See also 2flaw  3flaw
1flaw ಹ್ಲಾ
ನಾಮವಾಚಕ
  1. (ಗೋಡೆ, ಬಟ್ಟೆ, ಲೋಹ, ಮೊದಲಾದವುಗಳಲ್ಲಿ) ಒಡಕು; ಬಿರುಕು; ಸೀಳು; ಸಂದು; ಛಿದ್ರ; ಹರಕು: a flaw in their apparel needed a patch ಅವರ ಉಡುಪಿನ ಹರಕೊಂದಕ್ಕೆ ತೇಪೆ ಹಾಕಬೇಕಾಯಿತು.
  2. (ನಡತೆಯಲ್ಲಿ ಯಾ ಯಾವುದೇ ಕೆಲಸದಲ್ಲಿ) ಕೊರತೆ; ಕುಂದು; ನ್ಯೂನತೆ; ಲೋಪ; ತಪ್ಪು; ಐಬು; ದೋಷ; ಕಳಂಕ.
  3. (ನ್ಯಾಯಶಾಸ್ತ್ರ) ಲೋಪದೋಷ; (ದಸ್ತಾವೇಜು, ಕಾರ್ಯಕ್ರಮ, ಸಾಕ್ಷ್ಯ, ಮೊದಲಾದವುಗಳಲ್ಲಿ ಕಾನೂನಿನ ದೃಷ್ಟಿಯಿಂದ ಅದನ್ನು) ನಿಷ್ಪ್ರಯೋಜಕಗೊಳಿಸುವಂಥ ಲೋಪ; ಅಸಿಂಧುಗೊಳಿಸುವ ದೋಷ.