2flourish
ನಾಮವಾಚಕ
- ಏಳಿಗೆ; ಅಭಿವೃದ್ಧಿ; ಅಭ್ಯುದಯ; ಉಚ್ಛ್ರಾಯ: in full flourish ಪೂರ್ಣ ಏಳಿಗೆಯಲ್ಲಿ.
- (ಬರವಣಿಗೆಯಲ್ಲಿ ಅಕ್ಷರದ ಯಾ ಪದದ ಸುತ್ತಲೂ ವಕ್ರರೇಖೆಗಳು ಮೊದಲಾದವನ್ನು ಎಳೆದು ಮಾಡಿದ) ಅಲಂಕಾರ; ಅಲಂಕರಣ; ಚಿತ್ರಣ.
- (ಭಾಷಣ ಯಾ ಬರಹದಲ್ಲಿ) ಅಲಂಕಾರದ – ಬೆಡಗು, ಆಡಂಬರ, ವೈಖರಿ.
- ಅತ್ಯಲಂಕಾರದ ಭಾಷಣ ಯಾ ಬರಹ.
- (ಆಯುಧ, ಕೈ, ಮೊದಲಾದವುಗಳನ್ನು) ಆಡಂಬರದಿಂದ – ಬೀಸುವುದು, ಝಳಪಿಸುವುದು, ಆಡಿಸುವುದು.
- (ಸಂಗೀತ)
- ವಾದ್ಯ ಘೋಷ; (ಕೊಂಬು, ಕಹಳೆ, ಮೊದಲಾದ) ಹಿತ್ತಾಳೆ ವಾದ್ಯಗಳ ಮೊಳಗು.
- ಗಾಯನದಲ್ಲಿ ಅತ್ಯಲಂಕೃತ ಭಾಗ.
- ಕಲ್ಪನೆಯ ಭಾಗ; ಗಾಯಕನೇ ಕಲ್ಪಿಸಿದ ಹೊಸ ಅಂಶ ಯಾ ಆರಂಭ.