See also 2flex
1flex ಹ್ಲೆಕ್ಸ್‍
ಸಕರ್ಮಕ ಕ್ರಿಯಾಪದ
  1. (ಕೀಲು, ಕೈಕಾಲುಗಳನ್ನು) ಬಗ್ಗಿಸು; ಬಾಗಿಸು.
  2. ಆಕುಂಚಿಸು; ಆಕುಂಚನಗೊಳಿಸು; ಕೀಲನ್ನು ಬಾಗಿಸಲು ಸ್ನಾಯುವನ್ನು ಚಲಿಸು; ಅಲ್ಲಾಡಿಸು.
  3. (ಭೂವಿಜ್ಞಾನ) (ಭೂಪದರಗಳನ್ನು) ಬಗ್ಗಿಸು; ಬಾಗಿಸು; ವಕ್ರಮಾಡು.
  4. (ಪ್ರಾಕ್ತನಶಾಸ್ತ್ರ) ಶವದ ಕಾಲುಗಳು ಗದ್ದದ ಕೆಳಕ್ಕೆ ಬರುವಂತೆ ಇಡು, ಮಡಿಚು.
ಅಕರ್ಮಕ ಕ್ರಿಯಾಪದ

ಬಗ್ಗು; ಬಾಗು.

See also 1flex
2flex ಹ್ಲೆಕ್ಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಬಾಗುತಂತಿ; ನಮ್ಯತಂತಿ; ವಿದ್ಯುದ್ವಹನಕ್ಕೆ ಉಪಯೋಗಿಸುವ, ಅವಾಹಕ ಹೊದಿಕೆಯುಳ್ಳ, ಬಾಗಬಲ್ಲ ತಂತಿ.