See also 2flourish
1flourish ಹ್ಲರಿಷ್‍
ಸಕರ್ಮಕ ಕ್ರಿಯಾಪದ
  1. ಆಡಂಬರದಿಂದ – ತೋರಿಸು, ಮೆರೆ; ಆಟೋಪದಿಂದ ಪ್ರದರ್ಶಿಸು.
  2. (ಆಯುಧವನ್ನು) ಬೀಸು; ಝಳಪಿಸು.
  3. (ಕೈಕಾಲುಗಳನ್ನು) ಒದರು; ಝಾಡಿಸು; ರಭಸವಾಗಿ ಆಡಿಸು.
  4. (ಸಂಗೀತ ಮೊದಲಾದವುಗಳಲ್ಲಿ) ಆಕರ್ಷಣೆ ಕೊಡಲು ಒಂದು ಹೊಸ ಕಲ್ಪನೆಯಿಂದ ಗಾಯನ ಮೊದಲು ಮಾಡು.
  5. (ಚಿತ್ರ, ನಕಾಸೆ, ಬಣ್ಣ, ಮೊದಲಾದವುಗಳಿಂದ) ಅಲಂಕರಿಸು.
ಅಕರ್ಮಕ ಕ್ರಿಯಾಪದ
  1. (ಹುಲುಸಾಗಿ, ಸೊಂಪಾಗಿ, ಹಸನಾಗಿ, ಪುಷ್ಟವಾಗಿ, ಯಾ ಬಲಿಷ್ಠವಾಗಿ) ಬೆಳೆ; ವೃದ್ಧಿಯಾಗು; ಅಭಿವರ್ಧಿಸು.
  2. ಚೆನ್ನಾಗಿ ಬಾಳು; ಏಳಿಗೆಯಾಗು; ಏಳಿಗೆಗೆ ಬರು; ಮುಂದಕ್ಕೆ ಬರು; ಅಭಿವೃದ್ಧಿ ಹೊಂದು; ಪ್ರವರ್ಧಮಾನವಾಗು; ಉಚ್ಛ್ರಾಯ ಪಡೆ: an age in which literature flourished ಸಾಹಿತ್ಯ ಏಳಿಗೆ ಪಡೆದಿದ್ದ ಯುಗ.
  3. ವಿಜಯಿಯಾಗು; ಸಫಲತೆ ಪಡೆ; ಜಯಶಾಲಿಯಾಗು.
  4. ಉಚ್ಛ್ರಾಯಸ್ಥಿತಿಯಲ್ಲಿರು; ಔನ್ನತ್ಯದಲ್ಲಿರು; ಅಭ್ಯುದಯದಲ್ಲಿರು.
  5. ಒಳ್ಳೆಯ ಆರೋಗ್ಯ ಸ್ಥಿತಿಯಲ್ಲಿರು; ಉತ್ತಮ ಆರೋಗ್ಯ ಹೊಂದಿರು: I hope you are all flourishing ನೀವೆಲ್ಲರೂ ಒಳ್ಳೆಯ ಆರೋಗ್ಯ ಸ್ಥಿತಿಯಲ್ಲಿದ್ದೀರೆಂದು ಭಾವಿಸುತ್ತೇನೆ.
  6. (ಯಾವುದೇ ಹೆಸರಿಸಿದ ಕಾಲದಲ್ಲಿ ಯಾ ಯುಗದಲ್ಲಿ) ಜೀವಿಸಿರು; ಬದುಕಿರು; ಕಾರ್ಯಪಟುವಾಗಿರು: Socrates flourished about 400 B.C. ಸಾಕ್ರೆಟೀಸ್‍ ಸುಮಾರು ಕ್ರಿಸ್ತ ಪೂರ್ವ 400ರಲ್ಲಿ ಬದುಕಿದ್ದ.
  7. (ಬರವಣಿಗೆ, ಅಕ್ಷರ ಮೊದಲಾದವುಗಳನ್ನು) ಅಲಂಕರಿಸು; ಗೆರೆ ಮೊದಲಾದವುಗಳಿಂದ ಸಿಂಗರಿಸು.
  8. ಆಲಂಕಾರಿಕವಾಗಿ ಯಾ ಆಡಂಬರದಿಂದ ಮಾತನಾಡು.
See also 1flourish
2flourish ಹ್ಲರಿಷ್‍
ನಾಮವಾಚಕ
  1. ಏಳಿಗೆ; ಅಭಿವೃದ್ಧಿ; ಅಭ್ಯುದಯ; ಉಚ್ಛ್ರಾಯ: in full flourish ಪೂರ್ಣ ಏಳಿಗೆಯಲ್ಲಿ.
  2. (ಬರವಣಿಗೆಯಲ್ಲಿ ಅಕ್ಷರದ ಯಾ ಪದದ ಸುತ್ತಲೂ ವಕ್ರರೇಖೆಗಳು ಮೊದಲಾದವನ್ನು ಎಳೆದು ಮಾಡಿದ) ಅಲಂಕಾರ; ಅಲಂಕರಣ; ಚಿತ್ರಣ.
  3. (ಭಾಷಣ ಯಾ ಬರಹದಲ್ಲಿ) ಅಲಂಕಾರದ – ಬೆಡಗು, ಆಡಂಬರ, ವೈಖರಿ.
  4. ಅತ್ಯಲಂಕಾರದ ಭಾಷಣ ಯಾ ಬರಹ.
  5. (ಆಯುಧ, ಕೈ, ಮೊದಲಾದವುಗಳನ್ನು) ಆಡಂಬರದಿಂದ – ಬೀಸುವುದು, ಝಳಪಿಸುವುದು, ಆಡಿಸುವುದು.
  6. (ಸಂಗೀತ)
    1. ವಾದ್ಯ ಘೋಷ; (ಕೊಂಬು, ಕಹಳೆ, ಮೊದಲಾದ) ಹಿತ್ತಾಳೆ ವಾದ್ಯಗಳ ಮೊಳಗು.
    2. ಗಾಯನದಲ್ಲಿ ಅತ್ಯಲಂಕೃತ ಭಾಗ.
    3. ಕಲ್ಪನೆಯ ಭಾಗ; ಗಾಯಕನೇ ಕಲ್ಪಿಸಿದ ಹೊಸ ಅಂಶ ಯಾ ಆರಂಭ.