See also 2floor
1floor ಹ್ಲೋರ್‍
ನಾಮವಾಚಕ
  1. ಕೊಠಡಿಯ ನೆಲ.
  2. ನೆಲಗಟ್ಟು; ನೆಲಹಾಸು; ನೆಲಕ್ಕೆ ಹಾಸಿರುವ ಹಲಗೆ ಮೊದಲಾದವು.
  3. (ಸಮುದ್ರ, ಪೊಟರೆ, ಗವಿ, ಮೊದಲಾದವುಗಳ) ತಳ(ಭಾಗ).
  4. ಸಭಾಂಗಣ; ಶಾಸನಸಭೆಯಲ್ಲಿ ಸದಸ್ಯರು ಕುಳಿತು ಚರ್ಚೆ ನಡೆಸುವ ಜಾಗ.
  5. ಅಟ್ಟ; ಅಂತಸ್ತು; ಮಹಡಿ; ಒಂದೇ ಮಟ್ಟದಲ್ಲಿರುವ ಕೋಣೆ ಮೊದಲಾದವುಗಳ ಸಾಲು.
  6. ಮಟ್ಟ ಪ್ರದೇಶ; ಸಮತಲ ಪ್ರದೇಶ.
  7. ಮುಂದಿನ ಸರದಿ ಹಕ್ಕು; ತರುವಾಯದ ಹಕ್ಕು; ಸದ್ಯದಲ್ಲಿ ಮಾತನಾಡುತ್ತಿರುವವನು ಮುಗಿಸಿದ ಕೂಡಲೇ ಮಾತನಾಡುವ ಸರದಿಯ ಹಕ್ಕು: have the floor ಸದ್ಯದ ಮಾತುಗಾರ ಮುಗಿಸಿದ ಕೂಡಲೇ ಮಾತನಾಡುವ ಅವಕಾಶ, ಹಕ್ಕು ಪಡೆದಿರು; ಮುಂದಿನ ಸರದಿ ಹೊಂದಿರು. be given the floor ಸದ್ಯದ ಮಾತುಗಾರ ಮುಗಿಸಿದ ಕೂಡಲೇ ಮಾತನಾಡುವ ಹಕ್ಕು ನೀಡಲಾಗಿರು.
  8. (ದರ, ವೇತನ, ಮೊದಲಾದವುಗಳ) ಕನಿಷ್ಠ ಮಟ್ಟ; ಕನಿಷ್ಠ – ವೇತನ, ದರ, ಮೊದಲಾದವು: the government avoided establishing a price or wage floor ಸರ್ಕಾರ ಒಂದು ಕನಿಷ್ಠ ದರ ಯಾ ವೇತನ ವ್ಯವಸ್ಥೆ ಸ್ಥಾಪಿಸುವುದನ್ನು ಬಿಟ್ಟುಬಿಟ್ಟಿದೆ.
  9. (ಕ್ರಿಕೆಟ್‍) (ಆಡುಮಾತು) ಮೈದಾನ; ಆಟದ ಬಯಲು.
ಪದಗುಚ್ಛ
  1. first floor
    1. (ಬ್ರಿಟಿಷ್‍ ಪ್ರಯೋಗ) ಮೊದಲನೆಯ ಅಂತಸ್ತು, ಮಹಡಿ.
    2. (ಅಮೆರಿಕನ್‍ ಪ್ರಯೋಗ) ನೆಲದ (ಮಟ್ಟದಲ್ಲಿರುವ) ಅಂತಸ್ತು.
  2. ground floor (ಬ್ರಿಟಿಷ್‍ ಪ್ರಯೋಗ) ನೆಲದ (ಮಟ್ಟದಲ್ಲಿರುವ) ಅಂತಸ್ತು.
  3. second floor (ಅಮೆರಿಕನ್‍ ಪ್ರಯೋಗ) ಎರಡನೆ ಅಂತಸ್ತು; ನೆಲದ ಅಂತಸ್ತಿನ ಮೇಲಿನದು.
ನುಡಿಗಟ್ಟು
  1. cross the floor ಪಕ್ಷಾಂತರಿಸು; ಚರ್ಚೆ ನಡೆಯುತ್ತಿರುವ ಶಾಸನಸಭೆಯಲ್ಲಿ ವಿರೋಧ ಪಕ್ಷವನ್ನು ಸೇರಿಕೊ.
  2. from the floor ಸಭಾಂಗಣದಿಂದ; ಸದನದಿಂದ; ವೇದಿಕೆ ಮೊದಲಾದವುಗಳ ಮೇಲಿರುವವರಿಂದ ಆಗದೆ, ಸಭಾಂಗಣದಲ್ಲಿರುವ ಸದಸ್ಯರೊಬ್ಬರಿಂದ ಹೇಳಲಾದ, ನೀಡಲಾದ.
  3. take the floor
    1. (ಅಮೆರಿಕನ್‍ ಪ್ರಯೋಗ) ಚರ್ಚೆಯಲ್ಲಿ ಭಾಗವಹಿಸು.
    2. ನರ್ತನಶಾಲೆ ಮೊದಲಾದವುಗಳಲ್ಲಿ ನರ್ತಿಸಲು ಪ್ರಾರಂಭಿಸು.
See also 1floor
2floor ಹ್ಲೋರ್‍
ಸಕರ್ಮಕ ಕ್ರಿಯಾಪದ
  1. ನೆಲಗಟ್ಟುಹಾಕು; ನೆಲಕ್ಕೆ ಕಲ್ಲು ಮೊದಲಾದವನ್ನು ಹಾಸು.
  2. ನೆಲವಾಗು; ನೆಲದಂತೆ – ಆವರಿಸು, ಹರಡು; ನೆಲಗಟ್ಟಿನಂತಾಗಿರು: soft herbage floored the valley ಮೃದುವಾದ ಪೈರುಪಚ್ಚೆ ಕಣಿವೆಗೆ ನೆಲವಾಗಿದೆ.
  3. ನೆಲಕ್ಕುರುಳಿಸು; ನೆಲಕ್ಕೆ – ಕೆಡವು, ಬೀಳಿಸು.
  4. ಕಕ್ಕಾವಿಕ್ಕಿಗೊಳಿಸು; ಕಂಗಾಲಾಗಿಸು; ದಿಗ್ಭ್ರಾಂತಗೊಳಿಸು; ದಿಕ್ಕುತೋರದಂತೆ ಮಾಡು: was floored by the question ಪ್ರಶ್ನೆಯಿಂದ ಕಕ್ಕಾವಿಕ್ಕಿಯಾದ.
  5. (ಶಾಲೆಯಲ್ಲಿ) ಪಾಠ ಬಾರದ ಹುಡುಗನನ್ನು ನೆಲದ ಮೇಲೆ ಕುಕ್ಕರಿಸುವಂತೆ ಹೇಳು.
  6. ಸಾಧಿಸು; ಮುಗಿಸು: floor the paper (ಪ್ರಶ್ನಪತ್ರಿಕೆಯಲ್ಲಿನ) ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದು ಮುಗಿಸು.
  7. ಗೆಲ್ಲು; ಜಯಿಸು; ಈರಿಸು.