See also 1flame
2flame ಹ್ಲೇಮ್‍
ಸಕರ್ಮಕ ಕ್ರಿಯಾಪದ
  1. ಜ್ಯೋತಿ ಯಾ ಪ್ರಭೆಯನ್ನು ಬೀರು.
  2. ಉರಿಯೆಬ್ಬಿಸು; ಜ್ವಾಲೆ ಏಳಿಸು.
  3. ಜ್ಯೋತಿಯ ಮೂಲಕ ಯಾ ಜ್ವಾಲೆಯ ರೂಪದಲ್ಲಿ ಸಂಕೇತ ಕಳುಹಿಸು.
  4. ಬೆಂಕಿಯ ಉರಿಗೆ, ಜ್ವಾಲೆಗೆ – ಒಡ್ಡು, ಗುರಿಪಡಿಸು.
ಅಕರ್ಮಕ ಕ್ರಿಯಾಪದ
  1. ಉರಿಯೇಳು; ಹೊತ್ತಿಕೊ; ಜ್ವಲಿಸು; ಹೊತ್ತಿಕೊಂಡು ಉರಿ; ಜ್ವಾಲೆ – ಏಳು, ಇಡು.
  2. (ಉತ್ಕಟವಾದ ಯಾವುದೇ ಭಾವದ ವಿಷಯದಲ್ಲಿ) ಕೆರಳು; ಪ್ರಜ್ವಲಿಸು; ಕನಲು; ಸಿಡಿದು ಹೊಮ್ಮು: his rage flamed high ಅವನ ಕ್ರೋಧವು ಕೆರಳಿ ಪ್ರಜ್ವಲಿಸಿತು.
  3. (ಮನುಷ್ಯರ ವಿಷಯದಲ್ಲಿ) ಕೋಪೋದ್ರೇಕಗೊಳ್ಳು; (ಸಿಟ್ಟೆದ್ದು) ಉರಿದು ಬೀಳು; ಕ್ರೋಧಾವೇಶಗೊಳ್ಳು; ಕ್ರೋಧದಿಂದ ಪ್ರಜ್ವಲಿಸು.
  4. (ಬೆಂಕಿಯಂತೆ) ಹೊಳೆ; ಬೆಳಗು; ಪ್ರಕಾಶಿಸು; ಜ್ವಲಿಸು.
  5. (ಕಾವ್ಯಪ್ರಯೋಗ) ಉರಿಯಂತೆ ಹಬ್ಬು; ಜ್ವಾಲೆಯಂತೆ ಹರಡು.
ಪದಗುಚ್ಛ

flame out (ಜೆಟ್‍ ಎಂಜಿನ್ನಿನ ವಿಷಯದಲ್ಲಿ) ಉರಿ ನಂದಿಹೋಗು; ದಹನಕೋಷ್ಠದಲ್ಲಿ ಬೆಂಕಿ ಆರಿಹೋಗಿ ಯಂತ್ರ – ನಡೆಯದೆ ಹೋಗು, ನಿಂತುಹೋಗು.