See also 2flash  3flash
1flash ಹ್ಲಾಷ್‍
ಸಕರ್ಮಕ ಕ್ರಿಯಾಪದ
  1. ಬೆಳಕು – ಬೀರು, ಸೂಸು.
  2. ಪ್ರತಿಫಲಿಸು; ಹಿಂದಕ್ಕೆ ಎಸೆ.
  3. ಚಿಮ್ಮು; ಕಾರು: eyes flash fire ಕಣ್ಣುಗಳು ಕಿಡಿಕಾರುತ್ತವೆ.
  4. (ಕ್ಷಣಕಾಲ) ಹೊಳೆಯಿಸು; ಬೆಳಗಿಸು; ಬೆಳಗುವಂತೆ ಮಾಡು; ಝಳಪಿಸು; ಮಿಂಚಿಸು: flashed his sword ಕತ್ತಿ ಝಳಪಿಸಿದನು.
  5. ಬೆಳಗು; ಬೆಳಕು – ಹರಿಸು, ಹಾಯಿಸು: had a lantern flashed in my face ಲಾಂದ್ರದ ಬೆಳಕನ್ನು ನನ್ನ ಮುಖದ ಮೇಲೆ ಹರಿಸಿದ.
  6. (ಎಚ್ಚರಿಕೆ ಕೊಡಲು ಇಲ್ಲವೆ ದಿಕ್ಕನ್ನು ತೋರಿಸಲು) ವಾಹನಗಳ ಮುಂದೀಪಗಳನ್ನು ಕ್ಷಣಕಾಲ ಹೊತ್ತಿಸಿ, ಆರಿಸಿ ಮಾಡು.
  7. ಹಠಾತ್ತಾಗಿ – ತೋರಿಸು, ಪ್ರಕಟಿಸು.
  8. ಆಡಂಬರವಾಗಿ – ಪ್ರದರ್ಶಿಸು, ತೋರಿಸು.
  9. (ರೇಡಿಯೋ, ಟೆಲಿಗ್ರಾಹ್‍, ಮೊದಲಾದವುಗಳ ಮೂಲಕ ವಾರ್ತೆ ಮೊದಲಾದವನ್ನು) ಹರಡು; ಪ್ರಸರಿಸು; ಕಳುಹಿಸು; ತಿಳಿಸು: the news was flashed over India ಸುದ್ದಿಯನ್ನು ಭಾರತದ ಆದ್ಯಂತ ಪ್ರಸಾರ ಮಾಡಲಾಯಿತು.
  10. (ಗಾಜು ಮಾಡುವಾಗ) ಹಲಗೆಯಾಗಿ ಹರಡು.
  11. (ಸಾಮಾನ್ಯ ಗಾಜಿನ ಮೇಲೆ) ಬಣ್ಣದ ಯಾ ಬಿಳಿಯ ಪದರ ಹರಡು.
  12. (ಹೊಳೆ ಮೊದಲಾದವನ್ನು) ನೀರಿನಿಂದ ತುಂಬು; ತುಂಬಿ ಹರಿಸು.
ಅಕರ್ಮಕ ಕ್ರಿಯಾಪದ
  1. ಥಟ್ಟನೆ ಹೊತ್ತಿಕೊ; ಧಗ್ಗನೆ ಉರಿ ಏಳು; ಕಿಡಿಗೆದರು.
  2. ಫಕ್ಕನೆ – ಗೋಚರಿಸು, ಹೊಳೆ, ಅರಿವಾಗು, ಅರ್ಥವಾಗು: idea flashed upon me ನನಗೆ ಉಪಾಯ ಪಕ್ಕನೆ ಹೊಳೆಯಿತು.
  3. (ಮಿಂಚಿನಂತೆ) ವೇಗವಾಗಿ ಚಲಿಸು.
  4. ಹಲಗೆಯಾಗಿ ಹರಡಿಕೊ.
  5. (ನೀರು) ನುಗ್ಗಿ ಹರಿ; ಜೋರಾಗಿ ಪ್ರವಹಿಸು.
  6. ಮಿನುಗು; ಕ್ಷಣ ಕಾಲ ಯಾ ಬಿಟ್ಟುಬಿಟ್ಟು ಬೆಳಕನ್ನು ಸೂಸು ಯಾ ಪ್ರತಿಫಲಿಸು: lighthouse flashes once a minute ದೀಪದ ಮನೆ ನಿಮಿಷಕ್ಕೊಮ್ಮೆ ಬೆಳಕನ್ನು ಸೂಸುತ್ತದೆ.
  7. (ಅಶಿಷ್ಟ) ಅಶ್ಲೀಲವಾಗಿ ಯಾ ಅಸಭ್ಯವಾಗಿ ಕ್ಷಣಕಾಲ ತನ್ನನ್ನೇ ಪ್ರದರ್ಶಿಸಿಕೊ.
ನುಡಿಗಟ್ಟು

flash out (or up) ಇದ್ದಕ್ಕಿದಂತೆ ಕೋಪಿಸಿಕೊ, ಕೆರಳು, ಉದ್ರೇಕಗೊಳ್ಳು.

See also 1flash  3flash
2flash ಹ್ಲಾಷ್‍
ನಾಮವಾಚಕ
  1. ಥಟ್ಟನೆ ಎದ್ದ ಉರಿ; (ಮುಖ್ಯವಾಗಿ ಮಿಂಚಿನ) ಕ್ಷಣಿಕ ಪ್ರಕಾಶ.
  2. (ರೂಪಕವಾಗಿ) ಬುದ್ಧಿ ಯಾ ಚಮತ್ಕಾರದ ಹೊಳಪು; ಇದ್ದಕ್ಕಿದ್ದಂತೆ, ಥಟ್ಟನೆ – ಮನಸ್ಸಿಗೆ ಹೊಳೆಯುವುದು.
  3. ಮಿಂಚಿನ ಹೊಳಪಿನಷ್ಟುಕಾಲ; ಗಳಿಗೆ; ಕ್ಷಣ (ಮಾತ್ರ): in a flash ಕ್ಷಣಮಾತ್ರದಲ್ಲಿ; ರೆಪ್ಪೆ ಹೊಡೆಯುವಷ್ಟರಲ್ಲಿ.
  4. ಆಡಂಬರ; ವಿಜೃಂಭಣೆ; ಸಂಭ್ರಮ; ಸಡಗರ.
  5. ಹೊಳಪು; ಮಿಂಚು; ಝಳಪು; ಸ್ಫುರಣ: a flash of hope ಆಸೆಯ ಒಂದು ಹೊಳಪು.
  6. (ಚಲನಚಿತ್ರ) ಕ್ಷಣಪ್ರದರ್ಶನ; ಒಂದು ದೃಶ್ಯವನ್ನು ಕ್ಷಣಕಾಲ ಪರದೆಯ ಮೇಲೆ ತೋರಿಸುವುದು.
  7. (ಚಲನಚಿತ್ರ, ಕಥೆ, ಕಾದಂಬರಿ) ಪುನರಾವರ್ತನ; ಹಿಂದೆ ನಡೆದ ಘಟನೆಯ ದೃಶ್ಯದ ಮರುಕಳಿಕೆ.
  8. ವರ್ಣಕ; ಮಾದಕ ಪಾನೀಯಗಳಿಗೆ ಬಣ್ಣ ಕೊಡಲು ಮೆಣಸಿನ ಪುಡಿ ಯಾ ಮೆಣಸಿನಕಾಯಿ ಪುಡಿ ಮತ್ತು ಹುರಿದ ಸಕ್ಕರೆಯಿಂದ ತಯಾರಿಸಿದ ಒಂದು ಪದಾರ್ಥ.
  9. ಕ್ಷಣಪ್ರವಾಹ ಯಾ ಅದನ್ನು ಉಂಟುಮಾಡುವ ಸಲಕರಣೆ; ಆಳ ಸಾಲದಿರುವ ಸ್ಥಳದಲ್ಲಿ ದೋಣಿ ನಡೆಸಲು ಅನುಕೂಲವಾಗುವಂತೆ ಅಣೆಕಟ್ಟೆಯಿಂದ ಫಕ್ಕನೆ ಬಿಟ್ಟ ನೀರಿನ ಪ್ರವಾಹ ಯಾ ಅದಕ್ಕೆ ಬಳಸುವ ಸಾಧನ.
  10. (ಬ್ರಿಟಿಷ್‍ ಪ್ರಯೋಗ) (ಸೇನೆ) (ಸೇನಾವಿಭಾಗಗಳ ವ್ಯತ್ಯಾಸ ತೋರಿಸಲು ಸಮವಸ್ತ್ರದ ಮೇಲೆ ಚಿಹ್ನೆಯಾಗಿ ಬಳಸುವ, ಯಾವುದೋ ಒಂದು) ಬಣ್ಣದ ಬಟ್ಟೆ ಯಾ ಪಟ್ಟಿ.
  11. ಮಿಂಚುಸುದ್ದಿ; ರೇಡಿಯೋ, ಟೆಲಿಗ್ರಾಹ್‍, ಮೊದಲಾದವುಗಳ ಮೂಲಕ ಕಳುಹಿಸಿದ ಸಂಕ್ಷಿಪ್ತ ಸುದ್ದಿ ಯಾ ಮುಖ್ಯಸುದ್ದಿಯ ಸಂಕ್ಷಿಪ್ತ ವರದಿ.
  12. ಆಶಿಷ್ಟ ಭಾಷೆ; ಕೂಟಭಾಷೆ; ಕಳ್ಳರು, ಅಲೆಮಾರಿಗಳು, ಮೊದಲಾದವರು ಬಳಸುವ ವಿಚಿತ್ರ ಪರಿಭಾಷೆ.
ನುಡಿಗಟ್ಟು

flash in the pan

  1. ಕ್ಷಣಕಾರ್ಯ; ಕ್ಷಣಕಾಲದಲ್ಲಿ ಮುಗಿದು ಹೋಗುವ ಕೆಲಸ.
  2. ವಿಫಲ ಪ್ರಯತ್ನ; ವ್ಯರ್ಥ ಪ್ರಯತ್ನ; ಆಶಾದಾಯಕವಾಗಿ ತೀವ್ರಪ್ರಯತ್ನದಿಂದ ಶುರುವಾಗಿ ಕೂಡಲೇ ಯಾ ಕೊನೆಯಲ್ಲಿ ಪುಸ್ಸೆಂದು ಹೋಗುವ ಪ್ರಯತ್ನ.
  3. ವ್ಯರ್ಥಪ್ರಯತ್ನ ಮಾಡುವವನು.
See also 1flash  2flash
3flash ಹ್ಲಾಷ್‍
ಗುಣವಾಚಕ
  1. ಆಡಂಬರದ.
  2. ಹೊರ ಹೊಳಪಿನ.
  3. ಕೃತಕ; ಖೋಟಾ: flash notes ಖೋಟಾ ನೋಟುಗಳು.
  4. ಅಶಿಷ್ಟ ಭಾಷೆಯ; ಕೂಟಭಾಷೆಯ; (ಕಳ್ಳರು, ತಿರುಕರು, ಸೂಳೆಯರು, ಮೊದಲಾದವರು ಬಳಸುವ) ವಿಚಿತ್ರ ಪರಿಭಾಷೆಯ ಯಾ ಅದಕ್ಕೆ ಸಂಬಂಧಿಸಿದ.
  5. ಕಳ್ಳರು, ಅಲೆಮಾರಿಗಳು, ಸೂಳೆಯರು, ಮೊದಲಾದವರಿಗೆ ಸಂಬಂಧಿಸಿದ: I know the house; it is a flash crib ಆ ಮನೆ ನನಗೆ ಗೊತ್ತು; ಅದೊಂದು ಕಳ್ಳರ, ಸೂಳೆಯರ ಕೊಂಪೆ.