See also 1fog  2fog  3fog
4fog ಹಾಗ್‍
ಸಕರ್ಮಕ ಕ್ರಿಯಾಪದ
  1. ಮಂಜಿನಿಂದ ಮುಸುಕು; ಕಾವಳದಿಂದ ಕವಿ; ಮಂಜಿನಿಂದ – ಮುಚ್ಚು, ಆವರಿಸು: fogged landscape ಮಂಜು ಮುಸುಕಿದ ಪ್ರದೇಶ.
  2. ಮಂಜಿನಿಂದಲೋ ಎಂಬಂತೆ ಮುಸುಕು, ಕವಿ.
  3. ದಿಕ್ಕು ತೋರದಂತೆ ಮಾಡು; ಕಕ್ಕಾಬಿಕ್ಕಿ ಮಾಡು; ದಿಗ್ಭ್ರಮೆ ಹಿಡಿಸು.
  4. (ಛಾಯಾಚಿತ್ರಣ) (ನೆಗೆಟಿವ್‍ ಪ್ರತಿಯನ್ನು) ಮಬ್ಬುಗವಿಸು; ಮಂಜುಮಾಡು; ಮಸುಕುಗೊಳಿಸು.
ಅಕರ್ಮಕ ಕ್ರಿಯಾಪದ
  1. ಮಂಜು ಮುಸುಕಿರು; ಕಾವಳ ಕವಿದಿರು; ಮಂಜಿನಿಂದ ತುಂಬಿಹೋಗು; ಕಾವಳದಿಂದ ಆವರಿಸಿರು: the airfield had fogged up ವಿಮಾನನಿಲ್ದಾಣ ಮಂಜಿನಿಂದ ತುಂಬಿಹೋಗಿತ್ತು.
  2. (ತೋಟಗಾರಿಕೆ) (ಸಸ್ಯ, ಎಲೆ, ಹೂವುಗಳ ವಿಷಯದಲ್ಲಿ) ತೇವದಿಂದ ಸತ್ತುಹೋಗು: watch that decayed leaves do not cause the cuttings to fog off ಕೊಳೆತ ಎಲೆಗಳು ಸಸಿಗಳನ್ನು ತೇವದಿಂದ ಸಾಯಿಸದಂತೆ ನೋಡಿಕೊ.
  3. (ಬ್ರಿಟಿಷ್‍ ಪ್ರಯೋಗ) (ರೈಲುಮಾರ್ಗ) ಮಂಜು ಸಂಜ್ಞೆಯನ್ನು ರೈಲುಮಾರ್ಗದಲ್ಲಿರಿಸು; ಕಾವಳ ಸಂಜ್ಞೆಯನ್ನು ರೈಲು ದಾರಿಯಲ್ಲಿಡು.