See also 2fifty
1fifty ಹಿಹ್ಟಿ
ಗುಣವಾಚಕ
  1. ಐವತ್ತು.
  2. ಅನೇಕ; ಬಹಳ; ತುಂಬ. have fifty things to tell you ಬಹಳ ವಿಷಯಗಳನ್ನು ನಿನಗೆ ಹೇಳಬೇಕಾಗಿದೆ.
See also 1fifty
2fifty ಹಿಹ್ಟಿ
ನಾಮವಾಚಕ
  1. ಐವತ್ತು.
  2. ಐವತ್ತನ್ನು ಸೂಚಿಸುವ ಚಿಹ್ನೆ, ಸಂಕೇತ (50, l, L).
  3. (ಜನರ ವಿಷಯದಲ್ಲಿ) ಐವತ್ತರ ತಂಡ; (ವಸ್ತುಗಳ ವಿಷಯದಲ್ಲಿ) ಐವತ್ತರ ಕಟ್ಟು; ಐವತ್ತರ ಪಿಂಡಿ: he hid them by fifties in a cave ಅವನು ಅವುಗಳನ್ನು ಐವತ್ತು ಐವತ್ತರಂತೆ ಗವಿಯಲ್ಲಿ ಬಚ್ಚಿಟ್ಟನು.
ಪದಗುಚ್ಛ
  1. the fifties ಐವತ್ತರ ದಶಕ:
    1. ಜೀವನದ ಯಾ ಶತಮಾನದ 50 ರಿಂದ 60ರ ಹಂತದ ವರ್ಷಗಳು. a man in his fifties ಐವತ್ತರ ವರ್ಷಗಳಲ್ಲಿರುವ ಮನುಷ್ಯ: 50 ರಿಂದ 60 ವರ್ಷದ ಒಳಗಿರುವ ವಯಸ್ಸಿನ ವ್ಯಕ್ತಿ.
    2. (ವಯಸ್ಸು, ಕಾಲ, ಉಷ್ಣಾಂಶ, ಮೊದಲಾದವುಗಳ ಎಣಿಕೆಯಲ್ಲಿ) 50 ರಿಂದ 60ರೊಳಗಿನ ಶ್ರೇಣಿಯ ಭಾಗ: temperatures in the fifties 50-60ರ ಶ್ರೇಣಿಯೊಳಗಿನ ಉಷ್ಣಾಂಶಗಳು.
  2. fifty–one etc. ಐವತ್ತೊಂದು ಇತ್ಯಾದಿ.
  3. one-and-fifty etc. ಐವತ್ತೊಂದು ಇತ್ಯಾದಿ.
  4. fifty-first etc. ಐವತ್ತೊಂದನೆಯ ಇತ್ಯಾದಿ.