See also 2flame
1flame ಹ್ಲೇಮ್‍
ನಾಮವಾಚಕ
  1. ಹೊತ್ತಿಸಿದ, ಉರಿಯುತ್ತಿರುವ – ಅನಿಲ.
  2. ಉರಿ; ಜ್ವಾಲೆ; ಹೊತ್ತಿಸಿದ, ಉರಿಯುತ್ತಿರುವ – ಅನಿಲಭಾಗ.
  3. (ಕಣ್ಣಿಗೆ ಕಾಣುವ) ಉರಿ; ಜ್ವಲನ; ಉರಿತ; ದಹನ: in flames ಹೊತ್ತಿ ಉರಿಯುತ್ತಿರುವ.
  4. ಜ್ಯೋತಿ; ಪ್ರಭೆ; ಪ್ರಕಾಶ; ಉಜ್ಜ್ವಲವಾದ ಬೆಳಕು.
  5. ಉಜ್ಜ್ವಲವರ್ಣ.
  6. ಬೆಂಕಿಯ ಕೆಂಪುಬಣ್ಣ.
  7. (ಮುಖ್ಯವಾಗಿ ಪ್ರಣಯದ) ಭಾವದ ಆವೇಗ; ಪ್ರೇಮಾಗ್ನಿ.
  8. ನಲ್ಲ ಯಾ ನಲ್ಲೆ; ಪ್ರಿಯ ಯಾ ಪ್ರಿಯೆ; ಪ್ರೇಮಿ; ಕಾದಲೆ; ಪ್ರೇಯಸಿ: an old flame of mine ನನ್ನ ಹಳೆಯ ನಲ್ಲನೊಬ್ಬ ಯಾ ನಲ್ಲೆಯೊಬ್ಬಳು.
  9. ಹಲವು ಬಗೆಯ ಪತಂಗಜಾತಿಗಳು.
ಪದಗುಚ್ಛ
  1. flame gun ಬೆಂಕಿಬಂದೂಕ; ಕಳೆ ಮೊದಲಾದವನ್ನು ನಾಶ ಮಾಡಲು ಬಳಸುವ ಬೆಂಕಿಯನ್ನು ಉಗುಳುವ ಬಂದೂಕ.
  2. the flames (ಮುಖ್ಯವಾಗಿ ಸುಟ್ಟು ಭಸ್ಮ ಮಾಡಿಬಿಡುವಂಥ) ಉರಿ; ಜ್ವಾಲೆ.
ನುಡಿಗಟ್ಟು

fan the flame

  1. ಬೀಸಣಿಗೆ ಬೀಸಿ ಉರಿಹೆಚ್ಚಿಸು.
  2. ಉರಿಯುವ ಬೆಂಕಿಗೆ ತುಪ್ಪಹಾಕು; ಉದ್ರೇಕ, ದ್ವೇಷ, ಮೊದಲಾದವನ್ನು ಹೆಚ್ಚಿಸು, ಉಲ್ಬಣಗೊಳಿಸು.
See also 1flame
2flame ಹ್ಲೇಮ್‍
ಸಕರ್ಮಕ ಕ್ರಿಯಾಪದ
  1. ಜ್ಯೋತಿ ಯಾ ಪ್ರಭೆಯನ್ನು ಬೀರು.
  2. ಉರಿಯೆಬ್ಬಿಸು; ಜ್ವಾಲೆ ಏಳಿಸು.
  3. ಜ್ಯೋತಿಯ ಮೂಲಕ ಯಾ ಜ್ವಾಲೆಯ ರೂಪದಲ್ಲಿ ಸಂಕೇತ ಕಳುಹಿಸು.
  4. ಬೆಂಕಿಯ ಉರಿಗೆ, ಜ್ವಾಲೆಗೆ – ಒಡ್ಡು, ಗುರಿಪಡಿಸು.
ಅಕರ್ಮಕ ಕ್ರಿಯಾಪದ
  1. ಉರಿಯೇಳು; ಹೊತ್ತಿಕೊ; ಜ್ವಲಿಸು; ಹೊತ್ತಿಕೊಂಡು ಉರಿ; ಜ್ವಾಲೆ – ಏಳು, ಇಡು.
  2. (ಉತ್ಕಟವಾದ ಯಾವುದೇ ಭಾವದ ವಿಷಯದಲ್ಲಿ) ಕೆರಳು; ಪ್ರಜ್ವಲಿಸು; ಕನಲು; ಸಿಡಿದು ಹೊಮ್ಮು: his rage flamed high ಅವನ ಕ್ರೋಧವು ಕೆರಳಿ ಪ್ರಜ್ವಲಿಸಿತು.
  3. (ಮನುಷ್ಯರ ವಿಷಯದಲ್ಲಿ) ಕೋಪೋದ್ರೇಕಗೊಳ್ಳು; (ಸಿಟ್ಟೆದ್ದು) ಉರಿದು ಬೀಳು; ಕ್ರೋಧಾವೇಶಗೊಳ್ಳು; ಕ್ರೋಧದಿಂದ ಪ್ರಜ್ವಲಿಸು.
  4. (ಬೆಂಕಿಯಂತೆ) ಹೊಳೆ; ಬೆಳಗು; ಪ್ರಕಾಶಿಸು; ಜ್ವಲಿಸು.
  5. (ಕಾವ್ಯಪ್ರಯೋಗ) ಉರಿಯಂತೆ ಹಬ್ಬು; ಜ್ವಾಲೆಯಂತೆ ಹರಡು.
ಪದಗುಚ್ಛ

flame out (ಜೆಟ್‍ ಎಂಜಿನ್ನಿನ ವಿಷಯದಲ್ಲಿ) ಉರಿ ನಂದಿಹೋಗು; ದಹನಕೋಷ್ಠದಲ್ಲಿ ಬೆಂಕಿ ಆರಿಹೋಗಿ ಯಂತ್ರ – ನಡೆಯದೆ ಹೋಗು, ನಿಂತುಹೋಗು.