See also 1floor
2floor ಹ್ಲೋರ್‍
ಸಕರ್ಮಕ ಕ್ರಿಯಾಪದ
  1. ನೆಲಗಟ್ಟುಹಾಕು; ನೆಲಕ್ಕೆ ಕಲ್ಲು ಮೊದಲಾದವನ್ನು ಹಾಸು.
  2. ನೆಲವಾಗು; ನೆಲದಂತೆ – ಆವರಿಸು, ಹರಡು; ನೆಲಗಟ್ಟಿನಂತಾಗಿರು: soft herbage floored the valley ಮೃದುವಾದ ಪೈರುಪಚ್ಚೆ ಕಣಿವೆಗೆ ನೆಲವಾಗಿದೆ.
  3. ನೆಲಕ್ಕುರುಳಿಸು; ನೆಲಕ್ಕೆ – ಕೆಡವು, ಬೀಳಿಸು.
  4. ಕಕ್ಕಾವಿಕ್ಕಿಗೊಳಿಸು; ಕಂಗಾಲಾಗಿಸು; ದಿಗ್ಭ್ರಾಂತಗೊಳಿಸು; ದಿಕ್ಕುತೋರದಂತೆ ಮಾಡು: was floored by the question ಪ್ರಶ್ನೆಯಿಂದ ಕಕ್ಕಾವಿಕ್ಕಿಯಾದ.
  5. (ಶಾಲೆಯಲ್ಲಿ) ಪಾಠ ಬಾರದ ಹುಡುಗನನ್ನು ನೆಲದ ಮೇಲೆ ಕುಕ್ಕರಿಸುವಂತೆ ಹೇಳು.
  6. ಸಾಧಿಸು; ಮುಗಿಸು: floor the paper (ಪ್ರಶ್ನಪತ್ರಿಕೆಯಲ್ಲಿನ) ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದು ಮುಗಿಸು.
  7. ಗೆಲ್ಲು; ಜಯಿಸು; ಈರಿಸು.