See also 2find
1find ಹೈಂಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ found).
  1. (ಆಕಸ್ಮಿಕವಾಗಿ) ಕಾಣು; ಕಂಡುಕೊ; ಗೋಚರವಾಗು; ಗೋಚರಿಸು: was found dead ಸತ್ತಿದ್ದದ್ದು ಕಂಡುಬಂದಿತು. we find Gandhi saying ಗಾಂಧೀಜಿ (ಹೀಗೆ) ಹೇಳಿರುವುದನ್ನು ನಾವು ಕಾಣುತ್ತೇವೆ. found a treasure ಒಂದು ನಿಧಿ ಸಿಕ್ಕಿತು, ಗೋಚರಿಸಿತು.
  2. (ಅಶಿಷ್ಟ) ಕದಿ; ಕಳವುಮಾಡು; ಅಪಹರಿಸು.
  3. ಪಡೆ; ಹೊಂದು: find favour ಅನುಗ್ರಹ, ಅನುಕೂಲ – ಪಡೆ: find mercy ದಯೆಯನ್ನು ಪಡೆ.
  4. ತೋರು; ಅನಿಸು; ವ್ಯಕ್ತವಾಗು: I find no sense in it ನನಗೆ ಅದರಲ್ಲಿ ಏನೊಂದು ಅರ್ಥವೂ ತೋರುವುದಿಲ್ಲ. find the terms reasonable ಷರತ್ತುಗಳು ನ್ಯಾಯವೆಂದು ತೋರುತ್ತವೆ.
  5. ಕಂಡುಬರು; ತಿಳಿ; ಅರಿ; ಗೊತ್ತಾಗು; ಪತ್ತೆಯಾಗು: has been found wanting ಅವನಿಗೆ ಯೋಗ್ಯತೆ ಸಾಲದೆಂದು ಕಂಡುಬಂದಿದೆ. finds rest agreeable ಅವನಿಗೆ ವಿಶ್ರಾಂತಿ ಹಿತಕರವೆಂದು ಕಂಡುಬಂದಿದೆ. I find it pays ಅದು ಲಾಭಕರವೆಂದು ನನಗೆ ಗೊತ್ತಾಗಿದೆ. find it impossible ಅಸಾಧ್ಯವೆಂದು ತಿಳಿದು ಬರು.
  6. (ಹುಡುಕುವ, ಅನ್ವೇಷಿಸುವ ಯಾ ಪ್ರಯತ್ನದ ಮೂಲಕ) ಸಿಗು; ಪಡೆ; ದೊರೆ; ಲಭಿಸು.
  7. (ಬೇಟೆಯಲ್ಲಿ) ಮೃಗದ – ಸುಳಿವನ್ನು ಕಾಣು, ಗುರುತನ್ನು ನೋಡು.
  8. (ಹಣ, ಜಾಮೀನು, ಮೊದಲಾದವನ್ನು) ಪಡೆ; ಕಾಣು; ಕಂಡುಕೊ; ದೊರಕಿಸಿಕೊ: find courage to protest ಪ್ರತಿಭಟಿಸಲು ಧೈರ್ಯಪಡೆದುಕೊ.
  9. (ಪ್ರಾಚೀನ ಪ್ರಯೋಗ) ಮೆಚ್ಚಿಸು; ಆಕರ್ಷಿಸು; ಗಮನ ಸೆಳೆ; ಮನಸ್ಸಿಗೆ ಹಿಡಿಸು; ಮನಮುಟ್ಟು: the books that have found me ನನ್ನನ್ನು ಆಕರ್ಷಿಸಿದ ಪುಸ್ತಕಗಳು. the Gita is a book that finds us ಗೀತೆ ನಮ್ಮ ಮನಮುಟ್ಟುವಂಥ ಗ್ರಂಥ.
  10. (ಪರಿಶೀಲನೆ, ಅಧ್ಯಯನ, ಲೆಕ್ಕಾಚಾರ ಯಾ ವಿಚಾರಣೆಯ ಮೂಲಕ) ಖಚಿತಮಾಡಿಕೊ; ಕಂಡುಹಿಡಿ: find the sum of these numbers ಈ ಸಂಖ್ಯೆಗಳ ಮೊತ್ತ ಕಂಡುಹಿಡಿ. find whether there is an express train ಎಕ್ಸ್‍ಪ್ರೆಸ್‍ ರೈಲಿದೆಯೇ ಎಂಬುದನ್ನು ವಿಚಾರಿಸು (ವಿಚಾರಿಸಿ ತಿಳಿ).
  11. (ನ್ಯಾಯ, ನ್ಯಾಯದರ್ಶಿ, ಮೊದಲಾದವರ ವಿಷಯದಲ್ಲಿ ವಿಚಾರಣೆ ಮಾಡಿ) ತೀರ್ಪು ಕೊಡು; ತೀರ್ಮಾನ ಘೋಷಿಸು, ಪ್ರಕಟಿಸು; ನಿರ್ಣಯ ಹೇಳು: find a person guilty ಒಬ್ಬ ವ್ಯಕ್ತಿ ಅಪರಾಧಿಯೆಂದು ತೀರ್ಪುಕೊಡು.
  12. ಒದಗಿಸು; ಹವಣಿಸು; ಪೂರೈಸು: find a bed for one ಒಬ್ಬನಿಗೆ ಹಾಸಿಗೆ ಒದಗಿಸು. find money for the project ಯೋಜನೆಗೆ ಹಣ ಒದಗಿಸು.
  13. ಸಹಜ ಯಾ ಸ್ವಾಭಾವಿಕ ಕ್ರಮದಲ್ಲಿ ಕಂಡುಕೊ, ತಲುಪು, ಮುಟ್ಟು: water finds its own level ನೀರು ತನ್ನ ಮಟ್ಟವನ್ನು ಮುಟ್ಟುತ್ತದೆ. rivers find their way to the sea ನದಿಗಳು ಸಹಜವಾಗಿಯೇ ಸಮುದ್ರವನ್ನು ತಲುಪುತ್ತವೆ.
  14. ಕಂಡುಹಿಡಿ; ಪತ್ತೆ ಮಾಡು; ಪತ್ತೆ ಹಚ್ಚು: Columbus found America ಕೊಲಂಬಸ್‍ ಅಮೆರಿಕವನ್ನು ಕಂಡುಹಿಡಿದ.
  15. (ಕಳೆದುಹೋದುದನ್ನು) ಮತ್ತೆ ಪಡೆ: find the lost key ಕಳೆದುಹೋದ ಬೀಗದ ಕೈಯನ್ನು ಮತ್ತೆ ಪಡೆ.
  16. (ಬಳಕೆಯನ್ನು, ಉಪಯೋಗವನ್ನು) ಪಡೆ ಯಾ ಮತ್ತೆ ಪಡೆ; ಗಳಿಸು ಯಾ ಪುನಃ ಗಳಿಸು: find one’s voice ಮಾತಾಡುವ ಶಕ್ತಿಯನ್ನು ಪಡೆ ಯಾ ಮತ್ತೆ ಗಳಿಸು.
ಪದಗುಚ್ಛ
  1. find expression (ಶಬ್ದ ಮೊದಲಾದವುಗಳ ಮೂಲಕ) ಅಭಿವ್ಯಕ್ತಿ – ಹೊಂದು, ಪಡೆ.
  2. find fault ತಪ್ಪು ಹುಡುಕು; ಟೀಕಿಸು; ಆಕ್ಷೇಪಿಸು.
  3. find favour ಒಪ್ಪಿಗೆಯಾಗು; ಹಿಡಿಸು; ಸಮ್ಮತವಾಗು.
  4. find out
    1. ಕಂಡುಹಿಡಿ.
    2. ಸಮಸ್ಯೆ – ಬಿಡಿಸು, ಪರಿಹರಿಸು.
    3. (ಅಪರಾಧ ಮಾಡುತ್ತಿರುವಾಗ) ಹಿಡಿ; ಪತ್ತೆಹಚ್ಚು.
    4. ವ್ಯಕ್ತಿಯ ನಿಜವಾದ ಉದ್ದೇಶ, ಸ್ವಭಾವ, ಚಹರೆ – ಕಂಡುಹಿಡಿ, ಬಯಲಿಗೆಳೆ.
  5. find place ಸ್ಥಾನ ಪಡೆದುಕೊ, ಸಂಪಾದಿಸಿಕೊ.
  6. find vent (ಅಭಿವ್ಯಕ್ತಿಯ) ಮಾರ್ಗ ಕಂಡುಕೊ.
ನುಡಿಗಟ್ಟು
  1. all found (ಆಳುಗಳ ಸಂಬಳದ ವಿಷಯದಲ್ಲಿ) ಎಲ್ಲ ಕೊಟ್ಟು; ಆವಶ್ಯಕವಾದುದನ್ನೆಲ್ಲ – ಕೊಟ್ಟು, ಒದಗಿಸಿ, ಪೂರೈಸಿ: wanted a good cook, 250 Rs. a month and all found ಇನ್ನೂರೈವತ್ತು ರೂ ಸಂಬಳದ ಜೊತೆಗೆ ಊಟ, ತಿಂಡಿ, ವಸತಿ ಎಲ್ಲವನ್ನೂ ಒದಗಿಸಲಾಗುತ್ತದೆ, ಒಳ್ಳೆಯ ಅಡುಗೆಯವರು ಬೇಕು.
  2. find against (ಒಬ್ಬನ) ವಿರುದ್ಧವಾಗಿ ತೀರ್ಪುಕೊಡು; ದೋಷಿ ಎಂದು ತೀರ್ಮಾನಿಸು, ತೀರ್ಪುಕೊಡು.
  3. find for (ಒಬ್ಬನ) ಪರವಾಗಿ ತೀರ್ಪುಕೊಡು; ನಿರ್ದೋಷಿಯೆಂದು ತೀರ್ಮಾನಿಸು.
  4. find in ಪೂರೈಸು; ಒದಗಿಸು; ನೀಡು: they found him in clothes ಅವರು ಅವನಿಗೆ ಉಡುಪು ಒದಗಿಸಿದರು.
  5. find it in one’s $^1$heart.
  6. find its way (into) (ಯಾವುದೇ ವಸ್ತುವಿನ ವಿಷಯದಲ್ಲಿ) ಬರು ಯಾ ತರು.
  7. find oneself
    1. (ತನ್ನ ಶಕ್ತಿ, ಸಾಮರ್ಥ್ಯ ತಕ್ಕುದಾದುದನ್ನು) ಅರಿತುಕೊ; ಕಂಡುಕೊ; ತನ್ನ ಪ್ರತಿಭೆ, ಯೋಗ್ಯತೆ, ಶಕ್ತಿ, ಮೊದಲಾದವಕ್ಕೆ ತಕ್ಕ ವೃತ್ತಿ, ಕೆಲಸ ಅವಕಾಶ ಪಡೆ.
    2. ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊ.
  8. find one’s feet
    1. ನಡೆಯುವುದನ್ನು ಅರಿ, ಅಭ್ಯಾಸ ಮಾಡಿಕೊ.
    2. ತನ್ನ ಶಕ್ತಿಯನ್ನು ಅರಿತುಕೊ.
  9. find one’s way to (ಪ್ರಯಾಸಪಟ್ಟು, ಹಾಗೂ ಹೀಗೂ) ಬಂದು – ಮುಟ್ಟು, ಸೇರು, ತಲಪು.
  10. how do you find yourself? ನೀನು ಹೇಗಿದ್ದೀಯೆ?
  11. take us as you find us ನಾವು ಹೇಗಿದ್ದೇವೆಯೋ ಹಾಗೆ ಯಥಾವತ್ತಾಗಿ ತಿಳಿದುಕೊಳ್ಳಿ.
See also 1find
2find ಹೈಂಡ್‍
ನಾಮವಾಚಕ
  1. (ನರಿಯನ್ನು) ಪತ್ತೆ ಮಾಡುವುದು.
  2. (ನಿಧಿ, ಖನಿಜ, ಮೊದಲಾದವನ್ನು) ಕಂಡುಹಿಡಿಯುವುದು.
  3. ಕಂಡುಹಿಡಿದದ್ದು; ಅನ್ವೇಷಣೆಯಿಂದ ಪಡೆದದ್ದು, ದೊರೆತದ್ದು; ಅಕಸ್ಮಾತ್ತಾಗಿ ಸಿಕ್ಕಿದ ಬೆಲೆಯುಳ್ಳ ಪದಾರ್ಥ ಯಾ ವ್ಯಕ್ತಿ: the young actress was the theatrical find of the year ಈ ತರುಣ ನಟಿ ಈ ವರ್ಷ ರಂಗಭೂಮಿಗೆ ದೊರೆತ ಲಾಭ. I made a great find in a second hand bookshop ನಾನು ಒಂದು ಹಳೆಯ ಪುಸ್ತಕದ ಅಂಗಡಿಯಲ್ಲಿ ಅಪರೂಪವಾದ ಯಾ ಅಮೂಲ್ಯವಾದ ಒಂದು ಪುಸ್ತಕ ಪಡೆದೆ.
ಪದಗುಚ್ಛ

sure find ಗೊತ್ತು; ಖಾತರಿ ಸ್ಥಳ; ಗೊತ್ತಾದ ಯಾವುದಾದರೂ ವಸ್ತು (ಮುಖ್ಯವಾಗಿ ನರಿ) ಖಂಡಿತ ದೊರೆಯುವ ಸ್ಥಳ.