See also 2fluff
1fluff ಹ್ಲಹ್‍
ನಾಮವಾಚಕ
  1. (ಕಂಬಳಿ ಮೊದಲಾದವುಗಳಿಂದ ಏಳುವ ಹಗುರವಾದ) ತುಪ್ಪುಳು; ತೂಲ.
  2. (ಮೊಲ ಮೊದಲಾದವುಗಳ) ನಯತುಪ್ಪುಳು; ಮೃದುವಾದ ತುಪ್ಪುಳುಗೂದಲು.
  3. ತುಪ್ಪುಳುಗೊಂಡೆ; ತೂಲಗುಚ್ಛ; ಮೃದುವಾದ ತುಪ್ಪುಳಿನಂತಿರುವ ರಾಶಿ.
  4. (ತುಟಿಯ ಮೇಲ್ಗಡೆ ಯಾ ಕೆನ್ನೆಯ ಮೇಲೆ ಇರುವ ಮೃದುವಾದ) ನವಿರುಗೂದಲು.
  5. (ಅಶಿಷ್ಟ) (ನಾಟಕ) ಸರಿಯಾಗಿ ಕಲಿಯದ ಪಾಠ; ತಪ್ಪು ಮಾತು(ಗಾರಿಕೆ); ಅಸಮರ್ಪಕವಾಗಿ ತಿಳಿದುಕೊಂಡ ಯಾ ಕಲಿತ, ಪಾತ್ರಕ್ಕೆ ಸಂಬಂಧಿಸಿದ ಮಾತು.
  6. (ಅಶಿಷ್ಟ) (ಮಾತನಾಡುವುದು, ಆಟವಾಡುವುದು, ಸಂಗೀತ ನುಡಿಸುವುದು, ಮೊದಲಾದವುಗಳಲ್ಲಿನ) ತಪ್ಪು; ದೋಷ; ಪ್ರಮಾದ.
ನುಡಿಗಟ್ಟು

bit of fluff (ಪ್ರಾಚೀನ ಪ್ರಯೋಗ, ಆಡುಮಾತು) ತರುಣಿ; ಯುವತಿ.