1find
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ found).
- (ಆಕಸ್ಮಿಕವಾಗಿ) ಕಾಣು; ಕಂಡುಕೊ; ಗೋಚರವಾಗು; ಗೋಚರಿಸು: was found dead ಸತ್ತಿದ್ದದ್ದು ಕಂಡುಬಂದಿತು. we find Gandhi saying ಗಾಂಧೀಜಿ (ಹೀಗೆ) ಹೇಳಿರುವುದನ್ನು ನಾವು ಕಾಣುತ್ತೇವೆ. found a treasure ಒಂದು ನಿಧಿ ಸಿಕ್ಕಿತು, ಗೋಚರಿಸಿತು.
- (ಅಶಿಷ್ಟ) ಕದಿ; ಕಳವುಮಾಡು; ಅಪಹರಿಸು.
- ಪಡೆ; ಹೊಂದು: find favour ಅನುಗ್ರಹ, ಅನುಕೂಲ – ಪಡೆ: find mercy ದಯೆಯನ್ನು ಪಡೆ.
- ತೋರು; ಅನಿಸು; ವ್ಯಕ್ತವಾಗು: I find no sense in it ನನಗೆ ಅದರಲ್ಲಿ ಏನೊಂದು ಅರ್ಥವೂ ತೋರುವುದಿಲ್ಲ. find the terms reasonable ಷರತ್ತುಗಳು ನ್ಯಾಯವೆಂದು ತೋರುತ್ತವೆ.
- ಕಂಡುಬರು; ತಿಳಿ; ಅರಿ; ಗೊತ್ತಾಗು; ಪತ್ತೆಯಾಗು: has been found wanting ಅವನಿಗೆ ಯೋಗ್ಯತೆ ಸಾಲದೆಂದು ಕಂಡುಬಂದಿದೆ. finds rest agreeable ಅವನಿಗೆ ವಿಶ್ರಾಂತಿ ಹಿತಕರವೆಂದು ಕಂಡುಬಂದಿದೆ. I find it pays ಅದು ಲಾಭಕರವೆಂದು ನನಗೆ ಗೊತ್ತಾಗಿದೆ. find it impossible ಅಸಾಧ್ಯವೆಂದು ತಿಳಿದು ಬರು.
- (ಹುಡುಕುವ, ಅನ್ವೇಷಿಸುವ ಯಾ ಪ್ರಯತ್ನದ ಮೂಲಕ) ಸಿಗು; ಪಡೆ; ದೊರೆ; ಲಭಿಸು.
- (ಬೇಟೆಯಲ್ಲಿ) ಮೃಗದ – ಸುಳಿವನ್ನು ಕಾಣು, ಗುರುತನ್ನು ನೋಡು.
- (ಹಣ, ಜಾಮೀನು, ಮೊದಲಾದವನ್ನು) ಪಡೆ; ಕಾಣು; ಕಂಡುಕೊ; ದೊರಕಿಸಿಕೊ: find courage to protest ಪ್ರತಿಭಟಿಸಲು ಧೈರ್ಯಪಡೆದುಕೊ.
- (ಪ್ರಾಚೀನ ಪ್ರಯೋಗ) ಮೆಚ್ಚಿಸು; ಆಕರ್ಷಿಸು; ಗಮನ ಸೆಳೆ; ಮನಸ್ಸಿಗೆ ಹಿಡಿಸು; ಮನಮುಟ್ಟು: the books that have found me ನನ್ನನ್ನು ಆಕರ್ಷಿಸಿದ ಪುಸ್ತಕಗಳು. the Gita is a book that finds us ಗೀತೆ ನಮ್ಮ ಮನಮುಟ್ಟುವಂಥ ಗ್ರಂಥ.
- (ಪರಿಶೀಲನೆ, ಅಧ್ಯಯನ, ಲೆಕ್ಕಾಚಾರ ಯಾ ವಿಚಾರಣೆಯ ಮೂಲಕ) ಖಚಿತಮಾಡಿಕೊ; ಕಂಡುಹಿಡಿ: find the sum of these numbers ಈ ಸಂಖ್ಯೆಗಳ ಮೊತ್ತ ಕಂಡುಹಿಡಿ. find whether there is an express train ಎಕ್ಸ್ಪ್ರೆಸ್ ರೈಲಿದೆಯೇ ಎಂಬುದನ್ನು ವಿಚಾರಿಸು (ವಿಚಾರಿಸಿ ತಿಳಿ).
- (ನ್ಯಾಯ, ನ್ಯಾಯದರ್ಶಿ, ಮೊದಲಾದವರ ವಿಷಯದಲ್ಲಿ ವಿಚಾರಣೆ ಮಾಡಿ) ತೀರ್ಪು ಕೊಡು; ತೀರ್ಮಾನ ಘೋಷಿಸು, ಪ್ರಕಟಿಸು; ನಿರ್ಣಯ ಹೇಳು: find a person guilty ಒಬ್ಬ ವ್ಯಕ್ತಿ ಅಪರಾಧಿಯೆಂದು ತೀರ್ಪುಕೊಡು.
- ಒದಗಿಸು; ಹವಣಿಸು; ಪೂರೈಸು: find a bed for one ಒಬ್ಬನಿಗೆ ಹಾಸಿಗೆ ಒದಗಿಸು. find money for the project ಯೋಜನೆಗೆ ಹಣ ಒದಗಿಸು.
- ಸಹಜ ಯಾ ಸ್ವಾಭಾವಿಕ ಕ್ರಮದಲ್ಲಿ ಕಂಡುಕೊ, ತಲುಪು, ಮುಟ್ಟು: water finds its own level ನೀರು ತನ್ನ ಮಟ್ಟವನ್ನು ಮುಟ್ಟುತ್ತದೆ. rivers find their way to the sea ನದಿಗಳು ಸಹಜವಾಗಿಯೇ ಸಮುದ್ರವನ್ನು ತಲುಪುತ್ತವೆ.
- ಕಂಡುಹಿಡಿ; ಪತ್ತೆ ಮಾಡು; ಪತ್ತೆ ಹಚ್ಚು: Columbus found America ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದ.
- (ಕಳೆದುಹೋದುದನ್ನು) ಮತ್ತೆ ಪಡೆ: find the lost key ಕಳೆದುಹೋದ ಬೀಗದ ಕೈಯನ್ನು ಮತ್ತೆ ಪಡೆ.
- (ಬಳಕೆಯನ್ನು, ಉಪಯೋಗವನ್ನು) ಪಡೆ ಯಾ ಮತ್ತೆ ಪಡೆ; ಗಳಿಸು ಯಾ ಪುನಃ ಗಳಿಸು: find one’s voice ಮಾತಾಡುವ ಶಕ್ತಿಯನ್ನು ಪಡೆ ಯಾ ಮತ್ತೆ ಗಳಿಸು.
ಪದಗುಚ್ಛ
- find expression (ಶಬ್ದ ಮೊದಲಾದವುಗಳ ಮೂಲಕ) ಅಭಿವ್ಯಕ್ತಿ – ಹೊಂದು, ಪಡೆ.
- find fault ತಪ್ಪು ಹುಡುಕು; ಟೀಕಿಸು; ಆಕ್ಷೇಪಿಸು.
- find favour ಒಪ್ಪಿಗೆಯಾಗು; ಹಿಡಿಸು; ಸಮ್ಮತವಾಗು.
- find out
- ಕಂಡುಹಿಡಿ.
- ಸಮಸ್ಯೆ – ಬಿಡಿಸು, ಪರಿಹರಿಸು.
- (ಅಪರಾಧ ಮಾಡುತ್ತಿರುವಾಗ) ಹಿಡಿ; ಪತ್ತೆಹಚ್ಚು.
- ವ್ಯಕ್ತಿಯ ನಿಜವಾದ ಉದ್ದೇಶ, ಸ್ವಭಾವ, ಚಹರೆ – ಕಂಡುಹಿಡಿ, ಬಯಲಿಗೆಳೆ.
- find place ಸ್ಥಾನ ಪಡೆದುಕೊ, ಸಂಪಾದಿಸಿಕೊ.
- find vent (ಅಭಿವ್ಯಕ್ತಿಯ) ಮಾರ್ಗ ಕಂಡುಕೊ.
ನುಡಿಗಟ್ಟು
- all found (ಆಳುಗಳ ಸಂಬಳದ ವಿಷಯದಲ್ಲಿ) ಎಲ್ಲ ಕೊಟ್ಟು; ಆವಶ್ಯಕವಾದುದನ್ನೆಲ್ಲ – ಕೊಟ್ಟು, ಒದಗಿಸಿ, ಪೂರೈಸಿ: wanted a good cook, 250 Rs. a month and all found ಇನ್ನೂರೈವತ್ತು ರೂ ಸಂಬಳದ ಜೊತೆಗೆ ಊಟ, ತಿಂಡಿ, ವಸತಿ ಎಲ್ಲವನ್ನೂ ಒದಗಿಸಲಾಗುತ್ತದೆ, ಒಳ್ಳೆಯ ಅಡುಗೆಯವರು ಬೇಕು.
- find against (ಒಬ್ಬನ) ವಿರುದ್ಧವಾಗಿ ತೀರ್ಪುಕೊಡು; ದೋಷಿ ಎಂದು ತೀರ್ಮಾನಿಸು, ತೀರ್ಪುಕೊಡು.
- find for (ಒಬ್ಬನ) ಪರವಾಗಿ ತೀರ್ಪುಕೊಡು; ನಿರ್ದೋಷಿಯೆಂದು ತೀರ್ಮಾನಿಸು.
- find in ಪೂರೈಸು; ಒದಗಿಸು; ನೀಡು: they found him in clothes ಅವರು ಅವನಿಗೆ ಉಡುಪು ಒದಗಿಸಿದರು.
- find it in one’s $^1$heart.
- find its way (into) (ಯಾವುದೇ ವಸ್ತುವಿನ ವಿಷಯದಲ್ಲಿ) ಬರು ಯಾ ತರು.
- find oneself
- (ತನ್ನ ಶಕ್ತಿ, ಸಾಮರ್ಥ್ಯ ತಕ್ಕುದಾದುದನ್ನು) ಅರಿತುಕೊ; ಕಂಡುಕೊ; ತನ್ನ ಪ್ರತಿಭೆ, ಯೋಗ್ಯತೆ, ಶಕ್ತಿ, ಮೊದಲಾದವಕ್ಕೆ ತಕ್ಕ ವೃತ್ತಿ, ಕೆಲಸ ಅವಕಾಶ ಪಡೆ.
- ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊ.
- find one’s feet
- ನಡೆಯುವುದನ್ನು ಅರಿ, ಅಭ್ಯಾಸ ಮಾಡಿಕೊ.
- ತನ್ನ ಶಕ್ತಿಯನ್ನು ಅರಿತುಕೊ.
- find one’s way to (ಪ್ರಯಾಸಪಟ್ಟು, ಹಾಗೂ ಹೀಗೂ) ಬಂದು – ಮುಟ್ಟು, ಸೇರು, ತಲಪು.
- how do you find yourself? ನೀನು ಹೇಗಿದ್ದೀಯೆ?
- take us as you find us ನಾವು ಹೇಗಿದ್ದೇವೆಯೋ ಹಾಗೆ ಯಥಾವತ್ತಾಗಿ ತಿಳಿದುಕೊಳ್ಳಿ.