See also 2flash  3flash
1flash ಹ್ಲಾಷ್‍
ಸಕರ್ಮಕ ಕ್ರಿಯಾಪದ
  1. ಬೆಳಕು – ಬೀರು, ಸೂಸು.
  2. ಪ್ರತಿಫಲಿಸು; ಹಿಂದಕ್ಕೆ ಎಸೆ.
  3. ಚಿಮ್ಮು; ಕಾರು: eyes flash fire ಕಣ್ಣುಗಳು ಕಿಡಿಕಾರುತ್ತವೆ.
  4. (ಕ್ಷಣಕಾಲ) ಹೊಳೆಯಿಸು; ಬೆಳಗಿಸು; ಬೆಳಗುವಂತೆ ಮಾಡು; ಝಳಪಿಸು; ಮಿಂಚಿಸು: flashed his sword ಕತ್ತಿ ಝಳಪಿಸಿದನು.
  5. ಬೆಳಗು; ಬೆಳಕು – ಹರಿಸು, ಹಾಯಿಸು: had a lantern flashed in my face ಲಾಂದ್ರದ ಬೆಳಕನ್ನು ನನ್ನ ಮುಖದ ಮೇಲೆ ಹರಿಸಿದ.
  6. (ಎಚ್ಚರಿಕೆ ಕೊಡಲು ಇಲ್ಲವೆ ದಿಕ್ಕನ್ನು ತೋರಿಸಲು) ವಾಹನಗಳ ಮುಂದೀಪಗಳನ್ನು ಕ್ಷಣಕಾಲ ಹೊತ್ತಿಸಿ, ಆರಿಸಿ ಮಾಡು.
  7. ಹಠಾತ್ತಾಗಿ – ತೋರಿಸು, ಪ್ರಕಟಿಸು.
  8. ಆಡಂಬರವಾಗಿ – ಪ್ರದರ್ಶಿಸು, ತೋರಿಸು.
  9. (ರೇಡಿಯೋ, ಟೆಲಿಗ್ರಾಹ್‍, ಮೊದಲಾದವುಗಳ ಮೂಲಕ ವಾರ್ತೆ ಮೊದಲಾದವನ್ನು) ಹರಡು; ಪ್ರಸರಿಸು; ಕಳುಹಿಸು; ತಿಳಿಸು: the news was flashed over India ಸುದ್ದಿಯನ್ನು ಭಾರತದ ಆದ್ಯಂತ ಪ್ರಸಾರ ಮಾಡಲಾಯಿತು.
  10. (ಗಾಜು ಮಾಡುವಾಗ) ಹಲಗೆಯಾಗಿ ಹರಡು.
  11. (ಸಾಮಾನ್ಯ ಗಾಜಿನ ಮೇಲೆ) ಬಣ್ಣದ ಯಾ ಬಿಳಿಯ ಪದರ ಹರಡು.
  12. (ಹೊಳೆ ಮೊದಲಾದವನ್ನು) ನೀರಿನಿಂದ ತುಂಬು; ತುಂಬಿ ಹರಿಸು.
ಅಕರ್ಮಕ ಕ್ರಿಯಾಪದ
  1. ಥಟ್ಟನೆ ಹೊತ್ತಿಕೊ; ಧಗ್ಗನೆ ಉರಿ ಏಳು; ಕಿಡಿಗೆದರು.
  2. ಫಕ್ಕನೆ – ಗೋಚರಿಸು, ಹೊಳೆ, ಅರಿವಾಗು, ಅರ್ಥವಾಗು: idea flashed upon me ನನಗೆ ಉಪಾಯ ಪಕ್ಕನೆ ಹೊಳೆಯಿತು.
  3. (ಮಿಂಚಿನಂತೆ) ವೇಗವಾಗಿ ಚಲಿಸು.
  4. ಹಲಗೆಯಾಗಿ ಹರಡಿಕೊ.
  5. (ನೀರು) ನುಗ್ಗಿ ಹರಿ; ಜೋರಾಗಿ ಪ್ರವಹಿಸು.
  6. ಮಿನುಗು; ಕ್ಷಣ ಕಾಲ ಯಾ ಬಿಟ್ಟುಬಿಟ್ಟು ಬೆಳಕನ್ನು ಸೂಸು ಯಾ ಪ್ರತಿಫಲಿಸು: lighthouse flashes once a minute ದೀಪದ ಮನೆ ನಿಮಿಷಕ್ಕೊಮ್ಮೆ ಬೆಳಕನ್ನು ಸೂಸುತ್ತದೆ.
  7. (ಅಶಿಷ್ಟ) ಅಶ್ಲೀಲವಾಗಿ ಯಾ ಅಸಭ್ಯವಾಗಿ ಕ್ಷಣಕಾಲ ತನ್ನನ್ನೇ ಪ್ರದರ್ಶಿಸಿಕೊ.
ನುಡಿಗಟ್ಟು

flash out (or up) ಇದ್ದಕ್ಕಿದಂತೆ ಕೋಪಿಸಿಕೊ, ಕೆರಳು, ಉದ್ರೇಕಗೊಳ್ಳು.