See also 2flicker  3flicker
1flicker ಹ್ಲಿಕರ್‍
ಅಕರ್ಮಕ ಕ್ರಿಯಾಪದ
  1. (ಬಾವುಟ, ಎಲೆ, ಹಾವಿನ ನಾಲಿಗೆ, ಗಾಳಿ, ಮೊದಲಾದವುಗಳ ವಿಷಯದಲ್ಲಿ) ಅಲುಗು; ಅಲುಗಾಡು; ಕಂಪಿಸು; ಅಳ್ಳಾಡು; ಹಿಂದಕ್ಕೂ ಮುಂದಕ್ಕೂ ತೂಗಾಡು; ಒನೆದಾಡು; ಒಲೆದಾಡು.
  2. (ಜ್ವಾಲೆ ಮೊದಲಾದವುಗಳ ವಿಷಯದಲ್ಲಿ, ರೂಪಕವಾಗಿ ಆಶೆ ಮೊದಲಾದವುಗಳ ವಿಷಯದಲ್ಲಿ) ಮಿನುಗು; ಮಿಣುಕು; ಪರ್ಯಾಯವಾಗಿ ಬೆಳಗು ಮತ್ತು ನಂದಿಹೋಗುತ್ತಿರು.
  3. (ಬೆಳಕಿನ ವಿಷಯದಲ್ಲಿ) ಮಿಂಚು; ಮಿನುಗು; ಕ್ಷಣಿಕವಾಗಿ ಹೆಚ್ಚು ಕಡಮೆ ಆಗುತ್ತಿರು.
ಪದಗುಚ್ಛ

flicker out ಕೊನೆಯ ಬಾರಿಗೆ ಮಿನುಗಿ ಆರಿಹೋಗು; ಅಂತಿಮವಾಗಿ ಮಿಂಚಿ ನಂದಿಹೋಗು.