See also 2fix
1fix ಹಿಕ್ಸ್‍
ಸಕರ್ಮಕ ಕ್ರಿಯಾಪದ
  1. ಸ್ಥಿರಪಡಿಸು; ಭದ್ರಪಡಿಸು; ನಿಲ್ಲುವಂತೆ ಮಾಡು; ದೃಢಪಡಿಸು.
  2. ಬಿಗಿ; ಬಂಧಿಸು; ಕಟ್ಟು.
  3. (ತತ್ತ್ವ, ನೆನಪು, ಮೊದಲಾದವುಗಳನ್ನು) ನೆಡು; ಬೇರೂರುವಂತೆ ಮಾಡು; ಸ್ಥಾಪಿಸು; ನೆಲೆಗೊಳಿಸು; ನಾಟು; ಊರಿ ನಿಲ್ಲಿಸು: fix a post in the ground ನೆಲದಲ್ಲಿ ಕಂಬವನ್ನು ಭದ್ರವಾಗಿ ನೆಡು. threats only fix the habit deeper ಬೆದರಿಕೆಗಳು ಅಭ್ಯಾಸವನ್ನು ಇನ್ನೂ ಆಳವಾಗಿ ಬೇರೂರುವಂತೆ ಮಾಡುತ್ತವೆ.
  4. ಸಿಕ್ಕಿಸು; ಹೂಡು: fix the bayonet ಸನೀನನ್ನು ಬಂದೂಕಿನ ಮೂತಿಗೆ ಸಿಕ್ಕಿಸು.
  5. (ಕಣ್ಣು, ನೋಟ, ಪ್ರೀತಿ, ಗಮನವನ್ನು) ಇಡು; ಇರಿಸು; ಇಕ್ಕು; ನೆಡು; ನಾಟು; ಸ್ಥಾಪಿಸು; ನಿಶ್ಚಲವಾಗಿ ನಿಲ್ಲಿಸು: fixed his attention on his work ತನ್ನ ಗಮನವನ್ನು ಕೆಲಸದ ಮೇಲೆ ನೆಟ್ಟನು. has fixed his affections on a worthless woman ಅವನು ತನ್ನ ಒಲವನ್ನು ಕೆಲಸಕ್ಕೆ ಬಾರದ ಹೆಂಗಸೊಬ್ಬಳ ಮೇಲೆ ಇಟ್ಟಿದ್ದಾನೆ.
  6. (ವಸ್ತುವಿನ ವಿಷಯದಲ್ಲಿ) ಗಮನ, ಕಣ್ಣು, ಮೊದಲಾದವನ್ನು ಹಿಡಿದು ನಿಲ್ಲಿಸು, ಸೆಳೆದು ನಿಲ್ಲಿಸು: this unusual sight fixed his attention ಈ ಅಸಾಧಾರಣ ದೃಶ್ಯ ಅವನ ಗಮನವನ್ನು ಹಿಡಿದು ನಿಲ್ಲಿಸಿತು.
  7. (ಕಣ್ಣುಗಳು, ಮುಖಭಾವ) ಅಲ್ಲಾಡದಂತೆ ಮಾಡು; ನಿಶ್ಚಲವಾಗಿಸು; ಸೆಟೆದುಕೊಳ್ಳುವಂತೆ ಮಾಡು: her heart stops, and her eyes fix ಅವಳ ಹೃದಯ ನಿಲ್ಲುತ್ತದೆ ಮತ್ತು ಅವಳ ಕಣ್ಣುಗಳು ಸೆಟೆದುಕೊಳ್ಳುತ್ತವೆ.
  8. ಸ್ಥಿರೀಕರಿಸು:
    1. ಬಟ್ಟೆಗೆ ಹಾಕಿದ ಬಣ್ಣವನ್ನು ಗಟ್ಟಿಮಾಡು; ರಂಗು ಕಚ್ಚಿಸು; ರಂಗು ಕಳೆಯದಂತೆ ಮಾಡು.
    2. ಹೋಟೋ ತೆಗೆದು ತರುವಾಯ ಹಿಲಮು ಯಾ ಫಲಕದ ಮೇಲೆ ಕ್ರಿಯೆಗೊಳಗಾಗಿರದ ಬೆಳ್ಳಿ ಹ್ಯಾಲೈಡುಗಳನ್ನು ಸೂಕ್ತ ದ್ರಾವಣದಿಂದ ತೆಗೆದುಹಾಕಿ ಚಿತ್ರವನ್ನು ಕಾಯಂಗೊಳಿಸು.
  9. (ವ್ಯಕ್ತಿಯನ್ನು ನೋಟ ಮೊದಲಾದವುಗಳಿಂದ) ಗುರುತಿಸು: she fixed him with her bright eyes ಅವಳು ತನ್ನ ಹೊಳೆಯುವ ಕಣ್ಣುಗಳಿಂದ ಅವನನ್ನು ಗುರುತಿಸಿದಳು.
  10. ಸ್ಥಾಪಿಸು; ಅಂಟಿಸು; ನೆಲೆಗೊಳಿಸು; ಭದ್ರವಾಗಿ ಇರಿಸು: fixed his residence in the city ಅವನ ನಿವಾಸವನ್ನು ಪಟ್ಟಣದಲ್ಲಿ ಸ್ಥಾಪಿಸಿದನು. fixed a circus poster to a barn ಸರ್ಕಸ್ಸಿನ ಪೋಸ್ಟರನ್ನು ಕಣಜಕ್ಕೆ ಅಂಟಿಸಿದನು.
  11. (ಮನಸ್ಸಿನಲ್ಲಿ) ನೆಲೆಹಿಡಿ; ಗೊತ್ತಾದ ನೆಲೆಯನ್ನು ಹಿಡಿ, ನಿಲುವನ್ನು ತೆಗೆದುಕೊ: I am lost in astonishment and do not know where to fix ಆಶ್ಚರ್ಯದಲ್ಲಿ ನಾನು ಮುಳುಗಿ ಹೋಗಿರುವುದರಿಂದ ನನಗೆ ನೆಲೆಯೇ ಗೊತ್ತಾಗುವುದಿಲ್ಲ.
  12. ನಿಖರವಾದ ಸ್ಥಾನ ಗೊತ್ತುಮಾಡು; ಸರಿಯಾದ ಸ್ಥಾನನಿರ್ದೇಶ ಮಾಡು: wherever we fix a limit ನಾವು ಎಲ್ಲೆಲ್ಲಿ ಮಿತಿಯನ್ನು ಗೊತ್ತುಮಾಡಿದರೂ.
  13. (ವಸ್ತುವನ್ನು, ವ್ಯಕ್ತಿಯನ್ನು) ಗೊತ್ತಾದ ಸ್ಥಳ ಯಾ ಕಾಲದ್ದೆಂದು ನಿರ್ದೇಶಿಸು.
  14. (ದೇಣಿ ಮೊದಲಾದವುಗಳ) ಹೊರೆಯನ್ನು ಗೊತ್ತು ಮಾಡು.
  15. (ಬೆಲೆ, ತೇದಿ, ಸ್ಥಳ – ಇವನ್ನು) ಗೊತ್ತುಮಾಡು; ನಿರ್ಧರಿಸು; ನಿಗದಿಮಾಡು: fix the rent ಬಾಡಿಗೆಯನ್ನು ಗೊತ್ತುಮಾಡು. fix a date for the meeting ಸಭೆಗೆ ದಿನವನ್ನು ಗೊತ್ತುಮಾಡು.
  16. (ಭಾಷೆಯಲ್ಲಿ, ಸಾಹಿತ್ಯದಲ್ಲಿ) ಮಾರ್ಪಾಡುಗಳನ್ನು ತಡೆ ಯಾ ಬೆಳವಣಿಗೆಯನ್ನು ನಿಲ್ಲಿಸು, ನಿರೋಧಿಸು.
  17. ಸರಿಪಡಿಸು; ಸರಿಮಾಡು; ದುರಸ್ತುಮಾಡು; ರಿಪೇರಿಮಾಡು: fix a watch ವಾಚನ್ನು ರಿಪೇರಿ ಮಾಡು.
  18. ಏರ್ಪಾಡು ಮಾಡು; ವ್ಯವಸ್ಥೆ ಮಾಡು; ಸಿದ್ಧಗೊಳಿಸು; ಅಣಿಮಾಡು; fix your room ನಿನ್ನ ರೂಮನ್ನು ಅಣಿಮಾಡು.
  19. ತಯಾರಿಸು; ಒದಗಿಸು: mother will fix you something hot ತಾಯಿ ನಿನಗೆ ಏನಾದರೂ ಬಿಸಿಯಾದುದನ್ನು ತಯಾರಿಸುವಳು.
  20. ಸ್ಥಿರರೂಪ ಕೊಡು; ಖಾಯಂ ರೂಪ ಕೊಡು: Panini’s grammatical rules have fixed the Sanskrit language ಪಾಣಿನಿಯ ವ್ಯಾಕರಣ ಸೂತ್ರಗಳು ಸಂಸ್ಕೃತ ಭಾಷೆಗೆ ಸ್ಥಿರರೂಪ ಕೊಟ್ಟಿವೆ.
  21. (ಆವಶ್ಯಕವಾದುದನ್ನು) ಒದಗಿಸು: how are you fixed for money? ನಿನಗೆ ಆವಶ್ಯಕವಾದಷ್ಟು ಹಣವನ್ನು ಒದಗಿಸಿಕೊಂಡಿದ್ದೀಯಾ?
  22. (ಅಶಿಷ್ಟ) (ಯಾವುದೇ ವಿಷಯದಲ್ಲಿ ಅನುಕೂಲವಾಗುವಂತೆ ಮುಖ್ಯವಾಗಿ ಖಾಸಗಿಯಾಗಿ ಯಾ ಅಪ್ರಾಮಾಣಿಕವಾಗಿ) ವ್ಯವಹರಿಸು; ಸರಿಮಾಡಿಕೊ; ಸರಿಪಡಿಸಿಕೊ: fix a jury ನ್ಯಾಯದರ್ಶಿಗಳನ್ನು ಸರಿಮಾಡಿಕೊ.
  23. (ಮುಂದೆ ತೊಂದರೆ ಕೊಡದಂತೆ) ಒಂದು ಸ್ಥಿತಿಯಲ್ಲಿ ಯಾ ಸ್ಥಾನದಲ್ಲಿ ಇಡು.
  24. (ಅಶಿಷ್ಟ) ತಕ್ಕ ಶಾಸ್ತಿಮಾಡು; ಮುಯ್ಯಿ ತೀರಿಸು; ಸೇಡು ತೀರಿಸಿಕೊ: I’ll fix him ಅವನಿಗೆ ತಕ್ಕ ಶಾಸ್ತಿ ಮಾಡುತ್ತೇನೆ.
  25. (ಪ್ರಾಣಿಯ, ಮುಖ್ಯವಾಗಿ ಸಾಕುಪ್ರಾಣಿಯ) ಬೀಜವೊಡೆ; ಹಿಡಮಾಡು.
  26. ಸ್ಥಿರೀಕರಿಸು; (ಸಸ್ಯ, ಕೆಲವು ಬಗೆಯ ಬ್ಯಾಕ್ಟೀರಿಯ ಮೊದಲಾದವುಗಳ ವಿಷಯದಲ್ಲಿ, ಕಾರ್ಬನ್‍ ಡೈ ಆಕ್ಸೈಡ್‍ ಯಾ ನೈಟ್ರಜನ್‍ ಅನ್ನು) ಮೈಗೂಡಿಸಿಕೊ; ಅನಿಲ ಸ್ಥಿತಿಯಲ್ಲಿರುವುದನ್ನು ಘನ ಯಾ ದ್ರವ ಸ್ಥಿತಿಯಲ್ಲಿರುವ ಪದಾರ್ಥವಾಗಿ ಪರಿವರ್ತಿಸಿ ಹೀರಿಕೊ.
  27. (ಬಣ್ಣ, ಸೂಕ್ಷ್ಮದರ್ಶಕದ ಮಾದರಿ, ಛಾಯಾಚಿತ್ರದ ಬಿಂಬ, ಮೊದಲಾದವನ್ನು) ಸ್ಥಾಯಿಗೊಳಿಸು; ನೆಲೆಗೊಳಿಸು; ಸ್ಥಿರಗೊಳಿಸು; ಗಾಢವಾಗಿಸು.
  28. (ಅಶಿಷ್ಟ) (ವ್ಯಕ್ತಿಯನ್ನು) ಬಲಿಹಾಕು; ಮಟ್ಟಹಾಕು; ಸಾಯಿಸು.
  29. (ಮುಖ್ಯವಾಗಿ ಲಂಚ ಮೊದಲಾದವನ್ನು ಕೊಟ್ಟು) (ವ್ಯಕ್ತಿಯ) ಬೆಂಬಲ ಪಡೆ.
  30. (ಲಂಚ ಮೊದಲಾದ ಭ್ರಷ್ಟ ವಿಧಾನಗಳಿಂದ) ಪಂದ್ಯದ ಫಲಿತಾಂಶವನ್ನು ಏರ್ಪಾಡುಮಾಡು; ನಿರ್ಧರಿಸು.
  31. (ಅಶಿಷ್ಟ) ಮಾದಕ ವಸ್ತುವನ್ನು ಚುಚ್ಚು ಯಾ ಚುಚ್ಚಿಕೊ.
  32. (ಅಶಿಷ್ಟ) ಬಾಯಿಮುಚ್ಚಿಸು; ತುಟಿ ಬಿಚ್ಚದಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಸ್ಥಿರವಾಗು; ಭದ್ರಗೊಳ್ಳು; ನೆಲೆಗೊಳ್ಳು; ನಿಲ್ಲು; ದೃಢವಾಗು; ಬೇರೂರು.
  2. ನೋಟ, ಗಮನ – ತಿರುಗು, ಹೊರಳು: her eyes fixed sideways for an instant ಅವಳ ಕಣ್ಣುಗಳು ಒಂದು ಕ್ಷಣಕಾಲ ಅಕ್ಕಪಕ್ಕ ತಿರುಗಿದವು.
  3. ಅಲ್ಲಾಡದಂತಾಗು; ಸೆಟೆದುಕೊಳ್ಳು; ನಿಶ್ಚಲವಾಗು.
  4. ಘನೀಕೃತವಾಗು; ಗಡ್ಡೆಗಟ್ಟು; ಆವಿಯಾಗುವ ಯಾ ಹರಿಯುವ ಸ್ವಭಾವ ಕಳೆದುಕೊ.
  5. ಗೊತ್ತುಮಾಡು; ತೀರ್ಮಾನಿಸು; ನಿಶ್ಚಯಿಸು; ನಿರ್ಣಯಿಸು; ಆಯ್ಕೆಯನ್ನು ನಿರ್ಧರಿಸು: the night which he fixed upon for the carrying out of his plot ತನ್ನ ಸಂಚನ್ನು ನಡೆಸಲು ಅವನು ಗೊತ್ತುಮಾಡಿದ ರಾತ್ರಿ.
  6. ಮಾದಕ ವಸ್ತುವಿನ ಚುಚ್ಚುಮದ್ದನ್ನು ತೆಗೆದುಕೊ.
  7. (ಪ್ರಾಚೀನ ಪ್ರಯೋಗ) ನೆಲಸು; ನೆಲೆ ಸ್ಥಾಪಿಸು; ನೆಲೆಹೂಡು.
See also 1fix
2fix ಹಿಕ್ಸ್‍
ನಾಮವಾಚಕ
  1. (ಆಡುಮಾತು) ಇಕ್ಕಟ್ಟು; ಬಿಕ್ಕಟ್ಟು; ಪೇಚು; ಉಭಯಸಂಕಟ; ಪೀಕಲಾಟ; ಫಜೀತಿ: he found himself in an awful fix ಅವನು ವಿಪರೀತ ಇಕ್ಕಟ್ಟಿಗೆ ಸಿಕ್ಕಿಕೊಂಡ.
  2. (ಹಡಗು, ವಿಮಾನ ಮೊದಲಾದವುಗಳ ವಿಷಯದಲ್ಲಿ) (ನೆಲೆಯ) ನಿರ್ಧಾರ; ಖಾಗೋಳಿಕ ವೀಕ್ಷಣೆಗಳಿಂದ ಯಾ ನೆರೆಹೊರೆಯ ಪರಿಶೀಲನೆಯಿಂದ ತಾನಿರುವ ನೆಲೆಯನ್ನು ಗೊತ್ತುಪಡಿಸುವುದು ಯಾ ಹಾಗೆ ಗೊತ್ತುಪಡಿಸಿದ ಸ್ಥಾನ: radio fix ರೇಡಿಯೋ ನಿರ್ಧಾರ; ರೇಡಿಯೋ ಸಹಾಯದಿಂದ ನಿರ್ಧರಿಸಿದ ಸ್ಥಾನ.
  3. (ಅಶಿಷ್ಟ) (ಮಾದಕ ಸೇವನೆಯ ಚಾಳಿಯುಳ್ಳವನ) ಒಂದು ಸಾರಿಯ ಮದ್ದು ಸೇವನೆ.
  4. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಲಂಚಗಾರಿಕೆ.