See also 2flower
1flower ಹ್ಲೌಅರ್‍
ನಾಮವಾಚಕ
  1. (ಸಸ್ಯವಿಜ್ಞಾನ) ಹೂವು; ಕುಸುಮ; ಪುಷ್ಪ; ಪ್ರಸೂನ; ಶಲಾಕೆ ಯಾ ಪುಂಕೇಸರ ಯಾ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ.
  2. (ಜನರೂಢಿಯಲ್ಲಿ) ಹೂವು; ಸಾಮಾನ್ಯವಾಗಿ ಹಸುರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಯಾ ಬೀಜ ಉತ್ಪತ್ತಿಯಾಗುವ ಸಸ್ಯಭಾಗ.
  3. (ಬಹುವಚನದಲ್ಲಿ) ಹುಡಿ; ಅರಳು; ಉತ್ಪತನಗೊಂಡ (sublimation) ಘನವು ಪುನಃ ಘನೀಭವಿಸಿದಾಗ ಉಂಟಾಗುವ ಪುಡಿ: flowers of sulphur ಗಂಧಕದ ಹುಡಿ, ಅರಳು.
  4. (ಕಿಣ್ವನದಿಂದ ಆಗುವ) ಮಂಡ; ನೊರೆ.
  5. (ಗಿಡದಿಂದ ಪ್ರತ್ಯೇಕವಾಗಿ ಪರಿಗಣಿಸಿದ, ಮುಖ್ಯವಾಗಿ ಅಲಂಕಾರ ಯಾ ಗೌರವಸೂಚಕವಾಗಿ ಗುಚ್ಛಗಳಲ್ಲಿ ಬಳಸುವ) ಹೂವು; ಅಲರು; ಕುಸುಮ; ಪುಷ್ಪ; ಅರಳು.
  6. ಹೂವಿನ ಗಿಡ; ಹೂಗಳಿಗಾಗಿಯೇ ಇರುವ ಯಾ ಬೆಳೆಸುವ ಗಿಡ.
  7. (ಬಹುವಚನದಲ್ಲಿ) ಅಲಂಕಾರಗಳು: ಆಲಂಕಾರಿಕ ಪದಗುಚ್ಛಗಳು: flowers of speech ಭಾಷಾಲಂಕಾರಗಳು; ಶಬ್ದಾಲಂಕಾರಗಳು; ಆಲಂಕಾರಿಕ ಪದಪ್ರಯೋಗಗಳು.
  8. ಆಯ್ದದ್ದು; ಅಯ್ದುತೆಗೆದದ್ದು; ಅತ್ಯುತ್ಕೃಷ್ಟವಾದದ್ದು.
  9. ತಿರುಳು; ಸಾರ; ಅತ್ಯುತ್ತಮ ಭಾಗ.
  10. (ಯಾವುದೇ ಸದ್ಗುಣದ) ಮೈವೆತ್ತ ರೂಪ; Arjuna, the flower of bravery ಪೌರುಷವೇ ಮೈವೆತ್ತ ಅರ್ಜುನ.
  11. ಅರಳುವ ಸ್ಥಿತಿ; ವಿಕಾಸಾವಸ್ಥೆ; ವಿಕಸನಸ್ಥಿತಿ; ಹೂಬಿಡುವ ಸ್ಥಿತಿ: in flower ಹೂಬಿಡುವ ಸ್ಥಿತಿಯಲ್ಲಿ.
  12. ತುಂಬು ಹರೆಯ; ತುಂಬುಯೌವನ; ಅತ್ಯುಚ್ಛ್ರಾಯದ ಯಾ ಉತ್ಕರ್ಷದ ಸ್ಥಿತಿ: in the flower of his age ಅವನ ಆಯುಸ್ಸಿನ ಅತ್ಯುಚ್ಛ್ರಾಯ ಸ್ಥಿತಿಯಲ್ಲಿ.
ಪದಗುಚ್ಛ
  1. flowers of tan ಬೂಷ್ಟು ಹೂವು; ಸತ್ತ ಮರ, ತೊಗಟೆ, ಮೊದಲಾದವುಗಳ ಮೇಲೆ ಕಾಣಬರುವ ಹ್ಯೂಲಿಗೊ ಸೆಪ್ಟಿಕ ಕುಲಕ್ಕೆ ಸೇರಿದ, ಒಂದು ಬಗೆಯ ಬೂಷ್ಟು.
  2. flowers of $^1$zinc.
  3. No flowers ಶವಸಂಸ್ಕಾರದಲ್ಲಿ ಯಾ ಅಂತ್ಯಕ್ರಿಯೆಯಲ್ಲಿ ಹೂವಿನ ದಂಡೆ ಮೊದಲಾದವು ಬೇಡವೆಂದು ತಿಳಿಸುವ ಸುದ್ದಿ.
See also 1flower
2flower ಹ್ಲೌಅರ್‍
ಸಕರ್ಮಕ ಕ್ರಿಯಾಪದ
  1. (ಗಿಡವನ್ನು) ಹೂವು ಬಿಡುವಂತೆ ಮಾಡು; ಕುಸುಮಿಸುವಂತೆ ಮಾಡು.
  2. (ಗಿಡಕ್ಕೆ) ಹೂಬಿಡಲು ಅವಕಾಶ ನೀಡು, ಎಡೆಗೊಡು.
  3. ಹೂವಲಂಕಾರಮಾಡು; ಹೂಸಿಂಗಾರಮಾಡು; ಪುಷ್ಪಾಲಂಕರಣಮಾಡು; ಹೂವುಗಳ ಆಕೃತಿ ಯಾ ವಿನ್ಯಾಸಗಳಿಂದ ಅಲಂಕಾರ ಮಾಡು.
ಅಕರ್ಮಕ ಕ್ರಿಯಾಪದ
  1. ಹೂಬಿಡು; ಕುಸುಮಿಸು (ರೂಪಕವಾಗಿ ಸಹ).
  2. (ಹೂವಿನ ವಿಷಯದಲ್ಲಿ) ಅರಳು; ವಿಕಸಿಸು; ವಿಕಾಸವಾಗು (ರೂಪಕವಾಗಿ ಸಹ).