See also 2flight  3flight
1flight ಹ್ಲೈಟ್‍
ನಾಮವಾಚಕ
  1. ಹಾರಿಕೆ; ಹಾರಾಟ; ಹಾರುವುದು; ಡಯನ; ಉಡ್ಡಯನ: take (or wing) one’s flight ಹಾರು; ಹಾರಿಹೋಗು.
  2. ಡೇಗೆಬೇಟೆ; ಡೇಗೆಯು ಬೇಟೆಯನ್ನು ಅಟ್ಟಿಹೋಗುವುದು.
  3. (ಹಕ್ಕಿಗಳ ಯಾ ಕೀಟಗಳ) ವಲಸೆ; ಬೇರೆ ಸ್ಥಳಕ್ಕೆ ಹೋಗುವಿಕೆ.
  4. (ವಲಸೆ ಹಕ್ಕಿಗಳ ಯಾ ಕೀಟಗಳ) ತಂಡ; ಹಿಂಡು; ಗುಂಪು; ವೃಂದ; ಸಮುದಾಯ.
  5. (ಕ್ಷಿಪಣಿ ಮೊದಲಾದವುಗಳ) ಉಡ್ಡಯನ; ಹಾರಿಕೆ; ವೇಗವಾದ ಚಲನೆ.
  6. (ಬಂದೂಕಿನ ಗುಂಡು ಮೊದಲಾದವುಗಳ) ಹಾರಿಕೆ; ಗತಿ; ಬಂದೂಕಿನಿಂದ ಗುರಿಯವರೆಗಿನ ಗುಂಡಿನ ಯಾನ.
  7. (ಆಟಗಳಲ್ಲಿ) ಚೆಂಡಿನ ಪಥ ಮತ್ತು ವೇಗ.
  8. (ಕಾಲದ ವಿಷಯದಲ್ಲಿ) ಕ್ಷಿಪ್ರಗತಿ; ಕಾಲ ಬೇಗ – ಉರುಳುವುದು, ಕಳೆದುಹೋಗುವುದು.
  9. (ಬುದ್ಧಿಚಮತ್ಕಾರ, ಕಲ್ಪನೆ, ಹೆಬ್ಬಯಕೆ, ಮೊದಲಾದವುಗಳ ವಿಷಯದಲ್ಲಿ) ಹಾರಾಟ; ವಿಹಾರ; ಎತ್ತರಕ್ಕೆ ಹಾರುವಿಕೆ.
  10. (ಹಕ್ಕಿ, ವಿಮಾನ, ಕ್ಷಿಪಣಿಗಳ ವಿಷಯದಲ್ಲಿ) ಹಾರುದೂರ; ಹಾರಾಟ; ಉಡ್ಡಯನ ದೂರ; ಹಾರಲಾಗುವ ದೂರ: a 500 mile flight ಐನೂರು ಮೈಲಿಗಳ ಹಾರಾಟ.
  11. (ಎರಡು ನಿಲ್ಲೆಡೆಗಳ ನಡುವಣ) ಸಾಲುಮೆಟ್ಟಿಲು; ಮೆಟ್ಟಿಲುತಂಡ; ಸೋಪಾನಪಂಕ್ತಿ.
  12. ತಡೆತಂಡ; ಕಂಬಿಸಾಲು; ಓಟದ ಪಂದ್ಯದಲ್ಲಿ ಹಾರಲು ಮೈದಾನದಲ್ಲಿ ಅಡ್ಡವಾಗಿ ನಿಲ್ಲಿಸಿರುವ ತಡೆಗಳ ಯಾ ಕಂಬಿಗಳ ತಂಡ, ಶ್ರೇಣಿ, ಪಂಕ್ತಿ, ಸಾಲು.
  13. (ಆಟದ) ಈಟಿಯ – ಬಾಲ, ಪುಚ್ಛ; ಗರಿಗಳು ಕಟ್ಟಿದ ಹಿಂಭಾಗ.
  14. ಕಣೆಮಳೆ; ಶರವರ್ಷ; ಬಾಣ ಮೊದಲಾದವುಗಳ ಕರೆತ, ಸುರಿತ, ಸುರಿಮಳೆ.
  15. ಓಟ್ಸ್‍ (ಧಾನ್ಯದ) ಹೊಟ್ಟು.
  16. ವಿಮಾನತಂಡ; ಆರು ವಿಮಾನಗಳಿರುವ ಬ್ರಿಟನ್ನಿನ ಸೈನಿಕ ವಿಮಾನ ದಳದ ಯಾ ಇತರ ದೇಶಗಳಲ್ಲಿ ಸೈನಿಕ ಕಾರ್ಯಾಚರಣೆಯ ಮೂಲಾಂಶವೆಂದು ಪರಿಗಣಿಸಿರುವ ವಿಮಾನಸಂಖ್ಯೆಯ ತಂಡ, ವಿಭಾಗ.
  17. ವಿಮಾನ, ಆಕಾಶ, ವಾಯು – ಯಾನ; ವಿಮಾನ, ಆಕಾಶನೌಕೆ, ಮೊದಲಾದವುಗಳಲ್ಲಿ ಪ್ರಯಾಣ ಮಾಡುವುದು.
  18. (ವಿಮಾನ, ಆಕಾಶನೌಕೆ, ಮೊದಲಾದವುಗಳ) ಸಂಚಾರ; ಚಲನೆ; ಡಯನ; ಹಾರಾಟ.
  19. (ಗೊತ್ತಾದ ವೇಳೆಗೆ ಹೊರಡುವ ವಿಮಾನದ) ಯಾನ; ಪ್ರಯಾಣ; ಸಂಚಾರ: on the 9 o’clock to Delhi ದೆಹಲಿಗೆ 9 ಗಂಟೆಗೆ ಹೊರಡುವ ವಿಮಾನ(ಯಾನ)ದಲ್ಲಿ.
  20. (ವಿಮಾನ) ಡಯನ ತಂತ್ರ; ವಿಮಾನ ಹಾರಿಸುವುದು ಯಾ ನಡೆಸುವುದು, ಅದರ ಸೂತ್ರಗಳು, ಯಾ ಅದರ ತಂತ್ರಕೌಶಲ: flight training ಉಡ್ಡಯನ – ಶಿಕ್ಷಣ, ತರಬೇತಿ, ವಿಮಾನ ನಡೆಸುವುದು, ಅದರ ಸೂತ್ರಗಳು ಮತ್ತು ತಂತ್ರ – ಇವಕ್ಕೆ ಸಂಬಂಧಿಸಿದ ಶಿಕ್ಷಣ, ತರಬೇತಿ.
  21. (ಕ್ಷಿಪಣಿಯ) ಆಕಾಶಯಾನ; ಬಾಹ್ಯಾಕಾಶದೊಳಕ್ಕೆ ಯಾ ಬಾಹ್ಯಾಕಾಶದ ಮೂಲಕ ಹೋಗುವ ಕ್ಷಿಪಣಿಯ ಯಾನ.
ನುಡಿಗಟ್ಟು

in the first (or top) flight ಮುಂದಿನ ಸಾಲಿನಲ್ಲಿ; ಅಗ್ರಸ್ಥಾನದಲ್ಲಿ ; ಪ್ರಥಮಶ್ರೇಣಿಯಲ್ಲಿ.

See also 1flight  3flight
2flight ಹ್ಲೈಟ್‍
ಸಕರ್ಮಕ ಕ್ರಿಯಾಪದ
  1. ಹಾರುತ್ತಿರುವ ಕಾಡುಕೋಳಿಯನ್ನು, ಹಕ್ಕಿಯನ್ನು ಗುಂಡಿನಿಂದ ಹೊಡೆ ( ಅಕರ್ಮಕ ಕ್ರಿಯಾಪದ ಸಹ).
  2. (ಕ್ರಿಕೆಟ್‍ ಚೆಂಡು, ಹಾರುತ್ತಿರುವ ಕ್ಷಿಪಣಿ, ಮೊದಲಾದವುಗಳ) ಪಥ ಯಾ ವೇಗವನ್ನು – ಬದಲಾಯಿಸು, ವ್ಯತ್ಯಾಸಮಾಡು.
  3. (ಬಾಣಕ್ಕೆ) ಗರಿಸೇರಿಸು; ಗರಿಕಟ್ಟು.
ಅಕರ್ಮಕ ಕ್ರಿಯಾಪದ

(ಹಕ್ಕಿಗಳು ವಲಸೆಹೋಗುವಾಗ) ತಂಡ ತಂಡವಾಗಿ ಹಾರಿಹೋಗು.

See also 1flight  2flight
3flight ಹ್ಲೈಟ್‍
ನಾಮವಾಚಕ
  1. ಓಟ; ಪಲಾಯನ; ಓಡಿ ಹೋಗುವುದು.
  2. ಹಿಮ್ಮೆಟ್ಟುವಿಕೆ; ಆತುರದಿಂದ ಹಿಂದಕ್ಕೆ ಓಡಿಹೋಗುವುದು.
  3. (ಅರ್ಥಶಾಸ್ತ್ರ) ಧನಪಲಾಯನ; ಹಣದೋಟ; ಯಾವುದೋ ನಷ್ಟಸಂಭವ ಯಾ ಅಪಾಯದಿಂದ ಪಾರಾಗಲು ಒಂದು ಉದ್ಯಮದಲ್ಲಿ ಯಾ ಚಲಾವಣೆಯಲ್ಲಿ ತೊಡಗಿಸಿದ ಹಣವನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಯಾ ಬೇರೊಂದು ಚಲಾವಣೆಗೆ ವರ್ಗಾಯಿಸುವುದು ಯಾ ಮಾರುವುದು.
  4. ಪಲಾಯನ – ರೀತಿ, ಸಾಧನ; ತಪ್ಪಿಸಿಕೊಳ್ಳುವ ವಿಧಾನ, ಸಾಧನ.
ಪದಗುಚ್ಛ
  1. (be)take oneself to flight ಓಡಿ ಹೋಗು; ತಲೆತಪ್ಪಿಸಿಕೊಂಡು ಓಡಿಹೋಗು; ಪರಾರಿಯಾಗು; ಪಲಾಯನ ಮಾಡು; ಕಾಲಿಗೆ ಬುದ್ಧಿ ಹೇಳು.
  2. put to flight ಹೊಡೆದೋಡಿಸು; ಓಡಿಹೋಗುವಂತೆ ಮಾಡು.
  3. take (or take to) flight = ಪದಗುಚ್ಛ \((1)\).