See also 2fluff
1fluff ಹ್ಲಹ್‍
ನಾಮವಾಚಕ
  1. (ಕಂಬಳಿ ಮೊದಲಾದವುಗಳಿಂದ ಏಳುವ ಹಗುರವಾದ) ತುಪ್ಪುಳು; ತೂಲ.
  2. (ಮೊಲ ಮೊದಲಾದವುಗಳ) ನಯತುಪ್ಪುಳು; ಮೃದುವಾದ ತುಪ್ಪುಳುಗೂದಲು.
  3. ತುಪ್ಪುಳುಗೊಂಡೆ; ತೂಲಗುಚ್ಛ; ಮೃದುವಾದ ತುಪ್ಪುಳಿನಂತಿರುವ ರಾಶಿ.
  4. (ತುಟಿಯ ಮೇಲ್ಗಡೆ ಯಾ ಕೆನ್ನೆಯ ಮೇಲೆ ಇರುವ ಮೃದುವಾದ) ನವಿರುಗೂದಲು.
  5. (ಅಶಿಷ್ಟ) (ನಾಟಕ) ಸರಿಯಾಗಿ ಕಲಿಯದ ಪಾಠ; ತಪ್ಪು ಮಾತು(ಗಾರಿಕೆ); ಅಸಮರ್ಪಕವಾಗಿ ತಿಳಿದುಕೊಂಡ ಯಾ ಕಲಿತ, ಪಾತ್ರಕ್ಕೆ ಸಂಬಂಧಿಸಿದ ಮಾತು.
  6. (ಅಶಿಷ್ಟ) (ಮಾತನಾಡುವುದು, ಆಟವಾಡುವುದು, ಸಂಗೀತ ನುಡಿಸುವುದು, ಮೊದಲಾದವುಗಳಲ್ಲಿನ) ತಪ್ಪು; ದೋಷ; ಪ್ರಮಾದ.
ನುಡಿಗಟ್ಟು

bit of fluff (ಪ್ರಾಚೀನ ಪ್ರಯೋಗ, ಆಡುಮಾತು) ತರುಣಿ; ಯುವತಿ.

See also 1fluff
2fluff ಹ್ಲಹ್‍
ಸಕರ್ಮಕ ಕ್ರಿಯಾಪದ
  1. (ತೊಗಲಿನ ಮಾಂಸವಿದ್ದ ಕಡೆಯ ಮೇಲ್ಮೈಯನ್ನು) ನಯಮಾಡು.
  2. ತುಪ್ಪುಳುತುಪ್ಪುಳಾಗಿ ಮಾಡು.
  3. (ತನ್ನನ್ನು, ಪುಕ್ಕ ಮೊದಲಾದವುಗಳನ್ನು ತುಪ್ಪುಳದಂತೆ ಕಾಣುವ ಹಾಗೆ) ಕೆದರು; ಕೊಡವು; ಒದರು; ಕೊಡವಿಕೊ: the bird fluffed (out) its feathers ಹಕ್ಕಿಯು ತನ್ನ ಗರಿಗಳನ್ನು (ತುಪ್ಪುಳುತುಪ್ಪುಳಾಗುವಂತೆ) ಕೆದರಿತು.
  4. (ಅಶಿಷ್ಟ) (ನಾಟಕ) ಎಡವು; ತಪ್ಪು; ಪಾತ್ರಕ್ಕೆ ಸಂಬಂಧಿಸಿದ ಮಾತು ಮೊದಲಾದವನ್ನು ಮರೆತು ತಪ್ಪುಮಾಡು: the leading man fluffed his lines ನಾಯಕ ನಟ ತನ್ನ ಮಾತುಗಳನ್ನು ತಪ್ಪಿದ, ತಪ್ಪಾಗಿ ನುಡಿದ.
  5. (ಅಶಿಷ್ಟ) (ಮಾತು, ಆಟ, ಮೊದಲಾದವಲ್ಲಿ) ತಪ್ಪುಮಾಡು; ಪ್ರಮಾದವೆಸಗು: fluff a stroke ತಪ್ಪಾಗಿ ಹೊಡೆ. fluff a catch ಕ್ಯಾಚು ಬಿಡು.
ಅಕರ್ಮಕ ಕ್ರಿಯಾಪದ
  1. ತುಪ್ಪುಳುತುಪ್ಪುಳಾಗು.
  2. (ಅಶಿಷ್ಟ) (ಮಾತು, ಆಟ, ಸಂಗೀತ, ಮೊದಲಾದವುಗಳಲ್ಲಿ) ತಪ್ಪು ಮಾಡು; ಎಡವು.