See also 2flicker  3flicker
1flicker ಹ್ಲಿಕರ್‍
ಅಕರ್ಮಕ ಕ್ರಿಯಾಪದ
  1. (ಬಾವುಟ, ಎಲೆ, ಹಾವಿನ ನಾಲಿಗೆ, ಗಾಳಿ, ಮೊದಲಾದವುಗಳ ವಿಷಯದಲ್ಲಿ) ಅಲುಗು; ಅಲುಗಾಡು; ಕಂಪಿಸು; ಅಳ್ಳಾಡು; ಹಿಂದಕ್ಕೂ ಮುಂದಕ್ಕೂ ತೂಗಾಡು; ಒನೆದಾಡು; ಒಲೆದಾಡು.
  2. (ಜ್ವಾಲೆ ಮೊದಲಾದವುಗಳ ವಿಷಯದಲ್ಲಿ, ರೂಪಕವಾಗಿ ಆಶೆ ಮೊದಲಾದವುಗಳ ವಿಷಯದಲ್ಲಿ) ಮಿನುಗು; ಮಿಣುಕು; ಪರ್ಯಾಯವಾಗಿ ಬೆಳಗು ಮತ್ತು ನಂದಿಹೋಗುತ್ತಿರು.
  3. (ಬೆಳಕಿನ ವಿಷಯದಲ್ಲಿ) ಮಿಂಚು; ಮಿನುಗು; ಕ್ಷಣಿಕವಾಗಿ ಹೆಚ್ಚು ಕಡಮೆ ಆಗುತ್ತಿರು.
ಪದಗುಚ್ಛ

flicker out ಕೊನೆಯ ಬಾರಿಗೆ ಮಿನುಗಿ ಆರಿಹೋಗು; ಅಂತಿಮವಾಗಿ ಮಿಂಚಿ ನಂದಿಹೋಗು.

See also 1flicker  3flicker
2flicker ಹ್ಲಿಕರ್‍
ನಾಮವಾಚಕ
  1. ಬೆಳಕಿನ ಮಿನುಗಾಟ; ಮಿಣುಕಾಟ; ಹೊಳೆಯುವುದು, ಕ್ಷೀಣಿಸುವುದು ಹೀಗೆ ಸರದಿಯಂತೆ ನಡೆಯುತ್ತ ಹೋಗುವುದು.
  2. ಅಲುಗಾಟ; ತೂಗಾಡುವುದು; ಒಲೆದಾಡುವುದು.
See also 1flicker  2flicker
3flicker ಹ್ಲಿಕರ್‍
ನಾಮವಾಚಕ

ಮಿಣುಕು ಮರಕುಟಿಗ; ರೆಕ್ಕೆ ಮತ್ತು ಬಾಲದ ಕೆಳಗಡೆ ದಟ್ಟ ಹಳದಿ ಯಾ ಕೆಂಪು ಬಣ್ಣದ ಗುರುತಿರುವ, ಉತ್ತರ ಅಮೆರಿಕದ ಕೊಲಾಪ್ಟಸ್‍ ಕುಲದ ಮರಕುಟಿಗ ಹಕ್ಕಿ.