See also 2flitch
1flitch ಹ್ಲಿಚ್‍
ನಾಮವಾಚಕ
  1. ಉಪ್ಪುಹಾಕಿ ಸಂಸ್ಕರಿಸಿದ, ಹಂದಿಯ ಪಕ್ಕದ ಯಾ ಮಗ್ಗುಲಿನ ಮಾಂಸ.
  2. ತಿಮಿಂಗಿಲದ ಕೊಬ್ಬಿನ ಚೌಕಾಕಾರದ ಒಂದು ತುಂಡು.
  3. ಹಾಲಿಬಟ್‍ ಈನಿನ – ತುಂಡು, ಸೀಳು, ಹೋಳು.
  4. ಮರದ ದಿಮ್ಮಿಯ (ಸಾಮಾನ್ಯವಾಗಿ ಮರದ ಸಹಜವಾದ ಹೊರಭಾಗವುಳ್ಳ) ತೊಲೆ, ಹಲಗೆ.
  5. ತೊಲೆ ಮೊದಲಾದವುಗಳನ್ನು ಬಲಪಡಿಸಲು ಹಾಸಿರುವ ಕಬ್ಬಿಣದ ಯಾ ಉಕ್ಕಿನ ತಗಡು.
ಪದಗುಚ್ಛ

Dunmow flitch ಡನ್‍ಮೋವ್‍ ಮಾಂಸ; ಒಂದು ವರ್ಷದ ಮೇಲೆ ಒಂದು ದಿನದ ತಮ್ಮ ವೈವಾಹಿಕ ಜೀವನವು ಸಾಮರಸ್ಯದಿಂದ ಜರುಗಿದೆಯೆಂದು ಸಾಬೀತು ಮಾಡುವ ಯಾವುದೇ ದಂಪತಿಗಳಿಗೆ ಪ್ರತಿವರ್ಷವೂ ಎಸೆಕ್ಸ್‍ನಲ್ಲಿರುವ ಡನ್‍ಮೋವ್‍ ಎಂಬಲ್ಲಿ ಕೊಡುವ, ಸಂಸ್ಕರಿಸಿದ ಹಂದಿಯ ಮಗ್ಗುಲು ಮಾಂಸ.