See also 2flitch
1flitch ಹ್ಲಿಚ್‍
ನಾಮವಾಚಕ
  1. ಉಪ್ಪುಹಾಕಿ ಸಂಸ್ಕರಿಸಿದ, ಹಂದಿಯ ಪಕ್ಕದ ಯಾ ಮಗ್ಗುಲಿನ ಮಾಂಸ.
  2. ತಿಮಿಂಗಿಲದ ಕೊಬ್ಬಿನ ಚೌಕಾಕಾರದ ಒಂದು ತುಂಡು.
  3. ಹಾಲಿಬಟ್‍ ಈನಿನ – ತುಂಡು, ಸೀಳು, ಹೋಳು.
  4. ಮರದ ದಿಮ್ಮಿಯ (ಸಾಮಾನ್ಯವಾಗಿ ಮರದ ಸಹಜವಾದ ಹೊರಭಾಗವುಳ್ಳ) ತೊಲೆ, ಹಲಗೆ.
  5. ತೊಲೆ ಮೊದಲಾದವುಗಳನ್ನು ಬಲಪಡಿಸಲು ಹಾಸಿರುವ ಕಬ್ಬಿಣದ ಯಾ ಉಕ್ಕಿನ ತಗಡು.
ಪದಗುಚ್ಛ

Dunmow flitch ಡನ್‍ಮೋವ್‍ ಮಾಂಸ; ಒಂದು ವರ್ಷದ ಮೇಲೆ ಒಂದು ದಿನದ ತಮ್ಮ ವೈವಾಹಿಕ ಜೀವನವು ಸಾಮರಸ್ಯದಿಂದ ಜರುಗಿದೆಯೆಂದು ಸಾಬೀತು ಮಾಡುವ ಯಾವುದೇ ದಂಪತಿಗಳಿಗೆ ಪ್ರತಿವರ್ಷವೂ ಎಸೆಕ್ಸ್‍ನಲ್ಲಿರುವ ಡನ್‍ಮೋವ್‍ ಎಂಬಲ್ಲಿ ಕೊಡುವ, ಸಂಸ್ಕರಿಸಿದ ಹಂದಿಯ ಮಗ್ಗುಲು ಮಾಂಸ.

See also 1flitch
2flitch ಹ್ಲಿಚ್‍
ಸಕರ್ಮಕ ಕ್ರಿಯಾಪದ

(ಮರದ ದಿಮ್ಮಿ ಯಾ ಹಾಲಿಬಟ್‍ ಈನನ್ನು) ಹೋಳು ಮಾಡು; ಭಾಗ ಮಾಡು; ಕತ್ತರಿಸು; ಸೀಳು.