See also 2flaw  3flaw
1flaw ಹ್ಲಾ
ನಾಮವಾಚಕ
  1. (ಗೋಡೆ, ಬಟ್ಟೆ, ಲೋಹ, ಮೊದಲಾದವುಗಳಲ್ಲಿ) ಒಡಕು; ಬಿರುಕು; ಸೀಳು; ಸಂದು; ಛಿದ್ರ; ಹರಕು: a flaw in their apparel needed a patch ಅವರ ಉಡುಪಿನ ಹರಕೊಂದಕ್ಕೆ ತೇಪೆ ಹಾಕಬೇಕಾಯಿತು.
  2. (ನಡತೆಯಲ್ಲಿ ಯಾ ಯಾವುದೇ ಕೆಲಸದಲ್ಲಿ) ಕೊರತೆ; ಕುಂದು; ನ್ಯೂನತೆ; ಲೋಪ; ತಪ್ಪು; ಐಬು; ದೋಷ; ಕಳಂಕ.
  3. (ನ್ಯಾಯಶಾಸ್ತ್ರ) ಲೋಪದೋಷ; (ದಸ್ತಾವೇಜು, ಕಾರ್ಯಕ್ರಮ, ಸಾಕ್ಷ್ಯ, ಮೊದಲಾದವುಗಳಲ್ಲಿ ಕಾನೂನಿನ ದೃಷ್ಟಿಯಿಂದ ಅದನ್ನು) ನಿಷ್ಪ್ರಯೋಜಕಗೊಳಿಸುವಂಥ ಲೋಪ; ಅಸಿಂಧುಗೊಳಿಸುವ ದೋಷ.
See also 1flaw  3flaw
2flaw ಹ್ಲಾ
ಸಕರ್ಮಕ ಕ್ರಿಯಾಪದ
  1. ಬಿರುಕುಬೀಳಿಸು; ಒಡೆ; ಹರಿ; ಸೀಳು.
  2. ಕೆಡಿಸು; ಕುಂದು ತರು; ಕಳಂಕ ಉಂಟುಮಾಡು.
  3. ಹಾಳುಮಾಡು; ನಾಶಮಾಡು.
ಅಕರ್ಮಕ ಕ್ರಿಯಾಪದ
  1. ಬಿರುಕುಬೀಳು; ಒಡೆ; ಹರಿದುಹೋಗು.
  2. ಕೆಡು; ಕುಂದುಂಟಾಗು; ಕಳಂಕಿತವಾಗು.
  3. ಹಾಳಾಗು; ನಾಶವಾಗು.
See also 1flaw  2flaw
3flaw ಹ್ಲಾ
ನಾಮವಾಚಕ
  1. ಬಿರುಸುಗಾಳಿ; ಚಂಡಮಾರುತ; ಸಾಮಾನ್ಯವಾಗಿ ಮಳೆ, ಹಿಮ, ಮೊದಲಾದವುಗಳಿಂದ ಕೂಡಿ, ಥಟ್ಟನೆ ಅತಿ ಬಿರುಸಾಗಿ ಬೀಸುವ ಗಾಳಿ.
  2. ಲಘು ಚಂಡಮಾರುತ; ಚಿಕ್ಕ ಬಿರುಗಾಳಿ; ಅಲ್ಪ ಅವಧಿಯ ಬಿರುಗಾಳಿ, ಸುರಿಮಳೆ, ಮೊದಲಾದವು.