸು.
  4. (ಛಾಯಾಚಿತ್ರಣ) (ನೆಗೆಟಿವ್‍ ಪ್ರತಿಯನ್ನು) ಮಬ್ಬುಗವಿಸು; ಮಂಜುಮಾಡು; ಮಸುಕುಗೊಳಿಸು.
ಅಕರ್ಮಕ ಕ್ರಿಯಾಪದ
  1. ಮಂಜು ಮುಸುಕಿರು; ಕಾವಳ ಕವಿದಿರು; ಮಂಜಿನಿಂದ ತುಂಬಿಹೋಗು; ಕಾವಳದಿಂದ ಆವರಿಸಿರು: the airfield had fogged up ವಿಮಾನನಿಲ್ದಾಣ ಮಂಜಿನಿಂದ ತುಂಬಿಹೋಗಿತ್ತು.
  2. (ತೋಟಗಾರಿಕೆ) (ಸಸ್ಯ, ಎಲೆ, ಹೂವುಗಳ ವಿಷಯದಲ್ಲಿ) ತೇವದಿಂದ ಸತ್ತುಹೋಗು: watch that decayed leaves do not cause the cuttings to fog off ಕೊಳೆತ ಎಲೆಗಳು ಸಸಿಗಳನ್ನು ತೇವದಿಂದ ಸಾಯಿಸದಂತೆ ನೋಡಿಕೊ.
  3. (ಬ್ರಿಟಿಷ್‍ ಪ್ರಯೋಗ) (ರೈಲುಮಾರ್ಗ) ಮಂಜು ಸಂಜ್ಞೆಯನ್ನು ರೈಲುಮಾರ್ಗದಲ್ಲಿರಿಸು; ಕಾವಳ ಸಂಜ್ಞೆಯನ್ನು ರೈಲು ದಾರಿಯಲ್ಲಿಡು.